Home ಜಿಲ್ಲೆ ಬೆಂಗಳೂರು ಜಾಲತಾಣ ಮಿತ ಬಳಕೆಗೆ ಕರೆ

ಜಾಲತಾಣ ಮಿತ ಬಳಕೆಗೆ ಕರೆ

ಕೆ.ಆರ್.ಪುರ, ಜು.೩೦- ಸಮಾಜದಲ್ಲಿ ಮಹಿಳಾ ಮತ್ತು ಮಕ್ಕಳು ಜಾಲತಾಣದಿಂದ ದೂರವಿಡಬೇಕಾದ ಪರಿಸ್ಥಿತಿ ಹೆಚ್ಚಿದೆ, ಇದರಿಂದ ಒತ್ತಡ ಮತ್ತು ಖಿನ್ನತೆ, ನಿದ್ರಾಹೀನತೆ, ಏಕಾಗ್ರತೆಯ ಕೊರತೆ, ಖಾಸಗಿತನಕ್ಕೆ ಧಕ್ಕೆ ಇದೆ ಎಂದು ಸಮಾಜಸೇವಕಿ ಸುಜಾತಾ ಪ್ರೇಮಕುಮಾರ್ ಅವರು ಸಲಹೆ ನೀಡಿದರು.


ಮಹದೇವಪುರ ಕ್ಷೇತ್ರದ ಇಮ್ಮಡಿಹಳ್ಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮತನಾಡಿದರು.


ಸಾಮಾಜಿಕ ಜಾಲ ತಾಣಗಳನ್ನು ಮಿತವಾಗಿ ಬಳಸುವ ಮೂಲಕ,ತಂತ್ರಜ್ಞಾನದ ಸದುಪಯೋಗ ಪಡಿಸಿಕೊಳ್ಳಬೇಕು, ಆ ಮೂಲಕ ತೊಂದರೆಗಳಿಂದ ದೂರ ಉಳಿಯಬಹುದು ಎಂದು ನುಡಿದರು.
ಸಂವಹನದ ಕೊರತೆ, ಹಣಕಾಸಿನ ಸಮಸ್ಯೆಗಳು, ದೈಹಿಕ ಹಾಗೂ ಮಾನಸಿಕ ಹಿಂಸೆ ವಿಚ್ಛೇದನಕ್ಕೆ ಕಾರಣಗಳಾಗಿದ್ದು, ಏಲ್ಲಾ ಸಮಸ್ಯೆಗೂ ಪರಿಹಾರವಿದೆ, ಮುಕ್ತ ಮಾತುಕತೆ, ಸಮಯ ಮತ್ತು ಹೊಂದಾಣಿಕೆ, ಸಮಾಲೋಚನೆಗಳನ್ನು ಮಾಡಬೇಕಿದೆ ಎಂದು ಹೇಳಿದರು.


ಬೆಂ.ಪೂರ್ವ ನಿರ್ದೇಶಕರಾದ ಪದ್ಮಯ್ಯ, ಯೋಜನಾಧಿಕಾರಿ ಪುರುಷೋತ್ತಮ್, ಜ್ಞಾನ ವಿಕಾಸ ಯೋಜನಾಧಿಕಾರಿ ಸಂಗೀತಾ, ಸ್ಥಳೀಯ ಮುಖಂಡ ಪ್ರೇಮ್ ಕುಮಾರ್, ಜೆವಿಕೆ ಮದಾಲಾಂಬಿಕ, ಸೇವಾ ಪ್ರತಿನಿಧಿ ಸೌಭಾಗ್ಯ, ಪದಾಧಿಕಾರಿಗಳಾದ ಲಾವಣ್ಯ, ಜಯ, ಶೀಲಾ, ಪ್ರಭಾ, ಆಶಾ ಮತ್ತಿತರರು ಉಪಸ್ಥಿತರಿದ್ದರು.