
ಕೆ.ಆರ್.ಪುರ, ಅ.೮-ಎಸ್.ಐ.ಆರ್. ಪ್ರಕ್ರಿಯೆಯಲ್ಲಿ ಮತದಾರರಿಗೆ ಆಸರೆಯಾಗಿ ಕಾರ್ಯ ನಿರ್ವಹಿಸುವಂತೆ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮುನೇಗೌಡ ಅವರು ತಿಳಿಸಿದರು.
ಕ್ಷೇತ್ರದ ಆನಂದಪುರ ವಾರ್ಡನ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಎಸ್.ಐ.ಆರ್.ಕುರಿತಾ ಸಭೆಯಲ್ಲಿ ಮಾತನಾಡಿದ ಅವರು ದಾಖಲೆಗಳನ್ನು ಹೊಂದಿರುವ ಮತದಾರರನ್ನು ಉಳಿಸಿಕೊಳ್ಳಲು ಸಹಕಾರ ನೀಡುವಂತೆ ಸಲಹೆ ನೀಡಿದರು.
ಕ್ಷೇತ್ರದಲ್ಲಿ ಲಕ್ಷಕ್ಕೂ ಹೆಚ್ಚು ಮತದಾರರು ಪಟ್ಟಿಯಿಂದ ಕೈಬೀಡಲಾಗಿದ್ದು,ಐವತ್ತು ಸಾವಿರಕ್ಕು ಹೆಚ್ಚು ಮಂದಿಗೆ ನೋಟಿಸ್ ನೀಡಲಾಗಿದೆ, ಅವರಿಗೆ ಸೂಕ್ತ ದಾಖಲೆಗಳೊಂದಿಗೆ ಮತಪಟ್ಟಿಗೆ ಸೇರಲು ನಿಯಮಾನುಸಾರವಾಗಿ ಮಾಡುವಂತೆ ಹೇಳಿದರು.
ಮಾಜಿ ಪಾಲಿಕೆ ಸದಸ್ಯ ಅಂತೋಣಿಸ್ವಾಮಿ ಅವರು ಮಾತನಾಡಿ ಮತದಾರರನ್ನು ಪರಿಶೀಲನೆ ಮಾಡಿ ದಾಖಲೆಗಳ ಅಡಿಯಲ್ಲಿ ಸೇರ್ಪಡೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನುಡಿದರು.
ಆನಂದಪುರ,ಕೆ.ಆರ್.ಪುರ ವಾರ್ಡ ಸೇರಿದಂತೆ ಕ್ಷೇತ್ರದ ವಿವಿಧೆಡೆ ಸಮರ್ಪಕ ಎಸ್ ಐ ಆರ್ ಪ್ರಕ್ರಿಯೆಗೆ ಬಿಎಲ್ ಎ ಗಳು ಸೇರಿದಂತೆ ಮುಖಂಡರು ಶ್ರಮಿಸುತ್ತಿದ್ದಾರೆ ಎಂದು ನುಡಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಶ್ರೀರಾಮ್,ಮಾಜಿ ವಾರ್ಡನ ಅಧ್ಯಕ್ಷ ರಮೇಶ್ ಗೌಡ,ಮುಖಂಡರಾದ ಡಿಸೇಲ್ ಮಂಜುನಾಥ, ಪಟಾಕಿ ರವಿ,ಕೆ.ಪಿ.ಕೃಷ್ಣ ಮತ್ತಿತರರು ಇದ್ದರು.






















