Home ಜಿಲ್ಲೆ ಕಮಲನಗರ: ಹರ್ಷ ತಂದ ಹದ ಮಳೆ

ಕಮಲನಗರ: ಹರ್ಷ ತಂದ ಹದ ಮಳೆ

ಕಮಲನಗರ :ಮೇ.20: ಬಿಸಿಲಿನ ಬೇಗೆಯಿಂದ ತಾಲ್ಲೂಕು ಪಟ್ಟಣ ಸೇರಿದಂತೆ ವಿವಿಧೆಡೆ ಮಂಗಳವಾರ ಸಚಿಜೆ ಹದವಾದ ಮಳೆ ಸುರಿದಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಮಳೆ ಜೊತೆಗೆ ಗಾಳಿಯೂ ಬೀಸಿದ್ದರಿಂದ ಅನೇಕ ಕಡೆ ಮರಗಳು ಉರುಳಿ ಬಿದ್ದಿವೆ. ತಾಲೂಕಿನ ಹಳ್ಳಿಯೊಂದರಲ್ಲಿ ಗಿಡ ಉರುಳಿ ಎತ್ತು ಸಾವನ್ನೊಪ್ಪಿದ ಘಟನೆ ಜರುಗಿದಲ್ಲದೇ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಕೆಲ ಗ್ರಾಮಗಳಲ್ಲಿ ಬಿರುಸಿನ ಗಾಳಿ ಬೀಸಿದೆ. ಒಂದೇರಡು ಹನಿ ಮಳೆ ಬಿದ್ದು ಮೋಡಗಳು ಮಾಯಗೊಂಡವು.

ಕೆಲ ಗ್ರಾಮಗಳಲ್ಲಿ ಮಳೆ ಆಗಮನದಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಜನರು ಮಳೆಯಲ್ಲಿ ಕೊಡೆ ಹಿಡಿದು ಸಂಚರಿಸಿದರು. ಬಿಸಿಲಿಗೆ ಕಾದಿದ್ದ ಧರೆಯು ಮಳೆಯ ಸಿಂಚಲನದಿಂದ ತಣ್ಣಗಾಯಿತು.