
ಜಮಖಂಡಿ :ಮೇ.20:ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಮ್ಮೆ ಕಳ್ಳತನ ಪ್ರಕರಣವನ್ನು ಪೆÇಲೀಸರು ಭೇದಿಸಿ 6 ಜನ ಆರೋಪಿತರನ್ನು ಬಂಧಿಸಿ ಕಾರಾಗೃಹಕ್ಕೆ ರವಾನಿಸಿರುವ ಘಟನೆ ನಡೆದಿದೆ.
ಪಿ.ಎಸ್.ಐ ಗಂಗಾಧರ ಪೂಜೇರಿ ಹಾಗೂ ಅಪರಾಧ ವಿಭಾಗದ ಪಿ.ಎಸ್.ಐ ಎಂ.ಎ. ವಾಲೇಕಾರ ಅವರ ನೇತೃತ್ವದ ಪೆÇಲೀಸ್ ತಂಡ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿತ್ತು. ತನಿಖೆ ವೇಳೆ ದಿನಾಂಕ 14-05-2026 ರಂದು ಜಂಬಗಿ ರಸ್ತೆಯಲ್ಲಿ ಸಂಶಯಾಸ್ಪದವಾಗಿ ಎರಡು ವಾಹನಗಳಲ್ಲಿ ದನಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದವರನ್ನು ತಡೆದು ವಿಚಾರಣೆ ನಡೆಸಲಾಯಿತು.
ಆರಂಭದಲ್ಲಿ ಆರೋಪಿತರು ಸಮರ್ಪಕ ಉತ್ತರ ನೀಡದ ಹಿನ್ನೆಲೆ ಅವರನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ, ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಒಂದು ಎಮ್ಮೆ ಹಾಗೂ ಸುರುಪಾಲಿ ಗ್ರಾಮದಲ್ಲಿ ಎರಡು ಎಮ್ಮೆ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಪೆÇಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಾಹನಗಳನ್ನು ವಶಪಡಿಸಿಕೊಂಡು, 6 ಜನ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದ ಕುರಿತು ಜಮಖಂಡಿ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ ಎಂದು ತಿಳಿದುಬಂದಿದೆ.





















