Home ಜಿಲ್ಲೆ ಕಲಬುರಗಿ ಪೌರ ಕಾರ್ಮಿಕರ ಸೇವೆಗೆ ಮೆಚ್ಚುಗೆ: ಸಮಸ್ಯೆಗಳಿಗೆ ತ್ವರಿತ ಪರಿಹಾರದ ಭರವಸೆ

ಪೌರ ಕಾರ್ಮಿಕರ ಸೇವೆಗೆ ಮೆಚ್ಚುಗೆ: ಸಮಸ್ಯೆಗಳಿಗೆ ತ್ವರಿತ ಪರಿಹಾರದ ಭರವಸೆ

ಆಳಂದ: ನಗರದ ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ನಾಗರಿಕರಿಗೆ ಅಗತ್ಯ ಸೇವೆಗಳನ್ನು ಒದಗಿಸುವಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ಪೌರ ಕಾರ್ಮಿಕರು ಸಮಯಪ್ರಜ್ಞೆ, ಕರ್ತವ್ಯನಿμÉ್ಠ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಮೂಲಕ ನಾಗರಿಕರ ಮೆಚ್ಚುಗೆಗೆ ಪಾತ್ರರಾಗಬೇಕು. ನೌಕರರಿಗೆ ಎದುರಾಗುವ ಸ್ಥಳೀಯ ಸಮಸ್ಯೆಗಳನ್ನು ಯಾವುದೇ ಅಡೆತಡೆ ಇಲ್ಲದೆ ಪರಿಹರಿಸಲು ಪುರಸಭೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪೌರ ಕಾರ್ಮಿಕರು ನಗರದ ಸ್ವಚ್ಛತೆ ಕಾಪಾಡುವಲ್ಲಿ ಮುಂಚೂಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿನಿತ್ಯ ಸಾರ್ವಜನಿಕರ ಆರೋಗ್ಯ ಮತ್ತು ನಗರದ ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ಅವರ ಸೇವೆ ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪುರಸಭೆಯ 83 ಮಂದಿ ಪೌರ ಕಾರ್ಮಿಕರಿಗೆ ಸಮವಸ್ತ್ರಗಳನ್ನು ಹಾಗೂ ತಲಾ 7 ಸಾವಿರ ಗೌರವಧನ ಮುಖ್ಯಾಧಿಕಾರಿಗಳು ವಿತರಿಸಿ ಪೌರ ಕಾರ್ಮಿಕರ ಸೇವೆಯನ್ನು ಗೌರವಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೌರ ನೌಕರ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಎನ್. ಬಟಗೇರಿ ಮಾತನಾಡಿ, ಪೌರ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸಂಘ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.
ಅತಿಥಿಯಾಗಿ ಸಿಪಿಐ ಶರಣಬಸಪ್ಪ ಕೊಡ್ಲಾ ಪಾಲ್ಗೊಂಡಿದ್ದರು. ಸಂಘದ ಗೌರವ ಅಧ್ಯಕ್ಷ ಶಿವರಾಯ ಸರಸಂಬಿ, ಉಪಾಧ್ಯಕ್ಷ ಮಾರುತಿ ಉಕ್ರಂಡೆ, ಕಾರ್ಯದರ್ಶಿ ಬೀರಪ್ಪ ಪೂಜಾರಿ, ಖಜಾಂಚಿ ಚಿದಾನಂದ ಜಂಗಲೆ, ಪ್ರಮುಖರಾದ ಹರಿಷ ಗೋವಿನ, ರಸೀದ್, ಆನಂದ ಕಾಶಿ, ಲಕ್ಷ್ಮಣ ತಳವಾರ, ಸಿದ್ಧಯ್ಯಾ ಸ್ವಾಮಿ, ಜಯ ಭಾರತಿ, ಜಯಶ್ರೀ ಲಾವುಟೆ, ಮಲ್ಲಿನಾಥ ಕಾಮದಿ, ನಾಗರಾಜ ಜಾನಕರ್, ಪಲ್ಲವಿ ದೇಶಪಾಂಡೆ, ಜೀವರಾಜ ದೇವನೂರ, ಮಂಜುನಾಥ ನಡಗೇರಿ, ಮಲ್ಲಮ್ಮಾ ಸಾಲೇಗಾಂವ, ಜ್ಞಾನೇಶ್ವರಿ ಜಂಗಲೆ, ಸಾಗರ ಸಾಲೇಗಾಂವ, ಸುಮಿತ್ರಾಬಾಯಿ ಸಿಂಗೆ ಸೇರಿದಂತೆ ಪೌರ ನೌಕರರು ಉಪಸ್ಥಿತರಿದ್ದರು. ಗಾಯತ್ರಿ ದೇಗುಲಮಡಿ ಸ್ವಾಗತಿಸಿದರು. ಮಲ್ಲಿನಾಥ ಕಾಮದಿ ನಿರೂಪಿಸಿದರು.