Home ಜಿಲ್ಲೆ ನೂತನ ಸಿಎಂ ಡಿಕೆಶಿ ಗೆ ಶುಭ ಕೋರಿ-ಹಂಪಿಯಲ್ಲಿ ವಿಶೇಷ ಪೂಜೆ

ನೂತನ ಸಿಎಂ ಡಿಕೆಶಿ ಗೆ ಶುಭ ಕೋರಿ-ಹಂಪಿಯಲ್ಲಿ ವಿಶೇಷ ಪೂಜೆ

ಸಂಜೆವಾಣಿ ವಾರ್ತೆ

ಹೊಸಪೇಟೆ.ಜೂ.1 ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಜೂ.3 ರಂದು ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನಲೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಂಪಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಶುಭವಾಗಲಿ ಎಂದು ಪ್ರಾರ್ಥಿಸಿ, ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ಶ್ರೀವಿರೂಪಾಕ್ಷೇಶ್ವರ ಸ್ವಾಮಿಗೆ ಅಭಿಷೇಕ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯುವ ಕಾಂಗ್ರೇಸ್ ಮುಖಂಡ ಭರತ್ ಕುಮಾರ್ ಸಿ.ಆರ್, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಳೆದ 3 ವರ್ಷಗಳಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜನರಿಗೆ ನೀಡುವ ಮೂಲಕ  ಅನೇಕ ಅಭಿವೃದ್ದಿ ಕಆರ್ಯಗಳನ್ನು ಮಾಡಿದೆ.  ಅದೇ ನಿಟ್ಟಿನಲ್ಲಿ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಮುಂದಿನ 2 ವರ್ಷಗಳ ಕಾಲ ಜನಪರ ಕಾರ್ಯಕ್ರಮಗಳನ್ನು ಜನತೆಗೆ ನೀಡಲಿ. ಡಿಕೆಶಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ರಾಜ್ಯದ ಜನತೆಗೆ ನೂತನ ಸರ್ಕಾರದಿಂದ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ, ಶ್ರೀವಿರೂಪಾಕ್ಷೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿರುವುದಾಗಿ ತಿಳಿಸಿದರು.

ಮುಖಂಡ ದಾದಾ ಖಲಂದರ್ ಮಾತಾಡಿ, ನೂತನ ಸಿಎಂ ಡಿಕೆಶಿ ಆಧಿಕಾರವಧಿಯಲ್ಲಿ  ರಾಜ್ಯದಲ್ಲಿ ಉತ್ತಮವಾದ ಮಳೆ, ಬೆಳೆ ಆಗಲಿ, ರಾಜ್ಯದ ಜನತೆ ಸಮೃದ್ಧಿಯಿಂದ ಇರಲಿ. 2028 ರಲ್ಲಿ ಕೂಡ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರುವಂತಾಗಲಿ ಎಂದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಮಂಜುನಾಥ್, ಗೌಸ್, ಮುಖಂಡರಾದ ವೆಂಕಟೇಶ್, ಹುಲುಗಪ್ಪ, ಶೇಖರ್, ಯುವ ಮುಖಂಡರಾದ ರಾಜು ಗುಜ್ಜಲ್, ಮಹಮ್ಮದ್ ಸುಹೇಲ್, ಆಕಾಶ್, ನವೀನ್ ಕುಮಾರ್, ಸೇರಿದಂತೆ ಯುವ ಕಾಂಗ್ರೆಸ್ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಅಭಿಮಾನಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.