
ಲಕ್ಷೆ÷್ಮÃಶ್ವರ,ಆ೨೬: ಪಟ್ಟಣದಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರ೩೦೬ ನೇ ಆರಾಧನಾ ಮಹೋತ್ಸವದ ಕಾರ್ಯಕ್ರಮಗಳು ದಿನಾಂಕ ೨೯ ರಿಂದ ೩೧ ರವರೆಗೆ ಜರುಗಲಿವೆ.
ಆರಾಧನಾ ಮಹೋತ್ಸವದ ಅಂಗವಾಗಿ ಪ್ರತಿ ದಿವಸ ಮುಂಜಾನೆ ೬:೦೦ ಯಿಂದ ೭:೦೦ವರೆಗೆ ರವರೆಗೆ ಸುಪ್ರಭಾತ ೭:೦೦ ಯಿಂದ ೯ರವರೆಗೆ ಶ್ರೀ ರಾಘವೇಂದ್ರ ಅಷ್ಟೋತ್ತರ ೯ ರಿಂದ ೧೦.೩೦ ರವರೆಗೆ ಪಂಚಾಮೃತ ಅಭಿಷೇಕ ೧೦.೩೦ ರಿಂದ ೧೧:೩೦ವರೆಗೆ ಪುರಾಣ ಪಾರಾಯಣ ಅಲಂಕಾರ ಪೂಜೆ ೧೧:೩೦ ರಿಂದ ೧೨ ರವರೆಗೆ ನೈವೇದ್ಯ ಹಸ್ತೋದಕ ಮಹಾಮಂಗಳಾರತಿ ೧೨:೩೦ ರಿಂದ ೩ ರವರೆಗೆ ಅನ್ನಸಂತಪಣೆ ಜರಗಲಿದೆ.
ನಂತರ ಸಾಯಂಕಾಲ ೫ ರಿಂದ ೬ರವರೆಗೆ ತಾರತಮ್ಯ ಭಜನೆ ೬:೦೦ಯಿಂದ ೭:೦೦ ಅವರಿಗೆ ರವರೆಗೆ ಉಪನ್ಯಾಸ ೭ ರಿಂದ ೯ ರವರೆಗೆ ಸಂಗೀತ ಸೇವೆ ೯ ರಿಂದ ೧೦ರವರೆಗೆ ಪಾಲಕಿ ಸೇವೆ ಮಂತ್ರ ಪುಷ್ಪ ಅಷ್ಟಾವಧಾನ ಮಹಾಮಂಗಳಾರತಿ ಜರುಗಲಿದೆ.
ದಿನಾಂಕ ೩೧ರಂದು ಸೋಮವಾರ ಬೆಳಗಿನ ೧೦:೦೦ ಗಂಟೆಗೆ ಶ್ರೀ ರಾಯರ ರಥೋತ್ಸವ ಜರುಗಲಿದೆ ಎಂದು ಸದ್ಭಕ್ತರು ಈ ಮೂರು ದಿನಗಳ ಕಾಲ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ಗುರು ಸಾರ್ವಭೌಮರ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀ ಮಠದ ಧರ್ಮದರ್ಶಿ ಎಚ್‌ಜಿ ಹೊಂಬಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






























