
ಬೆಂಗಳೂರು ಮೇ ೨೦- ರಾಮನಗರ ಜಿಲ್ಲೆಯ ಬಿಡದಿ ಟೌನ್‌ಶಿಪ್ ಗೆ ಯೋಜನೆ ಕೈಬಿಡುವ ಪ್ರಶ್ನೆಯೇ ಇಲ್ಲ.ಈ ಯೋಜನೆ ಮುಂದುವರಿಯಲಿದೆ. ರೈತರು ಈ ಯೋಜನೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನ ತಮ್ಮ ಸರ್ಕಾರಿ ನಿವಾಸದಲ್ಲಿಂದು ಬಿಡದಿ ಟೌನ್‌ಶಿಪ್ ಗೆ ಜಮೀನು ನೀಡುವ ರೈತರ ಜೊತೆ ಸಭೆ ನಡೆಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಟೌನ್‌ಶಿಪ್ ಯೋಜನೆಗೆ ಭೂಮಿ ನೀಡುವ ರೈತರಿಗೆ ಸರ್ಕಾರ ಘೋಷಣೆ ಮಾಡಿದ ಪರಿಹಾರಕ್ಕೆ ಎಲ್ಲಾ ರೈತರು ಒಪ್ಪಿದ್ದಾರೆ. ಆದಷ್ಟು ಬೇಗ ಪರಿಹಾರ ಕೊಡಿಸಿ ಎಂದು ಮನವಿ ಮಾಡಿದ್ದಾರೆ. ಜೂನ್ ಮೊದಲ ವಾರದಿಂದ ರೈತರಿಗೆ ಪರಿಹಾರ ನೀಡಲಾಗುವುದು ಎಂದರು.
ಬಿಡದಿಯ ಟೌನ್‌ಶಿಪ್ ಯೋಜನೆ ನಾನು ಮಾಡಿದ್ದಲ್ಲ. ಇದು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಯೋಜನೆ. ನ್ಯಾಯಾಲಯದ ಸೂಚನೆಯಂತೆ ಈ ಯೋಜನೆ ಮುಂದುವರಿಸುತ್ತಿರುವೆ ಎಂದರು.
ಈ ಯೋಜನೆ ಗೆ ರೈತರು ಖುಷಿಯಾಗಿದ್ದಾರೆ. ನಮ್ಮನ್ನು ಬೆಂಗಳೂರು ಜಿಲ್ಲೆ ಎಂದು ಪರಿಗಣಿಸಿದ್ದಕ್ಕೂ ಸಂತಸ ವ್ಯಕ್ತಪಡಿಸಿದ್ದಾರೆ. ರೈತರಿಗೆ ಭೂಮಿಯನ್ನು ಬೇರೆಯರಿಗೆ ಮಾರಾಟ ಮಾಡದಂತೆ ತಿಳಿಸಿರುವೆ ಎಂದರು.
ಬಹಿರಂಗ ಚರ್ಚೆಗೆ ಸಿದ್ಧ
ಬಿಡದಿ ಟೌನ್ ಶಿಪ್ ಜಾಗದಲ್ಲಿ ಕೇಂದ್ರ ಸಚಿವ ಕುಮಾರ ಸ್ವಾಮಿಯವರು ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಅದಕ್ಕೆ ನಾನು ಸಿದ್ಧ ಅವರೇ ಸ್ಥಳ ಹಾಗೂ ಸಮಯ ನಿಗದಿ ಮಾಡಲಿ. ನನ್ನ ಜೊತೆಗೆ ರೈತರು, ಶಾಸಕರು ಬರುವುದಕ್ಕೂ ಸಿದ್ದರಿದ್ದಾರೆ. ಅವರು ಬೇಕಾದರೇ ದಂಡು ದಾಳಿಯನ್ನ ಕರೆದುಕೊಂಡು ಬರಲಿ ಎಂದರು.
ಬಿಡದಿ ಟೌನ್‌ಶಿಪ್ ಬಗ್ಗೆ ಮಾತನಾಡುವ ಕುಮಾರ್ ಸ್ವಾಮಿಯವರು ಕೇಂದ್ರಕ್ಕೆ ಹೇಳಿ, ಬೆಲೆಗಳನ್ನು ಕಡಿಮೆ ಮಾಡಲಿ ಎಂದು ಡಿಕೆ. ಶಿವಕುಮಾರ್ ಹೇಳಿದರು.























