
ಗದಗ,ಆ.೫: ಮಾನವ ಕಳ್ಳಸಾಗಾಣಿಕೆ ಮತ್ತು ಜೀತ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸಲು ಹಾಗೂ ಇವುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಜಿಲ್ಲೆಯ ಎಲ್ಲಾ ಇಲಾಖೆಗಳು ಒಂದಾಗಿ ಶ್ರಮಿಸುವುದು ಅತ್ಯಗತ್ಯ ಎಂದು ಹಿರಿಯ ದಿವಾಣಿ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ.ಎಸ್. ಶಿವನಗೌಡ್ರ ತಿಳಿಸಿದರು.
ನಗರದ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ ಜಿಲ್ಲಾ ಬಾಲಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿ(ರಿ) ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ. ಉದಯೋನ್ಮಖ ಸ್ವಯಂಸೇವಾ ಸಂಸ್ಥೆ, ರಾಮನಗರ ಇವರ ಸಂಯುಕ್ತ ಆಶ್ರಯದಲ್ಲಿ ಮಾನವ ಕಳ್ಳಸಾಗಾಣಿ ಹಾಗೂ ಜೀತ ಪದ್ದತಿಕಾರ್ಮಿಕ ವಿರೋಧಿ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲಾಡಳಿತ ಭವನದ ಆವರಣದಲ್ಲಿ ಮಾನವ ಕಳ್ಳಸಾಗಾಣಕೆÂ ಹಾಗೂ ಜೀತ ಪದ್ದತಿ ಮುಕ್ತ ಕರ್ನಾಟಕ ನಮ್ಮ ಸಂಕಲ್ಪ ನಮ್ಮ ಜವಾಬ್ದಾರಿ ಎಂಬ ಘೋಷ ವಾಕ್ಯದೊಂದಿಗೆ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಮತ್ತು ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಜೀತ ಪದ್ಧತಿಯಿಂದ ಮುಕ್ತರಾದವರ ಅನುಭವ ಹಾಗೂ ಅವರನ್ನು ರಕ್ಷಿಸಿದ ವಿಧಾನಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸಿರುವುದಾಗಿ ತಿಳಿಸಿದ ಅವರು, ಗದಗ ಜಿಲ್ಲೆಯಲ್ಲೂ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲಾಡಳಿತದ ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ಈ ಜಾಗೃತಿ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಭರವಸೆ ನೀಡಿದರು.
ನಿಯಮಾನುಸಾರ ಕೆಲಸಕ್ಕೆ ತಕ್ಕ ಸೂಕ್ತ ವೇತನ ನೀಡದಿರುವುದು ಸಹ ಜೀತ ಪದ್ಧತಿಯ ಒಂದು ರೂಪವೇ ಆಗಿದೆ. ಈ ಕುರಿತು ಪ್ರತಿಯೊಬ್ಬರೂ ಜಾಗೃತರಾಗಬೇಕಿದೆ. ಮಾನವ ಕಳ್ಳಸಾಗಾಣಿಕೆ ಮತ್ತು ಜೀತ ಪದ್ಧತಿಗೆ ಮುಖ್ಯ ಕಾರಣ ಮಕ್ಕಳು ಶಾಲೆಯಿಂದ ಹೊರಗುಳಿಯುವುದು. ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ಗುರುತಿಸಿ ಅವರಿಗೆ ಶಿಕ್ಷಣದ ಹಕ್ಕು ತಲುಪಿಸಿದರೆ ಈ ಪಿಡುಗನ್ನು ಆರಂಭದಲ್ಲೇ ತಡೆಯಬಹುದು ಎಂದರು.
ಜೀತ ಪದ್ಧತಿ ಮತ್ತು ಮಾನವ ಕಳ್ಳಸಾಗಾಣಿಕೆಯಂತಹ ಕೃತ್ಯಗಳು ಹೆಚ್ಚಾಗಿ ನಾಲ್ಕು ಗೋಡೆಗಳ ಮಧ್ಯೆ (ರಹಸ್ಯವಾಗಿ) ನಡೆಯುತ್ತವೆ. ಇವುಗಳನ್ನು ಪತ್ತೆ ಹಚ್ಚಲು ಸಾರ್ವಜನಿಕರ ಸಹಕಾರ ಅಗತ್ಯ. ಸಂತ್ರಸ್ತರನ್ನು ಬರಿ ಮುಕ್ತಗೊಳಿಸುವುದಷ್ಟೇ ಅಲ್ಲದೇ, ಅವರಿಗೆ ಸೂಕ್ತ ಬಿಡುಗಡೆ ಪತ್ರ, ಆರ್ಥಿಕ ನೆರವು, ಕೌಶಲ್ಯ ತರಬೇತಿ ಹಾಗೂ ಉದ್ಯೋಗಾವಕಾಶ ಕಲ್ಪಿಸಿ ಪುನರ್ವಸತಿ ಕಲ್ಪಿಸಿದಾಗ ಮಾತ್ರ ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದರು.
