Home ಜಿಲ್ಲೆ ಬೆಂಗಳೂರು ನಡವತ್ತಿಯಲ್ಲಿ ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣ

ನಡವತ್ತಿಯಲ್ಲಿ ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣ

ಹೊಸಕೋಟೆ,ಜು.೨೯: ಭಾರತೀಯ ಸಂವಿಧಾನದ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ದೇಶದ ಪ್ರತಿಯೊಬ್ಬನಾಗರಿಕನಿಗೂ ಜಾತಿ, ಧರ್ಮ, ವರ್ಗಭೇದವಿಲ್ಲದೆ ಸಮಾನಹಕ್ಕು, ಸಮಾನ ಅವಕಾಶ ಹಾಗೂ ಮತದಾನದ ಹಕ್ಕನ್ನು ನೀಡುವಮೂಲಕ ಪ್ರಜಾಪ್ರಭುತ್ವದ ಭದ್ರ ಅಡಿಪಾಯಹಾಕಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.


ತಾಲೂಕಿನ ಸಮೇತನಹಳ್ಳಿ ಗ್ರಾಪಂ ವ್ಯಾಪ್ತಿಯ ನಡವತ್ತಿ ಗ್ರಾಮದಲ್ಲಿ ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣ ಮಾಡಿ ಮಾತನಾಡಿದ ಅವರು, ನಮ್ಮ ಗ್ರಾಮಗಳಲ್ಲಿ ಸೌಹಾರ್ದತೆ, ಶಾಂತಿ ಮತ್ತು ಸಹಬಾಳ್ವೆಯ ವಾತಾವರಣ ನಿರ್ಮಾಣ ವಾಗಬೇಕು. ಸಮಾಜದ ಎಲ್ಲ ವರ್ಗದ ಜನರು ಸಮಾನವಾಗಿ ಬದುಕುವಂತಹ ವಾತಾವರಣ ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಹಿಳೆಯರು, ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಸೇರಿದಂತೆ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಿರುವುದು ಡಾ. ಅಂಬೇಡ್ಕರ್ ಅವರ ಐತಿಹಾಸಿಕ ಕೊಡುಗೆ ಯಾಗಿದೆ ಎಂದರು.


ಸಾಮಾನ್ಯ ಪ್ರಜೆಯೂ ದೇಶದ ರಾ?ಪತಿಯಾಗುವ ಅವಕಾಶವನ್ನು ಸಂವಿಧಾನ ಕಲ್ಪಿಸಿದೆ.ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಅಂಬೇಡ್ಕರ್ ಸಂದೇಶ ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದೆ.ಸಮಾಜದಲ್ಲಿ ನೋವು ಅನುಭವಿಸುವವರ ಪರವಾಗಿ ನಿಲ್ಲುವುದು,ಅವರ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ದೊರಕಿಸುವುದು,ಪ್ರತಿಯೊಬ್ಬ ಜನಪ್ರತಿನಿಧಿ ಕರ್ತವ್ಯ. ನಡವತ್ತಿಯಲ್ಲಿ ಅಂಬೇಡ್ಕರ್ ಕಂಚಿನಪ್ರತಿಮೆ ಅನಾವರಣ ಮಾಡಿದ್ದು ಜಿಲ್ಲಾಧಿಕಾರಿ ಕಚೇರಿಗಳ ಬಳಿ ಇರುವ ಪ್ರತಿಮೆಗಿಂತಲೂ ವಿಭಿನ್ನವಾಗಿದೆ ಎಂದು ಹೇಳಿದರು.


ಬಳಿಕ ಸಮೇತನಹಳ್ಳಿ ಗ್ರಾಪಂ ಅದ್ಯಕ್ಷ ನಡವತ್ತಿ ಕಾಂತರಾಜ್ ಮಾತನಾಡಿ,ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಡಿ ನಾನು ಗ್ರಾಪಂ ಅಧ್ಯಕ್ಷನಾಗಿ ಕೆಲಸಮಾಡಿದ್ದೇನೆ.ಸುಮಾರು ೯೦೦ ಕೆಜಿ ತೂಕ ಹಾಗೂ ೯ ಅಡಿ ಎತ್ತರದ ಅಂಬೇಡ್ಕರ್ ಕಂಚಿನ ಪ್ರತಿಮೆಯನ್ನು ಸುಮಾರು ೨೦ ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡ ಲಾಗಿದೆ. ಜೊತೆಗೆ ಅಂಬೇಡ್ಕರ್ ಭವನಕ್ಕೆ ಹೊಸ ಕಾಯಕಲ್ಪ ಕೊಟ್ಟು ಉದ್ಘಾಟನೆ ಮಾಡಲಾಗಿದೆ ಮುಂದಿನ ದಿನಗಳಲ್ಲಿ ನಮ್ಮ ಗ್ರಾಮಕ್ಕೆ ಇನ್ನಷ್ಟು ಅಭಿವೃದ್ದಿ ಮಾಡಲು ತಯಾರಿದ್ದೇನೆ ಎಂದು ಹೇಳಿದರು.


ಈ ಸಂದರ್ಬದಲ್ಲಿ ಅನಗೊಂಡನಹಳ್ಳಿ ಹೋಬಳಿ ಕಾಂಗ್ರೆಸ್ ಮುಖಂಡಬಿ ಎಂ.ಪ್ರಕಾಶ್, ಸಮೇತನಹಳ್ಳಿ ಸೊಣ್ಣಪ್ಪ, ಟಿಎಪಿಸಿಎಂಎಸ್ ಉಪಾದ್ಯಕ್ಷ ಮುತ್ಕೂರು ಮುನಿರಾಜು. ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೃಷ್ಣಮೂರ್ತಿ, ಬಿಎಂಆರ್‌ಡಿಎ ಸದಸ್ಯ ಕೊರಳೂರು ಸುರೇಶ್‌ಗೌಡ, ಎಚ್.ಎಂ.ಸುಬ್ಬರಾಜು, ದಲಿತಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಚಿನ್ನಸ್ವಾಮಿ, ಬಮುಲ್ ನಿರ್ದೆಶಕ ಕೆಎಂಎಂ ಮಂಜುನಾಥ್, ತಾಪಂ ಕಾರ್ಯನಿರ್ವಹಣಾಧಿಕಾರಿ ಮುನಿಯಪ್ಪ, ಪಿಡಿಓ ಪ್ರಸಾದ್. ಕಾರ್ಯದರ್ಶೀ ಓಬಳಾಪುರ ಮಂಜುನಾಥ್, ಸೇರಿ ಹಲವಾರು ಗಣ್ಯರು ಹಾಜರಿದ್ದರು.