
ಕಲಬುರಗಿ: ಭಾರತೀಯ ಜನತಾ ಪಾರ್ಟಿ- ಕಲಬುರಗಿ ಜಿಲ್ಲೆ ಆಳಂದ ರಾಘವ ಚೈತನ್ಯ ಶ್ರೀಶಿವಲಿಂಗ ದೇವಸ್ಥಾನದಲ್ಲಿ ನಡೆದ ಅಹಿತರ ಘಟನೆಗೆ ಕಾರಣಿಕರ್ತರಾದ ಹಿಂದು ವಿರೋಧಿಗಳ ಮೇಲಿನ ಗಲಭೆ ಪ್ರಕರಣ ಹಿಂಪಡೆದ ರಾಜ್ಯ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಧೋರಣೆಯನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಬೃಹತ ಪ್ರತಿಭಟನೆ ಕೈಗೊಳ್ಳಲಾಯಿತು. ಸುಭಾಷ ಗುತ್ತೇದಾರ, ಶಶೀಲ ನಮೋಶಿ, ರಾಜುಕುಮಾರ ತೇಲ್ಕರ, ಬಿ.ಜಿ ಪಾಟೀಲ, ಅಮರನಾಥ ಪಾಟೀಲ, ಉಮೇಶ ಜಾಧವ, ಬಸವರಾಜ ಮತ್ತಿಮುಡು ಸೇರಿದಂತೆ ಪಕ್ಷದ ಧುರಿಣರು, ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

























