
ಕೋಲಾರ,ಸೆ,೧೫- ಶ್ರಾವಣ ಮಾಸವೆಂದರೆ ಭಕ್ತಿ, ಪಾವಿತ್ರ್ಯ ಮತ್ತು ಶಿವನ ಆರಾಧನೆಯ ಮಾಸವಾಗಿದೆ. ಈ ಮಾಸದಲ್ಲಿ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸುವುದರ ಜೂತೆಗೆ ಪ್ರತಿಯೊಂದು ಮನೆಯಲ್ಲೂ ಪ್ರತಿಯೊಬ್ಬರ ಮನದಲ್ಲೂ ಶಿವ ಪೂಜೆಯ ವಾತಾವರಣ ನಿರ್ಮಾಣವಾಗ ಬೇಕೆಂದು ಶ್ರೀ ನಾಗಲಾಪುರ ಸಂಸ್ಥಾನ ಮಠದಲ್ಲಿ ಶ್ರೀಷ ಬ್ರ ಪಟ್ಟದಶ್ರೀ ತೇಜೇಶಲಿಂಗಶಿವಾಚಾರ್ಯ ಸ್ವಾಮಿಗಳು ಕರೆ ನೀಡಿದರು.
ತಾಲ್ಲೂಕಿನ ಸೊಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ನಾಗಲಾಪುರ ಗ್ರಾಮದ ಶ್ರೀಮದ್ ನಾಗಲಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠzಲ್ಲಿ ಶ್ರಾವಣ ಮಾಸದ ಕೊನೆಯ ದಿನವಾದ ಗುರುವಾರ ಸಂಜೆ ೧೪. ನೇ ವರ್ಷದ ಮನೆ ಮನಗಳಲ್ಲಿ ಶ್ರಾವಣ ಶಿವಸಂಜೆ ಶಿವಾನುಭವ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಮಾನವ ಧರ್ಮ ಜಾಗೃತಿ ಕಾರ್ಯಕ್ರಮದ ಸಾನಿಧ್ಯವಹಿಸಿದ ಶ್ರೀಗಳು ಭಕ್ತಾಧಿಗಳಿಗೆ ಆರ್ಶೀವಚನ ನುಡಿಗಳಾಡಿದರು.
ಪ್ರತಿವರ್ಷದಂತೆ ಈ ವರ್ಷವು ಲೋಕ ಕಲ್ಯಾಣಕ್ಕಾಗಿ ವಿಶ್ವಶಾಂತಿಗಾಗಿ ಪರಾಭವ ನಾಮ ಸಂವರ್ತರ ಶ್ರಾವಣ ಮಾಸದ ಮನೆ ಮನಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರುತ್ತಿದೆ ಕಳೆದ ಒಂದು ಮಾಸದಲ್ಲಿ ಕೋಲಾರ ಅರಳೇಪೇಟೆಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಪ್ರಾರಂಭಿಸಲಾದ ಶ್ರಾವಣ ಸಂಜೆಯ ಕಾರ್ಯಕ್ರಮವು ರಾಜ್ಯ ಮತ್ತು ಜಿಲ್ಲೆಯ ವಿವಿಧ ಭಾಗಗಳ ಭಕ್ತಾಧಿಗಳ ಮನೆಗಳಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿ ಕೊಂಡು ಬಂದಿದ್ದು ಇಂದು ಶ್ರೀಮದ್ ರಂಬಾಪುರಿ ಪೀಠದ ನಾಗಲಾಪುರ ಮಠದಲ್ಲಿ ಇಷ್ಟ ಲಿಂಗ ಮಹಾಪೂಜಾ ಕಾರ್ಯಕ್ರಮದ ಸಮಾರೋಪದೊಂದಿಗೆ ಮಾನವ ಧರ್ಮ ಜಾಗೃತಿ ಕಾರ್ಯಕ್ರಮವನ್ನು ಭಕ್ತಾಧಿಗಳಿಂದ ನೆರವೇರಿಸಲಾಗುತ್ತಿದೆ ಎಂದರು.
