
ಚನ್ನಮ್ಮನ ಕಿತ್ತೂರು,ಸೆ.೧೯: ಗಣೇಶೋತ್ಸವ ಕೇವಲ ಧಾರ್ಮಿಕ ಹಬ್ಬವಲ್ಲ. ಅದು ನಮ್ಮ ಸಂಸ್ಕೃತಿ ಮತ್ತು ಕಲೆಯನ್ನು ಪ್ರೋತ್ಸಾಹಿಸುವ ಹಬ್ಬವಾಗಿದೆ. ಎಂದು ಸಮಾಜ ಸೇವಕರು ಹಾಗೂ ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಪ್ರಮೋದ ಕೊಚೇರಿ ಹೇಳಿದರು.
ಸಮೀಪದ ಖಾನಾಪೂರ ಪಟ್ಟಣದಲ್ಲಿ ಗಣೇಶೋತ್ಸವ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಚಿತ್ರಕಲೆ ಸ್ಪರ್ಧೆ ಮುಖ್ಯ ಅಥಿತಿಗಳಾಗಿ ಮಾತನಾಡಿದರು. ಇಂದಿನ ಕಾಲಘಟ್ಟದಲ್ಲಿ ಕಂಪ್ಯೂಟರ್, ಮೊಬೈಲ್ಗಳಿಂದ ದೂರವಿಡಲು ಚಿಕ್ಕಮಕ್ಕಳಲಿರುವ ಸೂಕ್ತ ಕಲಾ ಪ್ರತಿಭೆಯನ್ನು ಹೊರತರಲು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸ್ಪರ್ಧೆಗಳು ಅತ್ಯಂತ ಮುಖ್ಯವಾಗಿವೆ. ಯುವಪಿಳಿಗೆಯು ನಮ್ಮ ಸಂಸ್ಕೃತಿ ಉಳಿಸಿಕೊಂಡು ಕಲಾಕ್ಷೇತ್ರದಲ್ಲಿ ಮುಂದೆ ಬರಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ ನಿರ್ದೇಶಕ ಅರವಿಂದ ಪಾಟೀಲ, ಬಿಜೆಪಿ ಜಿಲ್ಲಾ ಮಹಿಳಾ ಕಾರ್ಯದರ್ಶಿ ಧನಶ್ರೀ ಸರ್ದೇಸಾಯಿ, ಮುಖಂಡರುಗಳಾದ ಸದಾನಂದ ಹೊಸೂರಕರ, ಭರಮಾನಿ ಪಾಟೀಲ, ಗರ್ಲಗುಂಜಿ ಪಿಕೆಪಿಎಸ್ ಅಧ್ಯಕ್ಷ ರಾಜಾಮ ಸಿದ್ದಾಣಿ, ಪರಶುರಾಮ ಗುರವ, ಯುವನಾಯಕ ಭರಮಾನಿ (ಭೂಷಣ) ತೊಂಬರೆ, ಸಂಜಯ ಗುರವ, ಗ್ರಾಮದ ಪಂಚ ಮಂಡಳಿ, ಮಕ್ಕಳು, ಸಾರ್ವಜನಿಕರು ಇನ್ನಿತರರಿದ್ದರು. ಸ್ಪರ್ಧೆಯಲ್ಲಿ ಆಯ್ಕೆಯಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.























