
ಜಮಖಂಡಿ :ಮೇ.20:ತಾಲೂಕಿನ ಕುರುಗೋಡ ಗ್ರಾಮದಲ್ಲಿ ನಡೆದ ಸಿದ್ದು ಮಲ್ಲಪ್ಪ ಬಿರಾದಾರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರಬಿದ್ದಿರುವ ಸತ್ಯಗಳು ಇದೀಗ ಇಡೀ ಪ್ರದೇಶವನ್ನೇ ಬೆಚ್ಚಿಬೀಳಿಸಿವೆ. ಕುಟುಂಬದ ಜಮೀನು ವಿವಾದವೇ ಕೊನೆಗೆ ರಕ್ತಪಾತಕ್ಕೆ ತಿರುಗಿ, ಸ್ವಂತ ಚಿಕ್ಕಮ್ಮನ ಮಗನೇ ?1 ಲಕ್ಷ ಸುಪಾರಿ ನೀಡಿ ಅಣ್ಣನ ಹತ್ಯೆ ಮಾಡಿಸಿದ್ದಾನೆ ಎಂಬ ಬೆಚ್ಚಿಬೀಳಿಸುವ ಮಾಹಿತಿ ಪೆÇಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಮೃತ ಸಿದ್ದು ಬಿರಾದಾರ (34) ದಿನಾಂಕ 14/05/2026 ರಂದು ಮಧ್ಯಾಹ್ನ ತನ್ನ ಮೋಟಾರ್ ಸೈಕಲ್‍ನಲ್ಲಿ ತೋಟದ ಮನೆಗೆ ತೆರಳುತ್ತಿದ್ದ ವೇಳೆ, ಕುರುಗೋಡ ಗ್ರಾಮದ ಹದ್ದಿಯ ಕೆನಾಲ್ ಕಚ್ಚಾ ರಸ್ತೆಯಲ್ಲಿ ಸಿನಿಮೀಯ ರೀತಿಯಲ್ಲಿ ಅಡ್ಡಗಟ್ಟಿದ ಆರೋಪಿಗಳು, ಕಬ್ಬಿಣದ ರಾಡ್‍ನಿಂದ ತಲೆಗೆ ಬಲವಾಗಿ ಹೊಡೆದು ರಕ್ತದ ಮಡುವಿನಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದರು.
ಘಟನೆ ಬಳಿಕ ಮೃತನ ತಾಯಿ ಸಂಗವ್ವ ಬಿರಾದಾರ ಸಾವಳಗಿ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಠಾಣಾ ಗುನ್ನೆ ನಂ. 84/2026 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಸಿಪಿಐ ಎಂ.ಡಿ. ಮಡ್ಡಿ ಹಾಗೂ ಪಿ.ಎಸ್.ಐ ಅಪ್ಪಣ್ಣ ಐಗಳಿ ನೇತೃತ್ವದ ತಂಡ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಕೊಲೆ ಸಂಚಿನ ಭಯಾನಕ ಸತ್ಯ ಹೊರಬಿದ್ದಿದೆ.
“ಇವನನ್ನು ಬದುಕಿಟ್ಟರೆ ನಮಗೆ ಬದುಕಲು ಬಿಡೋದಿಲ್ಲ” – ಸಂಚಿನ ಹಿಂದೆ ರಕ್ತಸಂಬಂಧ!
ಪೆÇಲೀಸರ ಮಾಹಿತಿ ಪ್ರಕಾರ, ಮೃತ ಸಿದ್ದು ಬಿರಾದಾರ ಮದ್ಯಪಾನ ಮಾಡಿ ಮನೆಗೆ ಬಂದು ಜಮೀನು ವಿಚಾರದಲ್ಲಿ ತಮ್ಮ ಶ್ರೀಶೈಲ ಜೊತೆ ನಿರಂತರ ಜಗಳ ಮಾಡುತ್ತಿದ್ದ ಎನ್ನಲಾಗಿದೆ. “ಎಲ್ಲ ಜಮೀನು ನನಗೆ ಸೇರಿದ್ದು, ನೀವು ಜಾಗ ಖಾಲಿ ಮಾಡಿ ಹೋಗಿ” ಎಂದು ಆಗಾಗ ಬೆದರಿಕೆ ಹಾಕುತ್ತಿದ್ದ ಹಿನ್ನೆಲೆ, ಶ್ರೀಶೈಲ ತನ್ನ ಸಂಬಂಧಿ ರವಿ ಶಿವಪೂಜಿಯ ಜೊತೆ ಸೇರಿ ಕೊಲೆ ಪ್ಲಾನ್ ರೂಪಿಸಿದ್ದಾನೆ.
