ರಾಜೀವ್ ಗಾಂಧಿ ವಿಶ್ವ ವಿದ್ಯಾಲಯದ ಸೆನೆಟ್ ಸದಸ್ಯರೂ, ಮಹಾಲಕ್ಷ್ಮೀ ಲೇಔಟ್ ಬಿಜೆಪಿ ಯುವಮೋರ್ಚಾ ಮಂಡಲ ಅಧ್ಯಕ್ಷರೂ ಆಗಿರುವ ಡಾ|| ಜಿ ಮಂಜುನಾಥ್ ಗೌಡರವರ ಜನ್ಮ ದಿನಾಚರಣೆಯನ್ನು ಶಾಸಕರ ಗೃಹ ಕಛೇರಿಯಲ್ಲಿ ಆಚರಿಸಲಾಯಿತು. ಶಾಸಕರಾದ ಕೆ.ಗೋಪಾಲಯ್ಯರವರು, ಬಿಬಿಎಂಪಿ ಮಾಜಿ ಉಪಮಹಾಪೌರರಾದ ಶ್ರೀಮತಿ ಹೇಮಲತಾ ಗೋಪಾಲಯ್ಯರವರು ಡಾ|| ಜಿ. ಸಂಜಯಗೌಡರವರು ಕುಟುಂಬ ವರ್ಗದವರು, ಬಿಜೆಪಿ ಪ್ರಮುಖ ನಾಯಕರು, ಸ್ನೇಹಿತರು, ಅಭಿಮಾನಿಗಳು ಈ ಸಮಾರಂಭದಲ್ಲಿ ಪಾಲ್ಗೊಂಡು ಹುಟ್ಟು ಹಬ್ಬವನ್ನು ಸಂಭ್ರಮಿಸಿ ಶುಭ ಹಾರೈಸಿದರು.