
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜೂ,1- ಆರ್. ಧರ್ಮಸೇನ ಇವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಮುಂದಿನ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆ ಮಂತ್ರಿ ಮಾಡಲು ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಯ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಉಪಾಧ್ಯಕ್ಷ ಕಂದುಕುರು ರಾಮುಡು ಕಾಂಗ್ರೆಸ್ ಹೈ ಕಮಾಂಡಿಗೆ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಧರ್ಮಸೇನ ರವರು ಟಿ ನರಸೀಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ 11 ವರ್ಷ 7 ತಿಂಗಳು ಕೆಲಸ ನಿರ್ವಹಿಸಿದ್ದು ನಂತರ 2ಬಾರಿ ವಿಧಾನ ಪರಿಷತ್ ಸದಸ್ಯರಾಗಿ 8 ವರ್ಷ 5 ತಿಂಗಳು ಶಾಸಕರಾಗಿ ಕೆಲಸ ನಿರ್ವಹಿಸಿರುತ್ತಾರೆ. ಮತ್ತು ನಿಗಮ ಮಂಡಳಿಗಳ ನಿರ್ದೇಶಕರಾಗಿ, ವಿಧಾನ ಮಂಡಳದ ಸದನ ಸಮಿತಿ ಸದಸ್ಯವಾಗಿ ಕೆಲಸ ಮಾಡಿ 40 ವರ್ಷಗಳಷ್ಟು ರಾಜಕೀಯ ಮತ್ತು ಆಡಳಿತದ ಸೇವೆಯನ್ನು ಕಾಂಗ್ರೆಸ್ ಪಕ್ಷದಲ್ಲಿ ಸಲ್ಲಿಸಿ ಅನುಭವಿಗಳಾಗಿದ್ದಾರೆ.
ಪ್ರಸ್ತುತ ಕೆ.ಪಿ.ಸಿ.ಸಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾಗಿ 4 ವರ್ಷದಿಂದ ಕಾರಗಯನಿರ್ವಹಿಸುತ್ತಿದ್ದಾರೆ ಮತ್ತು ಎ.ಐ.ಸಿ.ಸಿ ಪರಿಶಿಷ್ಟ ಜಾತಿ ವಿಭಾಗದ ರಾಷ್ಟ್ರೀಯ ಸಂಯೋಜಕರಾಗಿ ಕೇರಳಂನ ಉಸ್ತುವಾರಿಯಾಗಿದ್ದಾರೆ. .
ಇವರ ತಂದೆ ಎನ್. ರಾಚಯ್ಯನವರು 1952ರಲ್ಲಿ ಭಾರತದ ಮೊದಲ ಸಂಸತ್ ಸದಸ್ಯರಾಗಿ 1957ರಲ್ಲಿ ಹೆಚ್.ಡಿ ಕೋಟೆ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಮಂತ್ರಿಯಾಗಿ ನಂತರ 1973ರಲ್ಲೂ ಮಂತ್ರಿಯಾಗಿ ಎಲ್ಲಾ ಜಾತಿಯ ಬಡವರ ಮತ್ತು ದಲಿತರ ಕಲ್ಯಾಣಕ್ಕಾಗಿ ಶಕ್ತಿಮೀರಿ ದುಡಿದಿರುತ್ತಾರೆ.
ಮೈಸೂರು ವಿಭಾಗದಲ್ಲಿ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಎಡ ಸಮುದಾಯದವರು ಯಾವವೊಬ್ಬ ವಿಧಾನಸಭಾ ಸದಸ್ಯರಿಲ್ಲ.
ದಲಿತ ಸಮುದಾಯದಲ್ಲಿ ಅತ್ಯಂತ ತಳಸಮುದಾಯಕ್ಕೆ ಸೇರಿದ ಆದಿಜಾಂಬವ ಎಡಗೈ ಸಮಾಜದಲ್ಲಿ ಮೈಸೂರು ಭಾಗದಲ್ಲಿ ನಾಯಕತ್ವದ ಕೊರತೆ ಇದ್ದು ಆರ್ ಧರ್ಮಸೇನ ಇವರಿಗೆ ಎಂ.ಎಲ್.ಸಿ ಮಾಡಿ ಮಂತ್ರಿ ಮಾಡುವುದರಿಂದ ತಳ ಸಮುದಾಯಕ್ಕೆ ನ್ಯಾಯದೊರೆಯಲಿದೆ ಎಂದಿದ್ದಾರೆ. ಕಂದುಕುರು ರಾಮುಡು ಅವರು.

