“ಇವನನ್ನು ಹೀಗೆ ಬಿಟ್ಟರೆ ನಮಗೆ ಬದುಕಲು ಬಿಡುವುದಿಲ್ಲ… ಒಂದು ಗತಿ ಕಾಣಿಸೋಣ” ಎಂದು ಮಾತುಕತೆ ನಡೆಸಿ, ಮಹಾರಾಷ್ಟ್ರದ ಜತ್ತ ತಾಲೂಕಿನ ಬಸವರಾಜ ಹಗರಿಗೆ ?1 ಲಕ್ಷ ಸುಪಾರಿ ನೀಡಲು ಒಪ್ಪಿಕೊಂಡು ?5 ಸಾವಿರ ಅಡ್ವಾನ್ಸ್ ಹಣ ನೀಡಿರುವುದಾಗಿ ವಿಚಾರಣೆಯಲ್ಲಿ ತಿಳಿದುಬಂದಿದೆ.
3 ದಿನ ಹಿಂಬಾಲಿಸಿ ಕೊನೆಗೆ ದಾಳಿ
ಸುಪಾರಿ ಪಡೆದ ಬಸವರಾಜ ಹಗರಿ ತನ್ನ ಸ್ನೇಹಿತರಾದ ಆಕಾಶ ಯಳ್ಳೂರ ಹಾಗೂ ಪ್ರಥಮೇಶ ಮಹಾಜನ ಜೊತೆ ಸೇರಿ ಎರಡು ಬೈಕ್‍ಗಳಲ್ಲಿ 2-3 ದಿನ ಸಿದ್ದುನ ಚಲನವಲನ ಗಮನಿಸಿ ಹಿಂಬಾಲಿಸಿದ್ದರು. ಬಳಿಕ ಸೂಕ್ತ ಸಮಯ ನೋಡಿ 14/05/2026 ರಂದು ಮಧ್ಯಾಹ್ನ ಕೆನಾಲ್ ರಸ್ತೆಯಲ್ಲಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು:
ಶ್ರೀಶೈಲ ಮಲ್ಲಪ್ಪ ಬಿರಾದಾರ (29) – ಕುರುಗೋಡ
ರವಿ ಶಂಕರ ಶಿವಪೂಜಿ (32) – ಬಿಳ್ಳೂರ, ಜತ್ತ ತಾಲೂಕು
ಬಸವರಾಜ ಅಪ್ಪಾಸಾಹೇಬ ಹಗರಿ (22) – ಬಿಳ್ಳೂರ
ಆಕಾಶ ಶಂಕರ ಯಳ್ಳೂರ (21) – ಬಿಳ್ಳೂರ
ಪ್ರಥಮೇಶ ಸಂಜಯ ಮಹಾಜನ (21) – ಬಿಳ್ಳೂರ
ಪೆÇಲೀಸರು ಆರೋಪಿಗಳನ್ನು ಬಂಧಿಸಿ, ಕೊಲೆಗೆ ಬಳಸಿದ ಎರಡು ಮೋಟಾರ್ ಸೈಕಲ್‍ಗಳು, ಸ್ಟೀಲ್ ರಾಡ್ ಸೇರಿದಂತೆ ಪ್ರಮುಖ ಸಾಕ್ಷ್ಯಗಳನ್ನು ಜಪ್ತಿ ಮಾಡಿದ್ದಾರೆ. ಈ ಘಟನೆ ಕುರುಗೋಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾರೀ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.





















