
ಕಲಬುರಗಿ:ನಗರದ ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಪ್ರಿಪರೇಟರಿ ವಿಭಾಗದ 4ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂಟ್ರಾ ಸ್ಕೂಲ್ ಸ್ಪೆಲ್ಲಿಂಗ್ ಬೀ ಅಧ್ಯಾಯ 6 ದಿನಾಂಕ 11-09-2026 ಶುಕ್ರವಾರರಂದು ನಡೆಯಿತು. ಶರಣಬಸವೇಶ್ವರ ಸಂಸ್ಥೆಯ 9ನೆಯ ಪೀಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪಾಜಿ ಎಸ. ಅಪ್ಪಾ ಜ್ಯೋತಿ ಪ್ರಜ್ವಲಿಸಿ ಸ್ಪರ್ಧೆಗೆ ಚಾಲನೆ ನೀಡಿದರು.
ಮೊದಲನೆಯ ಸುತ್ತಿನಲ್ಲಿ ನಾಲ್ಕನೆಯತರಗತಿಯ 261 ವಿದ್ಯಾರ್ಥಿಗಳಿಗೆ ಬರವಣಿಗೆ ರೂಪದಲ್ಲಿ ಸ್ಪರ್ಧೆ ನಡೆಸಲಾಗಿತ್ತು. ಗರಿಷ್ಠ ಅಂಕಗಳನ್ನು ಪಡೆದ 52 ವಿದ್ಯಾರ್ಥಿಗಳು ಮೌಖಿಕವಾಗಿ ನೆಡೆಯುವ 2 ನೇ ಹಂತಕ್ಕೆ ಆಯ್ಕೆಯಾದರು. ವಿದ್ಯಾರ್ಥಿಗಳ ಭಾಷಾ ಕೌಶಲ್ಯ ಮತ್ತು ಶಬ್ದ ಭಂಡಾರ ಹೆಚ್ಚಿಸುವ ಉದ್ದೇಶದಿಂದ ಎಲ್ಲಾ ವಿಷಯಗಳ ಪಠ್ಯಪುಸ್ತಕದಿಂದ 1500 ಶಬ್ದಗಳನ್ನು ಆಯ್ದುಕೊಂಡು 2ನೇ ಹಂತದ ಸ್ಪರ್ಧೆ ಏರ್ಪಡಿಸಲಾಯಿತು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಬುದ್ಧಿವಂತಿಕೆಯಿಂದ ಉತ್ತರಿಸಿದರು. ಹೀಗೆ ಸುಮಾರು 18 ಸುತ್ತುಗಳ ಸ್ಪರ್ಧೆಯ ನಂತರ ವಿಜೇತರು ಹೊರಹೊಮ್ಮಿದರು. ವಿಜೇತರಾದ 4ನೇ ತರಗತಿಯ ವಿದ್ಯಾರ್ಥಿಗಳು: ಕುಮಾರಿ ಪರಿಣೀಕಾ ಪವನಕುಮಾರ್ ದೇಶಮುಖ (ಪ್ರಥಮ ಸ್ಥಾನ), ಕುಮಾರ ಜೊಹೈರ್ ಅಫ್ಜಾನ್ (ದ್ವಿತೀಯ ಸ್ಥಾನ) ಕುಮಾರಿ ಮೈರಾ ಪಾಟೀಲ (ತೃತೀಯ ಸ್ಥಾನ) ಪಡೆದರು. ವಿದ್ಯಾರ್ಥಿಗಳ ಪೈಪೆÇೀಟಿಯಲ್ಲಿ ಕಂಡುಬಂದಂತಹ ಅವರ ಶ್ರಮ ಮತ್ತು ಛಲ, ಶಿಕ್ಷಕರ ಮತ್ತು ಪೆÇೀಷಕರ ಮೆಚ್ಚುಗೆಗೆ ಕಾರಣವಾಯಿತು
ವಿದ್ಯಾರ್ಥಿಗಳ ಈ ಪ್ರಯತ್ನಕ್ಕೆ ಶರಣಬಸವೇಶ್ವರ ಸಂಸ್ಥಾನದ 9ನೇ ಯ ಪೀಠಾಧಿಪತಿ ಪೂಜ್ಯ ದೊಡ್ಡಪ್ಪಎಸ್. ಅಪ್ಪಾ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವನವರು ಭಾಷಾ ಕಲಿಕೆಯನ್ನು ಹೆಚ್ಚಿಸುವಂತಹ ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಪೆÇ್ರೀತ್ಸಹಕವಾಗಲೆಂದು ಆಶೀರ್ವದಿಸಿ ಹರ್ಷ ವ್ಯಕ್ತ ಪಡಿಸಿದ್ದಾರೆ.





