ಶಿವನಿಗೆ ನಾವು ಅರ್ಪಿಸುವ ಬಿಲ್ವಪತೆ,ಹೂವು ಹಾಲು ನೀರು ಇವೆಲ್ಲಾಕ್ಕಿಂತ ಮುಖ್ಯವಾದದ್ದು ನಮ್ಮ ಶುದ್ದ ಮನಸ್ಸು ಮತ್ತು ಸತ್ಕಾರ್ಯಗಳ ಸಂಕಲ್ಪ, ಮನಸ್ಸಿನಲ್ಲಿ ದ್ವೇಷ ಆಹಂಕಾರ, ಆಸೂಯೆ ಇಟ್ಟು ಕೊಂಡು ಮಾಡುವ ಪೂಜೆಗಿಂದ ಪ್ರೀತಿ, ಕರುಣೆ ಮತ್ತು ಸತ್ಯದ ಬದುಕೆ ಶಿವನಿಗೆ ನಿಜವಾದ ಪೂಜೆಯಾಗಿದೆ ಶಿವ ಎಂದರೆ ಕೇವಲ ದೇವಾಲಯದಲ್ಲಿರುವ ದೇವರಲ್ಲ ನಮ್ಮ ಸುತ್ತಲಿನ ಪ್ರತಿಯೊಬ್ಬ ಜೀವಿಯಲ್ಲೂ ಶಿವತತ್ವವನ್ನು ಕಾಣುವಂತಾಗ ಬೇಕು. ಹಸಿದವರಿಗೆ ಅನ್ನ ನೀಡುವುದು ದುಖಃದಲ್ಲಿದ್ದವರಿಗೆ ಧೈರ್ಯ ನೀಡುವುದು, ಹಿರಿಯರನ್ನು ಗೌರವಿಸುವುದು ಪ್ರಕೃತಿಯನ್ನು ಕಾಪಾಡುವುದು ಇವೆಲ್ಲಾವೂ ಶಿವನ ಆರಾಧನೆಯ ಭಾಗವಾಗಿದೆ ತಿಳಿಸಿದರರು.
ಈ ಶ್ರಾವಣ ಸಂಜೆಯಲ್ಲಿ ಪ್ರತಿಯೊಂದು ಮನೆಯಲ್ಲೂ ದೀಪ ಬೆಳಗಲಿ, ಶಿವನಾಮ ಮೊಳಗಲಿ ಮನಸ್ಸಿನಲ್ಲಿ ಶಾಂತಿ ನೆಲೆಸಲಿ ಮನೆಯಿಂದ ಭಕ್ತಿ ಆರಂಭವಾದಾಗ ಸಮಾಜದಲ್ಲಿ ಸಂಸ್ಕಾರ ಬೆಳೆಯುತ್ತದೆ ಸಂಸ್ಕಾರ ಬೆಳೆದಾಗ ಉತ್ತಮ ಸಮಾಜ ನಿರ್ಮಾಣವಾಗುವುದು ಅದ್ದರಿಂದ ಶ್ರಾವಣ ಮಾಸವನ್ನು ಕೇವಲ ಆಚರಣೆಯಾಗಿ ನೋಡದೆ ನಮ್ಮ ಮನಸ್ಸಿನ ಪರಿವರ್ತನೆಯ ಪವಿತ್ರ ಅವಕಾಶವಾಗಿ ಸ್ವೀಕರಿಸೋಣಾ “ಓಂ ನಮಃ ಶಿವಾಯ” ಎಂಬ ಪಂಚಾಕ್ಷರಿ ಮಂತ್ರದೊಂದಿಗೆ ನಮ್ಮ ಮನೆ, ಮನಸ್ಸು ಮತ್ತು ಪಾವನಗೊಳಿಸೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿದ್ದರು. ಕೊನೆಯ ದಿನದ ವಿಶೇಷ ಪೂಜೆ ಮತ್ತು ದಾಸೋಹದ ವ್ಯವಸ್ಥೆಯನ್ನು ಕಾಳಪ್ಪನ ಹಳ್ಳಿಯ ಕೆ.ಆರ್.ಷಡಕ್ಷತಿ ಶಾಸ್ತ್ರಿಗಳು ನೆರವೇರಿಸಿ ಕೊಟ್ಟರು. ಕಾರ್ಯಕ್ರಮದ ಉಸ್ತುವಾರಿಯನ್ನು ಮಠz ಭಕ್ತಾಧಿಗಳು ವಹಿಸಿದ್ದರು.
