ಎಲ್ಲಾ ಇಲಾಖೆಗಳ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿದ್ದು, ಜೀತ ಪದ್ಧತಿ ಹಾಗೂ ಮಾನವ ಕಳ್ಳಸಾಗಾಣಿಕೆ ಮುಕ್ತ ಜಿಲ್ಲೆಯನ್ನಾಗಿಸಲು ಜಂಟಿಯಾಗಿ ಶ್ರಮಿಸಲಾಗುವುದು ಎಂದು ಹಿರಿಯ ದಿವಾಣಿ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ. ಎಸ್. ಶಿವನಗೌಡ್ರ ಅವರು ಹೇಳಿದರು.
ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಅಧ್ಯಕ್ಷತೆ ವಹಿಸಿ ಮಾತನಾಡಿ ಹಕ್ಕಿನ ವಂಚನೆ ಮಾಡಿಕೊಂಡು ಜೀತದಾಳಾಗಿ ದುಡಿಸಿಕೊಳ್ಳುವುದು, ಅತ್ಯಲ್ಪ ವೇತನ ನೀಡುವುದು ಹಾಗೂ ಮಾನವೀಯತೆ ಇಲ್ಲದೆ ಕಷ್ಟಪಟ್ಟು ಕೆಲಸ ಮಾಡಿಸಿಕೊಳ್ಳುವುದು ಸಹ ಒಂದು ರೀತಿಯ ಜೀತ ಪದ್ಧತಿಯೇ ನಿರ್ಮೂಲನೆ ಆಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ತಿಳಿಸಿದರು.
ಜೀತ ಪದ್ಧತಿಯನ್ನು ನಡೆಸುವವರು ಮತ್ತು ಅದನ್ನು ನೋಡಿಯೂ ಸುಮ್ಮನಿರುವವರ ನಡುವೆ ದೊಡ್ಡ ವ್ಯತ್ಯಾಸವಿಲ್ಲ. ಅಂತಹ ಕೃತ್ಯಗಳನ್ನು ಕಂಡು ಸುಮ್ಮನಿರುವುದು ಬಹಳ ದೊಡ್ಡ ಅಪರಾಧ. ಸಾರ್ವಜನಿಕರ ಗಮನಕ್ಕೆ ಇಂತಹ ಪ್ರಕರಣಗಳು ಬಂದ ತಕ್ಷಣ ನೇರವಾಗಿ ತಡೆಯಲು ಸಾಧ್ಯವಾಗದಿದ್ದರೂ ಸಂಬAಧಪಟ್ಟ ಅಧಿಕಾರಿಗಳು ಮತ್ತು ಇಲಾಖೆಯ ಗಮನಕ್ಕೆ ತರುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.
ನಮ್ಮ ಜಿಲ್ಲೆಯಲ್ಲಿ ನಿಕಟಪೂರ್ವದಲ್ಲಿ ಜೀತ ಪದ್ಧತಿಯ ಪ್ರಕರಣಗಳು ಕಂಡುಬAದಿರಲಿಲ್ಲ. ಇತ್ತೀಚೆಗೆ ಬಂದಿದ್ದ ಒಂದು ದೂರಿನ ಮೇರೆಗೆ ಪರಿಶೀಲಿಸಿದಾಗ ಅದು ಬಾದಾಮಿಗೆ ಸಂಬAಧಪಟ್ಟಿರುವುದು ಎಂದು ತಿಳಿದುಬಂತು. ತಕ್ಷಣವೇ ಬಾದಾಮಿ ಅಧಿಕಾರಿಗಳೊಂದಿಗೆ ಸಂವಹನ ನಡೆಸಿ, ಸಂತ್ರಸ್ತರನ್ನು ಬಿಡುಗಡೆಗೊಳಿಸಿ ಅವರಿಗೆ ಸೂಕ್ತ ನೆರವು ಒದಗಿಸಲಾಗಿದೆ ಎಂದು ಹೇಳಿದರು.































