
ನಗರದಲ್ಲಿ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಕೆಎಂಸಿಆರ್ ಐ ಆಸ್ಪತ್ರೆಯ ನಿರ್ದೇಶಕರಾಗಿದ್ದ ಡಾ. ಈಶ್ವರ ಹೊಸಮನಿ ಅವರು ಸೇವಾ ನಿವೃತ್ತಿ ಹೊಂದಿದ ಹಿನ್ನಲೆ ಸೇವಾ ನಿವೃತ್ತಿ ಬೀಳ್ಕೊಡುವ ಸಮಾರಂಭ ಮತ್ತು ಅಭಿನಂದನಾ ಸಮಾರಂಭ ಆಯೋಜಿಸಿದ ಸಂದರ್ಭದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಸ್ವಾಭಿಮಾನ ದಲಿತ ಸಂಘರ್ಷ ರಾಜ್ಯ ಸಮಿತಿ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಚಲವಾದಿ ಬಲಗೈ ಸಮುದಾಯಗಳ ಒಕ್ಕೂಟದ ಮುಖಂಡರಾದ ಚಂದ್ರಶೇಖರ ಯಾತಗೇರಿ ಅವರು ಸನ್ಮಾನಿಸಿ ಗೌರವಿಸಿದರು. ಈ ವೇಳೆ ಕೆಎಂಸಿಆರ್ ಐ ಆಸ್ಪತ್ರೆಯ ನೌಕರರ ಸಂಘದ ಅಧ್ಯಕ್ಷ ಕಾಶಿನಾಥ ಚಲವಾದಿ, ಗುರುನಾಥ ಚಲವಾದಿ, ಮಂಜುನಾಥ ದೇವದುರ್ಗ, ಶಿವಪ್ಪ ಚಲವಾದಿ ಸೇರಿದಂತೆ ಮೊದಲಾದವರು ಉಪಸ್ಥಿತಿ ಇದ್ದರು.

























