Home ಜಿಲ್ಲೆ ಶ್ರೀ ನುಲಿಯ ಚಂದಯ್ಯನವರ ಜಯಂತಿ ಆಚರಣೆ

ಶ್ರೀ ನುಲಿಯ ಚಂದಯ್ಯನವರ ಜಯಂತಿ ಆಚರಣೆ


ಲಕ್ಷೆ÷್ಮÃಶ್ವರ,ಆ.೨೯: ಕಾಯಕನಿಷ್ಠ ಯೋಗಿ ಶಿವಶರಣ ನೂಲಿಯ ಚಂದಯ್ಯನವರು ಶ್ರೇಷ್ಠ ವಚನಕಾರರು. ತಮ್ಮ ವಚನಗಳ ಮೂಲಕ ಕಾಯಕದ ಮಹತ್ವ ಸಾರಿದ್ದಾರೆ’ ಎಂದು ಕರೆವಾಡಿಮಠದ ಮಳೆ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.


ಅವರು ಪಟ್ಟಣದ ಹಿರೇಬಣದ ಭಜಂತ್ರಿ ಓಣಿಯಲ್ಲಿ ಶ್ರೀ ನೂಲಿ ಚಂದಯ್ಯ ಜಯಂತಿ ಹಾಗೂ ನೂಲಿ ಚಂದಯ್ಯ ಕೊರವರ ಸಮಾಜ ಸಂಘ ಉದ್ಘಾಟನೆ ಹಾಗೂ ಸಮಾಜದ ಪ್ರತಿಬಾವಂತರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಾನಿದ್ಯ ವಹಿಸಿ ಅಶ್ರಿವಚನ ನೀಡುತ್ತಾ


ಕಾಯಕ ಹಾಗೂ ದಾಸೋಹದ ಮೂಲಕ ಸಮಾಜಕ್ಕೆ ಬೆಳಕು ನೀಡಿದವರಲ್ಲಿ ನುಲಿಯ ಚಂದಯ್ಯರೂ ಒಬ್ಬರಾಗಿದ್ದಾರೆ. ಅವರು ಸುಮಾರು ೪೮ ವಚನಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.


ಸAಘವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ನೂಲಿ ಚಂದಯ್ಯನವರ ಕಾಯಕ ದಾಸೋಹ ನಂಬಿಕೆ ಇಟ್ಟವರು, ಸಣ್ಣ ಸಮಾಜವಾಗಿದ್ದು ಸಮಾಜದವರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವಲ್ಲಿ ಮುಂದೆ ಬರಬೇಕು ಜನಾಂಗವು ಕಾಯಕದಲ್ಲಿ ಬಹಳ ನಿಷ್ಠೆ ಹೊಂದಿರುವ ಸಮಾಜ ಶಿಕ್ಷಣದಿಂದ ಸಮಾಜವನ್ನು ಗಟ್ಟಿಯಾಗಿ ಬೆಳೆಸಬಹುದು ಎಂದು ಹೇಳಿದರು,
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಅಧ್ಯಕ್ಷ ಮಂಜುನಾಥ ಮಾಗಡಿ ಭಜಂತ್ರಿ ಸಮಾಜ ಸುಧಾರಣೆ ಆಗಬೇಕಾಗಿದೆ ಎಲ್ಲಾ ಸಮಾಜ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದೆ ಸಮಾಜದ ಕುಂದು ಕೊರತೆಗಳ ಬಗ್ಗೆ ಸರಕಾರ ಹರಿಸಬೇಕು, ಸಮಾಜದ ಏಳ್ಗೆಗೆ ಕೈ ಜೋಡಿಸುತ್ತೇವೆ ಎಂದು ಹೇಳಿದರು.
ಬಿಜೆಪಿ ಯುವ ಮುಖಂಡರಾದ ಐ ಎಸ್ ಪೂಜಾರ ಮಾತನಾಡಿದರು.ಮಹೋನಪ್ಪ ವಡ್ಡರ ಬಸವರಾಜ ಜಾಲಗಾರ ಮಾತನಾಡಿದರು


ಕಾರ್ಯಕ್ರಮ ಅಧ್ಯಕ್ಷತೆ ಯನ್ನು ನೂಲಿ ಚಂದಯ್ಯಕೋರವರ ಸಮಾಜ ಅಧ್ಯಕ್ಷ ನಾಗರಾಜ ಭಜಂತ್ರಿ ವಹಿಸಿದ್ದರು
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ಜಯಕ್ಕ ಕಳ್ಳಿ, ಮಹಾದೇವಪ್ಪ ಅಂದಲಗಿ ಬಿಜೆಪಿ ಯುವ ಮುಖಂಡ ನವೀನ ಬೆಳ್ಳಟ್ಟಿ, ಹೇಮಣ್ಣ ಬುರಡಿ ನಾಗಪ್ಪ ಓಂಕಾರಿ ಸಮಾಜದ ಸಂಘ ಉಪಾಧ್ಯಕ್ಷ ಪ್ರಕಾಶ ಭಜಂತ್ರಿ ಕಾರ್ಯದರ್ಶಿ ಆನಂದ ಭಜಂತ್ರಿ,ಪ್ರಕಾಶ ಭಜಂತ್ರಿ ವಾಸಪ್ಪ ಭಜಂತ್ರಿ ಶಿವಪ್ಪ ಮಲ್ಲಾಡದ ಮೌನೇಶ ಭಜಂತ್ರಿ ಫಕ್ಕೀರೇಶ ಭಜಂತ್ರಿ ಸಂಘದ ಪದಾಧಿಕಾರಿಗಳು ಓಣಿಯ ಹಿರಿಯರು.