
ಬೀದರ್, ಆ ೨೯: ಐದು ದಿನಗಳ ಬ್ಯಾಂಕಿAಗ್ ವ್ಯವಸ್ಥೆಯನ್ನು ಕೂಡಲೇ ಜಾರಿಗೊಳಿಸಬೇಕು, ಪಿಎಲ್‌ಐ (Peಡಿಜಿoಡಿmಚಿಟಿಛಿe ಐiಟಿಞeಜ Iಟಿಛಿeಟಿಣive) ಯೋಜನೆಯಲ್ಲಿನ ಏಕಪಕ್ಷೀಯ ಹಾಗೂ ತಾರತಮ್ಯಪೂರ್ಣ ಕ್ರಮಗಳನ್ನು ಹಿಂಪಡೆಯಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳು ಇಂದು ನಗರದ ಶಿವಾಜಿ ವೃತ್ತದಲ್ಲಿರುವ ಎಸ್‌ಬಿಐ ಎದುರು ಪ್ರತಿಭಟನೆ ನಡೆಸಿದರು.
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UಈಃU) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ UಈಃU ಉಪ ಪ್ರಧಾನ ಕಾರ್ಯದರ್ಶಿ ರಮೇಶ್ ಶಿಂಧೆ, ಬ್ಯಾಂಕ್ ನೌಕರರ ಬಹುಕಾಲದ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಳಂಬ ಮಾಡಬಾರದು. ಈಗಾಗಲೇ ನೀಡಿರುವ ಭರವಸೆಗಳನ್ನು ಗೌರವಿಸಿ ಐದು ದಿನಗಳ ಬ್ಯಾಂಕಿAಗ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖ ಬೇಡಿಕೆಗಳು
ಐದು ದಿನಗಳ ಬ್ಯಾಂಕಿAಗ್ ವ್ಯವಸ್ಥೆಯನ್ನು ಕೂಡಲೇ ಜಾರಿಗೊಳಿಸಿ, ನೀಡಿರುವ ಬದ್ಧತೆಯನ್ನು ಗೌರವಿಸಬೇಕು.
ಪಿಎಲ್‌ಐ ಯೋಜನೆಯಲ್ಲಿನ ಏಕಪಕ್ಷೀಯ ಹಾಗೂ ತಾರತಮ್ಯಪೂರ್ಣ ಕ್ರಮಗಳನ್ನು ಹಿಂಪಡೆದು, ಅದರ ಅನುಷ್ಠಾನವನ್ನು ಸ್ಥಗಿತಗೊಳಿಸಬೇಕು.
ಪಿಎಲ್‌ಐ ಕುರಿತು ಬ್ಯಾಂಕ್ ಕಾರ್ಮಿಕ ಸಂಘಟನೆಗಳೊAದಿಗೆ ದ್ವಿಪಕ್ಷೀಯ ಚರ್ಚೆ ನಡೆಸಿ, ಯೋಜನೆಯಲ್ಲಿ ಅಗತ್ಯ ಬದಲಾವಣೆ ಮಾಡಬೇಕು.
ಪಿಂಚಣಿ ಪರಿಷ್ಕರಣೆ (Peಟಿsioಟಿ Uಠಿಜಚಿಣioಟಿ) ಜಾರಿಗೊಳಿಸಬೇಕು.
ಎಲ್ಲಾ ಬ್ಯಾಂಕ್ ನೌಕರರಿಗೆ ಏಕರೂಪದ ಡಿಎ (Uಟಿiಜಿoಡಿm ಆಂ) ನೀಡಬೇಕು.
ಎನ್‌ಪಿಎಸ್‌ನಿಂದ ಯುಪಿಎಸ್‌ಗೆ (UPS) ಬದಲಾವಣೆಗೆ ಅವಕಾಶ ಕಲ್ಪಿಸಬೇಕು.
ಎನ್‌ಪಿಎಸ್‌ನಿಂದ ಹಳೆಯ ಪಿಂಚಣಿ ಯೋಜನೆ (ಔPS)ಗೆ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಬೇಕು.
ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಹಾಗೂ ಬ್ಯಾಂಕಿAಗ್ ಆಡಳಿತಗಳು ಗಂಭೀರವಾಗಿ ಪರಿಗಣಿಸಿ, ಸಂಘಟನೆಗಳೊAದಿಗೆ ಮಾತುಕತೆ ನಡೆಸಿ ಶೀಘ್ರ ಪರಿಹಾರ ಕಂಡುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಅಖಿಲ ಭಾರತ ಮುಷ್ಕರದ ಎಚ್ಚರಿಕೆ
ಬೇಡಿಕೆಗಳನ್ನು ಈಡೇರಿಸದಿದ್ದರೆ ಸೆಪ್ಟೆಂಬರ್ ೧೧ರಂದು ಅಖಿಲ ಭಾರತ ಮುಷ್ಕರ ನಡೆಸಲಾಗುವುದು. ಇದಾದ ಬಳಿಕವೂ ಸಮಸ್ಯೆಗಳಿಗೆ ಪರಿಹಾರ ದೊರೆಯದಿದ್ದರೆ ಸೆಪ್ಟೆಂಬರ್ ೨೮ರಿಂದ ೩೦ರವರೆಗೆ ಮತ್ತೊಂದು ಅಖಿಲ ಭಾರತ ಮುಷ್ಕರ ನಡೆಸುವುದಾಗಿ UಈಃU ಎಚ್ಚರಿಕೆ ನೀಡಿದೆ. ನಂತರವೂ ಬೇಡಿಕೆಗಳು ಈಡೇರದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಸಂಘಟನೆ ತಿಳಿಸಿದೆ.
ಪ್ರತಿಭಟನೆಯಲ್ಲಿ ಶಶಿಕಾಂತ ಕಾಳೆ, ಸಂತೋಷ್ ಪರ್ಮಾ, ಶೈಕ್ ನಿಸಾರ್, ಚಂದ್ರಶೇಖರ್, ವಿಷ್ಣುಕಾಂತ್, ಸಂತೋಷ್ ಕುಮಾರ್, ಪರಮೇಶ್ವರ ಸೀತಾ, ಪವನ್ ಪೂಜಾರಿ, ಸಚಿನ್ ಸೇರಿದಂತೆ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.






























