Home ಜಿಲ್ಲೆ ಚಿತ್ರಕಲಾ ಸ್ಪರ್ಧೆ

ಚಿತ್ರಕಲಾ ಸ್ಪರ್ಧೆ


ಲಕ್ಷೆ÷್ಮÃಶ್ವರ,ಆ.೫: ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ನಿನ್ನೆ ಸಣ್ಣ ನೀರಾವರಿ ಮತ್ತು ಅಂತರ್ಜಲ ನಿರ್ದೇಶನಾಲಯ ಬೆಂಗಳೂರು ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ ವಿಜಯನಗರ ಶುಗರ್ ಕಂಪನಿ ಗಂಗಾಪುರ ಇವರುಗಳ ಸಹಯೋಗದಲ್ಲಿ ನಮ್ಮ ಭೂಮಿ ನಮ್ಮ ನೀರು ನಮ್ಮ ಶಕ್ತಿ ಘೋಷ ವಾಕ್ಯದೊಂದಿಗೆ ನೀರಿದ್ದರೆ ನಾಳೆ ಎಂಬ ಜಲ ಸಂರಕ್ಷಣೆ ಮತ್ತು ಸಬ್ಬಳಕೆ ಕಾರ್ಯಕ್ರಮದ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾಲೂಕ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.


ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಭೂ ವಿಜ್ಞಾನಿ ಮಲ್ಲಪ್ಪ ಕಲ್ಲಾಪುರವರು ನೀರು ಮನುಕುಲದ ಅತ್ಯಂತ ಮಹತ್ವಪೂರ್ಣ ವಸ್ತುವಾಗಿದೆ ಅಂತರ್ಜಲ ಮಟ್ಟದ ಕುಸಿತದಿಂದಾಗಿ ನೀರಿನ ಹಾಹಾಕಾರ ಎಲ್ಲಡೆ ಕೇಳಿ ಬರುತ್ತಿದೆ.
ಜಲ ಮೂಲಗಳನ್ನು ಸಂರಕ್ಷಿಸದಿದ್ದರೆ ಅವುಗಳನ್ನು ಕಾಪಾಡಿಕೊಳ್ಳದಿದ್ದರೆ ಇಂದಲ್ಲ ನಾಳೆ ಭೂಮಿಯ ಮೇಲೆ ದೊಡ್ಡ ಗಂಡಾAತರ ಎದುರಾಗಲಿದೆ ಈ ನಿಟ್ಟಿನಲ್ಲಿ ಜಲಮೂಲಗಳ ಸಂರಕ್ಷಣೆಗಾಗಿ ಸಮುದಾಯದ ಸಹಭಾಗಿತ್ವ ಹಾಗೂ ಯುವಜನತೆಯ ಪಾಲ್ಗೊಳ್ಳುವಿಕೆ ಅತ್ಯಂತ ಮಹತ್ವಪೂರ್ಣವಾಗಿದೆ ಈ ನಿಟ್ಟಿನಲ್ಲಿ ಅದರಲ್ಲೂ ವಿಶೇಷವಾಗಿ ಯುವಕರು ಯುವ ಸಂಘಟನೆಗಳು ವಿದ್ಯಾರ್ಥಿಗಳು ಜಲ ಮೂಲಗಳ ಸಂರಕ್ಷಣೆಗೆ ವಿಶೇಷವಾದ ಯೋಜನೆಗಳನ್ನು ರೂಪಿಸಿ ಕೆರೆಕಟ್ಟೆಗಳನ್ನು ಹಳ್ಳ ಕೊಳ್ಳಗಳನ್ನು ಸಂರಕ್ಷಣೆ ಮಾಡದಿದ್ದರೆ ಮುಂದಿನ ಪೀಳಿಗೆ ನೀರಿಗಾಗಿ ಪರದಾಡುವ ಸ್ಥಿತಿ ಬರಲಿದ್ದು ಭವಿಷ್ಯತ್ತಿನ ನೀರಿನ ಕೊರತೆಯನ್ನು ನೀಗಿಸಲು ವಿದ್ಯಾರ್ಥಿಗಳು ಯುವಕರು ಇಂದೇ ಮುಂದಾಗಬೇಕು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕರಾದ ನೋಡಲ್ಲ ಅಧಿಕಾರಿಯಾದ ರಾಘವೇಂದ್ರ ಜೋಶಿ ಅವರು ಕಾರ್ಯಕ್ರಮದ ಕುರಿತು ಪ್ರಾಥಮಿಕ ಮಾತನಾಡಿ ವಿದ್ಯಾರ್ಥಿಗಳಲ್ಲಿ ಜಲ ಮೂಲ ಸಂರಕ್ಷಣೆಯ ಅರಿವು ಮತ್ತು ಜಾಗ್ರತಿ ಮೂಡಿಸಲು ಶಿಕ್ಷಣ ಇಲಾಖೆ ಇನ್ನಿತರ ಇಲಾಖೆಗಳ ಸಂಯೋಗದೊAದಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೇಳಿದರು.


ಚಿತ್ರಕಲಾ ಸ್ಪರ್ಧೆಯಲ್ಲಿ ತಾಲೂಕಿನ ಒಡೆಯರ ಮಲ್ಲಾಪುರ ಮುರಾರ್ಜಿ ವಸತಿ ಶಾಲೆಯ ರಾಹುಲ್ ಲಮಾಣಿ ಪ್ರಥಮ ಸ್ಥಾನ ಶಿರಹಟ್ಟಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ದಿವ್ಯ ಅಡ್ಡರಕಟ್ಟಿ ದ್ವಿತೀಯ ಸ್ಥಾನ ಲಕ್ಷೆ÷್ಮÃಶ್ವರದ ಪಿಎಸ್ ಬಿ ಡಿ ಯ ಮಂಜುಳ ಬಾಗಲಕೋಟೆ ತೃತೀಯ ಸ್ಥಾನವನ್ನು ಪಡೆದು ಕ್ರಮವಾಗಿ ೩೦೦೦ ಸಾವಿರ ೨,೦೦೦ ಮತ್ತು ೧೦೦೦ ನಗದು ಬಹುಮಾನವನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಬಿಸಿ ಪಟ್ಟೇದ ಬಿ ಎಂ ಯರಗುಪ್ಪಿ ಉಮೇಶ ನೇಕಾರ ಪಿ ಎಸ್ ಪುರಾಣಿಕ ಮಠ ಏನ್ ಬಿ ರೆಡ್ಡೇರ ಅಕ್ಕಮ್ಮ ಕುಂಬಾರ ರಾಜೇಶ ಉಮಚಗಿ ಸೇರಿದಂತೆ ಅನೇಕರಿದ್ದರು.