
ಮಾಲೂರು ಸೆ ೧೨: ರಸ್ತೆಗಳಲ್ಲಿ ಬೈಕ್‌ನಲ್ಲಿ ವೀಲಿಂಗ್ ಮಾಡುತ್ತಿದ್ದ ಪುಂಡ ಯುವಕರನ್ನು ಸೆರೆ ಹಿಡಿದ ಮಾಲೂರು ಪೊಲೀಸರು ಸ್ಕೂಟರ್ ನಲ್ಲಿ ಅಪಾಯಕಾರಿಯಾಗಿ ಮಾಲೂರು-ಕೋಲಾರ ರಸ್ತೆ ಮತ್ತು ಇತರೆ ಕಡೆಗಳಲ್ಲಿ ವೀಲಿಂಗ್ ಮಾಡುತ್ತಿದ್ದ ಪುಂಡ ಯುವಕರನ್ನು ಮಾಲೂರು ಪೋಲಿಸರು ಬಂದಿಸಿರುತ್ತಾರೆ.
ರಸ್ತೆಗಳಲ್ಲಿ ಬೈಕ್‌ನಲ್ಲಿ ವೀಲಿಂಗ್ ಮಾಡುತ್ತಿದ್ದ ಪುಂಡ ಯುವಕರನ್ನು ಸೆರೆ ಹಿಡಿದ ಮಾಲೂರು ಪೊಲೀಸರು ಸ್ಕೂಟರ್ ನಲ್ಲಿ ಅಪಾಯಕಾರಿಯಾಗಿ ಮಾಲೂರು-ಕೋಲಾರ ರಸ್ತೆ ಮತ್ತು ಇತರೆ ಕಡೆಗಳಲ್ಲಿ ವೀಲಿಂಗ್ ಮಾಡುತ್ತಿದ್ದ ಪುಂಡ ಯುವಕರು ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ಸಾರ್ವಜನಿಕರು ಅಪ್ ಲೋಡ್ ಮಾಡಿದ್ದು ಈ ಬಗ್ಗೆ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಕನ್ನಿಕಾ ಸಿಕ್ರಿ ವಾಲ್ ಆದೇಶಿಸಿದ್ದರಿಂದಾಗಿ ಮಾಲೂರು ಪೊಲೀಸರು ಕಾರ್ಯಪ್ರವೃತ್ತರಾಗಿ ಸ್ಕೂಟರ್ ಸಮೇತವಾಗಿ ವೀಲಿಂಗ್ ಮಾಡಿದ್ದ ಆಕಾಶ್ ೨)ಸಂಪಂತ್ ಕುಮಾರ್ ೨೧ ಮಾಲೂರು ಟೌನ್ ರವರನ್ನು ಸೆರೆ ಹಿಡಿದು ಅವರ ವಿರುದ್ದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.
ಈ ಪ್ರಕರಣದ ಪತ್ತೆ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಕನ್ನಿಕಾ ಸಿಕ್ರವಾಲ್ ಹೆಚ್.ಸಿ. ಜಗದೀಶ್ ಕೃಷ್ಣಪ್ಪ ವಿ. ಪೊಲೀಸ್ ಉಪಾಧೀಕ್ಷಕರು, ಕೋಲಾರ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ಮಾಲೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್, ರಾಮಪ್ಪ ಗುತ್ತೇರ ಪಿ.ಎಸ್.ಐ. ಶ ಶಾಂತಮ್ಮ ಹಾಗೂ ಹೆಡ್ ಕಾನ್ಸ್ ಟೇಬಲ್ಗಳಾದ ಚಿಕ್ಕಪಿಳ್ಳಪ್ಪ, ಅನಂತಮೂರ್ತಿ, ಹಾಗೂ ಅಪರಾಧ ವಿಭಾಗದ ಕಾನ್ಸ್ ಟೇಬಲ್ ಮುರಳಿ, ನಾಗರಾಜ್ ಪೂಜಾ, ಸಚ್ಚಿನ್ ರವರ ತಂಡ ಶ್ರಮಿಸಿರುತ್ತಾರೆ.
ಈ ಕಾರ್ಯಾಚರಣೆ ಮಾಡಿರುವ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿರುತ್ತಾರೆ.
































