Home ಮುಖಪುಟ ಸುದ್ದಿ ಶಂಕಿತ ನಕ್ಸಲನ ಬಂಧನ

ಶಂಕಿತ ನಕ್ಸಲನ ಬಂಧನ

ಪಾವಗಡ, ಸೆ. ೧೬- ನಕ್ಸಲರ ಹೆಸರಿನಲ್ಲಿ ಬೆದರಿಕೆ ಪತ್ರಗಳನ್ನು ಕಳುಹಿಸಿ ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದ ’ನಕಲಿ ನಕ್ಸಲ್’ ವೆಂಕಟೇಶನ್ ಎಂಬಾತನನ್ನು ತುಮಕೂರು ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕಡಮಲಕುಂಟೆ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ಬಂಧಿಸಿದ್ದಾರೆ.


ಕಳೆದ ನಾಲ್ಕೈದು ದಿನಗಳಿಂದ ನಿರಂತರ ಕೂಂಬಿಂಗ್ ನಡೆಸಿದ್ದ ಖಾಕಿ ಪಡೆ, ಕೊನೆಗೂ ಆರೋಪಿಯನ್ನು ಯಶಸ್ವಿಯಾಗಿ ಖೆಡ್ಡಾಗೆ ಕೆಡವಿದೆ.


ನಕ್ಸಲರ ಹೆಸರಿನಲ್ಲಿ ಪತ್ರ ಬರೆದು ಬೆದರಿಕೆಯೊಡ್ಡುತ್ತಿದ್ದ ನಕಲಿ ನಕ್ಸಲ್ ವೆಂಕಟೇಶ್ ಎಂಬಾತನನ್ನು ತುಮಕೂರು ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಸಫಲರಾಗಿದ್ದಾರೆ.


ತಾಲ್ಲೂಕಿನ ಕನಕಲಬಂಡೆ ಗ್ರಾಮದ ಆರೋಪಿ ವೆಂಕಟೇಶ್ ನಕ್ಸಲರ ಹೆಸರಿನಲ್ಲಿ ಬೆದರಿಕೆ ಪತ್ರಗಳನ್ನು ಕಳುಹಿಸಿ ಆತಂಕ ಸೃಷ್ಟಿಸುತ್ತಿದ್ದ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಿ, ಕಳೆದ ನಾಲ್ಕೈದು ದಿನಗಳಿಂದ ಗ್ರಾಮದ ಸುತ್ತಮುತ್ತ ವ್ಯಾಪಕ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದರು


ನಿರಂತರ ಶೋಧ ಕಾರ್ಯದ ಫಲವಾಗಿ ರಾತ್ರಿ ಸಮಯದಲ್ಲಿ ಕಡಮಲಕುಂಟೆ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ಅಡಗಿಕೊಂಡಿದ್ದ ಆರೋಪಿ ವೆಂಕಟೇಶನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ


ಬಂಧಿತ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಈತ ಬೆದರಿಕೆ ಪತ್ರ ಬರೆಯಲು ಇದ್ದ ಮುಖ್ಯ ಉದ್ದೇಶ ಹಾಗೂ ಈತನ ಹಿನ್ನೆಲೆಯ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.


ಪೊಲೀಸರ ಈ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.