Home ಜಿಲ್ಲೆ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ

ಕ್ಲಸ್ಟರ್ ಮಟ್ಟದ ಕ್ರೀಡಾಕೂಟ


ಲಕ್ಷೆ÷್ಮÃಶ್ವರ,ಸೆ.೧೮: ದೊಡ್ಡೋರು ರಸ್ತೆಯಲ್ಲಿರುವ ಎಂಜಿಎA ಯೂನಿವರ್ಸಲ್ ಸ್ಕೂಲ್ನಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಾಲಯ ಹಾಗೂ ಯುನಿವರ್ಸಲ್ ಸ್ಕೂಲ್ ಇವರುಗಳ ಸಹಯೋಗದಲ್ಲಿ ಸನ್ ೨೦೨೬ ೨೭ ನೇ ಸಾಲಿನ ಲಕ್ಷೆ÷್ಮÃಶ್ವರ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಗಳು ಜರುಗಿದವು.
ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಸಮನ್ವಯಾಧಿಕಾರಿ ಎನ್ಕೆ ಹವಾಲ್ದಾರ್ ಅವರು ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಉತ್ತಮ ಆರೋಗ್ಯಕ್ಕಾಗಿ ಮತ್ತು ಮನಸ್ಸಿಗಾಗಿ ಕ್ರೀಡೆಗಳು ಬೇಕು ಸದೃಢ ಯುವಕರು ಈ ದೇಶದ ಸಂಪತ್ತು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು ಸೋಲು ಮತ್ತು ಗೆಲುವು ಎರಡನ್ನು ಸ್ವೀಕಾರ ಮಾಡಬೇಕು ಎಂದು ಹೇಳಿದರು.


ಅಧ್ಯಕ್ಷತೆಯನ್ನು ಎಂಜಿಎA ಸ್ಕೂಲಿನ ಸಲಹಾ ಮಂಡಳಿ ಸದಸ್ಯ ರಮೇಶನವಲೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಂಎನ್ ಕಾಳೆ ಶಿವಾನಂದ ಅಸುಂಡಿ ನಜೀರ್ ಅಹ್ಮದ್ ಮುಲ್ಲಾ ಶ್ರೀನಿವಾಸ್ ಮತ್ತೂರ ಪ್ರಾಚಾರ್ಯ ಪುರುಷೋತ್ತಮ್ ನಾಯಕ್ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.