
ಬೀದರ್:ಮೇ.20: ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬೀದರ್ ಜಿಲ್ಲೆಯಲ್ಲಿ ಸಹ ಅಭಿವೃದ್ಧಿ ಕೆಲಸಗಳಿಗೆ ಅಕ್ಷರಶಃ ಗರ ಬಡಿದಂತಾಗಿದೆ. ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಪೆÇಲೀಸ್ ವ್ಯವಸ್ಥೆ ಸಹ ಹಳಿ ತಪ್ಪಿದ್ದು, ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದೆ. ಬಹುತೇಕ ಕಚೇರಿಗಳಲ್ಲಿ ಅವ್ಯವಸ್ಥೆಯಿದೆ. ಜನರು ತಮ್ಮ ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ. ಭ್ರಷ್ಟಾಚಾರ ನಡೆಯುತ್ತಿದೆ ಎಂದು ಜನರ ದೂರು ಸಾಮಾನ್ಯವಾಗಿವೆ. ಆದರೆ ಜಿಲ್ಲೆಯ ಇಬ್ಬರು ಮಂತ್ರಿಗಳು ನಿರಾಳವಾಗಿದ್ದಾರೆ. ಕೇವಲ ಭರವಸೆ, ಹೇಳಿಕೆ ನೀಡುವುದು ಪ್ರಚಾರ ಪಡೆಯುವುದು ಮಾತ್ರ ಇವರ ಕೆಲಸವಾಗಿದೆ ಎಂದು ದೂರಿದ್ದಾರೆ. ಕಳೆದ ವರ್ಷ ಮುಖ್ಯಮಂತ್ರಿ
ಸಿದ್ದರಾಮಯ್ಯ ಅವರು ಇಲ್ಲಿ ಬಂದು 2025 ಕೋಟಿ ರೂ. ಕಾಮಗಾರಿ ಉದ್ಘಾಟನೆ, ಚಾಲನೆ ನೀಡಿದ್ದರು. ಇದೆಲ್ಲ ಬರೀ ಪ್ರಚಾರ ಗಿಟ್ಟಿಸುವ ಗಿಮಿಕ್ ಎಂಬುದು ಸ್ಪಷ್ಟವಾಗಿದೆ. ಸಿಎಂ ಚಾಲನೆ ನೀಡಿದ್ದ ಜಿಲ್ಲಾ ಸಂಕೀರ್ಣ ಕಚೇರಿ ಕೆಲಸ ಇನ್ನೂ ಅಡಿಪಾಯ ಬಿಟ್ಟು ಮೇಲಕ್ಕೇ ಎದ್ದಿಲ್ಲ. ಬಸವಕಲ್ಯಾಣ ಅನುಭವ ಮಂಟಪ ಕಾಮಗಾರಿ ಆಮೆಗತಿಯಿಂದ ನಡೆದಿದೆ. ಈ ವರ್ಷ ಉದ್ಘಾಟನೆ ಖಚಿತ ಎಂದು ಹಿಂದೆ ಹೇಳಲಾಗಿತ್ತು. ಈಗ ಜಿಲ್ಲಾ ಉಸ್ತುವಾರಿ ಸಚಿವರು ಮುಂದಿನ ವರ್ಷದ ಮಾಚ9 ಒಳಗೆ ಲೋಕಾರ್ಪಣೆ ಎಂದು ಹೇಳುತ್ತಿದ್ದಾರೆ. ಸರ್ಕಾರ ಸಮರ್ಪಕ ಹಣ ಬಿಡುಗಡೆ ಮಾಡದಿರುವುದೇ ಕಾಮಗಾರಿ ವಿಳಂಬಕ್ಕೆ ಕಾರಣವಾಗಿರೆ. ಬೀದರ್ ಸುಂದರೀಕರಣ ಕೆಲಸ ನಡೆಯುತ್ತಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿ ಆಗುತ್ತಿಲ್ಲ. ಬೀದರ್ ಉತ್ಸವ, ಬಸವ ಉತ್ಸವಕ್ಕೆ ಗತಿಯಿಲ್ಲ. ನಗರದಲ್ಲಿ ಸಾರ್ವಜನಿಕರಿಗೆ ಒಳ್ಳೆಯ ಉದ್ಯಾನ ಇಲ್ಲ. ಇದ್ದ ಒಂದೆರಡು ಉದ್ಯಾನಗಳು ಸಹ ನಿರ್ವಹಣೆ ಇಲ್ಲದೇ ಹಾಳಾಗಿವೆ. ಒಂದು ವರ್ಷದ ಹಿಂದೆ ಸಿಎಂ ಉದ್ಘಾಟಿಸಿದ
ಬ್ರಿಮ್ಸ್ ಕ್ಯಾಥ್ ಲ್ಯಾಬ್ ಆರಂಭವೇ ಆಗಿಲ್ಲ. ವರ್ಷದಿಂದ ಇದಕ್ಕೆ ಬೀಗ ಬಿದ್ದಿದ್ದು, ಕೋಟ್ಯಾಂತರ ರೂ. ಮೌಲ್ಯದ ಯಂತ್ರೋಪಕರಣ ಹಾಳಾಗುತ್ತಿವೆ. ಬಡ ಹೃದಯ ರೋಗಿಗಳ ಬಗ್ಗೆ ಈ ಸರ್ಕಾರಕ್ಕೆ, ಜಿಲ್ಲೆ ಸಚಿವರಿಗೆ ಕಾಳಜಿಯೇ ಇಲ್ಲ ಎಂಬುದಕ್ಕೆ ಇದು ತಾಜಾ ನಿದರ್ಶನವಾಗಿದೆ ಎಂದು ಆರೋಪಿಸಿದ್ದಾರೆ




















