Home ಜಿಲ್ಲೆ ಜನರ ಸಮಸ್ಯೆ ಪರಿಹರಿಸಲು ಮನವಿ

ಜನರ ಸಮಸ್ಯೆ ಪರಿಹರಿಸಲು ಮನವಿ


ಚನ್ನಮ್ಮನ ಕಿತ್ತೂರ,ಸೆ.೨೨: ಇಂದಿರಾಗಾAಧಿವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ವಿಧವಾ, ಅಂಗವಿಕಲರ ವೇತನಗಳು ಸೇರಿ ಸರ್ಕಾರದಿಂದ ನೀಡಲಾಗುವ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಅರ್ಹ ಫಲಾನುಭವಿಗಳಿಗೆ ವಿಳಂಬವಿಲ್ಲದೆ ತಕ್ಷಣ ಮಂಜೂರು ಮಾಡಿ ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ಸರ್ಕಾರಕ್ಕೆ ಆಗ್ರಹಿಸಿದರು.
ಪಟ್ಟಣದ ಅರಳಿಕಟ್ಟೆ, ಗುರುವಾರ ಪೇಟೆ ಚನ್ನಮ್ಮನ ಪುತ್ಥಳಿ ಮಾರ್ಗವಾಗಿ ತಹಶೀಲ್ದಾರ್ ಕಚೇರಿವರೆಗೆ ಘೋಷಣೆ ಕೂಗಿ ಬೃಹತ್ ಪಾದಯಾತ್ರೆ ನಡೆಸಿ ತಹಶೀಲ್ದಾರ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದರು.


ಬಸ್ ಸಮಸ್ಯೆ ಪರಿಹರಿಸಬೇಕು. ಗ್ರಾಮಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ದೊರೆಯುವಂತೆ ನೂತನ ಬಸ್ ಡಿಪೋಗೆ ಅಗತ್ಯವಿರುವ?ÀÄ್ಟ ಬಸ್ ಒದಗಿಸಬೇಕು. ವಸತಿ ಯೋಜನೆಗಳಡಿ ಅರ್ಹ ಫಲಾನುಭವಿಗಳಿಗೆ ಹಣ ಮಂಜೂರು ಮಾಡಬೇಕು ಕರ್ನಾಟಕ ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳಿಗೆ ಬೇಗನೇ ಹಣ ಮಂಜೂರುಯಾಗÀಬೇಕು. ವ?Àðಗಳಿಂದ ಗ್ರಾಪಂ ಕಚೇರಿಗೆ ಅಲೆದಾಡುತ್ತಿರುವ ಫಲಾನುಭವಿಗಳ ಸಮಸ್ಯೆ ಪರಿಹರಿಸಬೇಕು. ಇ-ಆಸ್ತಿ ಉತಾರ ನೀಡುವಲ್ಲಿ ವಿಳಂಬ ನಿಲ್ಲಿಸಬೇಕು. ಹಳೆಮನೆಗಳ ಇ-ಆಸ್ತಿ ಉತಾರ ಅರ್ಜಿ ಸಲ್ಲಿಸುವವರಿಗೆ ಬೇಗನೇ ಉತಾರ ನೀಡಿ. ಕಚೇರಿಗೆ ಅಲೆದಾಟ ತಪ್ಪಬೇಕು.


ಬೆಳೆ ಪರಿಹಾರ, ಸಾಲಮನ್ನಾ,. ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ತಕ್ಷಣ ಬೆಳೆ ಪರಿಹಾರ ನೀಡಬೇಕು. ವಿದ್ಯುತ್ ಸಮಸ್ಯೆ ನಿಗದಿತ ಅವಧಿಯಲ್ಲಿ ೩ ಗಂಟೆ ವಿದ್ಯುತ್ ಪೂರೈಸಬೇಕು. ಪದೇಪದೇ ವಿದ್ಯುತ್ ಕಡಿತಗೊಳಿಸಬಾರದು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ ಕಲ್ಲನಗೌಡ ಪಾಟೀಲ ನಿಮ್ಮ ಪತ್ರದ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿ ಆದಷ್ಟು ಬೇಗನೇ ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದರು.
ಮಂಡಳ ಅಧ್ಯಕ್ಷ ಶ್ರೀಕರ ಕುಲಕರ್ಣಿ, ಬಿಜೆಪಿ ಮುಖಂಡೆ ಲಕ್ಷಿö್ಮÃ ವಿಕ್ರಮ್ ಇನಾಮದಾರ, ನ್ಯಾಯವಾದಿ, ರಾಜು ಹೊಸೆಟ್ಟಿ, ಬಸನಗೌಡ ಸಿದ್ರಾಮನಿ, ಸಂದೀಪ ದೇಶಪಾಡೆ, ಸರ್ಕಾರದ ನೀತಿ ಖಂಡಿಸಿ ಮಾತನಾಡಿದರು. ಮುಖಂಡರುಗಳಾದ ಮಾಜಿ ಜಿಪಂ ಅಧ್ಯಕ್ಷ ಚನ್ನಬಸಪ್ಪ ಮೊಕಾಶಿ, ಮಾಜಿ ಜಿಪಂ ಸದಸ್ಯ ರಾಧಾ ಕಾದ್ರೋಳ್ಳಿ, ಉಮಾದೇವಿ ಬಿಕ್ಕಣ್ಣವರ, ಬಸವÀರಾಜ ಮಾತನವರ, ಬಸವರಾಜ ಗಡೆನ್ನವರ, ಸರಸ್ವತಿ ಹೈಬತ್ತಿ, ಕೆಇಬಿ ಎಇಇ ಶಿವಾನಂದ ಬಾಗಲಕೋಟಿ, ಸಣ್ಣ ನೀರಾವರಿ ಇಲಾಖೆ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಕೆ.ಬಿ.ನಾಗರಾಜ, ತಹಶೀಲ್ದಾರ ಕಲ್ಲನಗೌಡ ಪಾಟೀಲ, ಪದಾಧಿಕಾರಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಇತರರಿದ್ದರು.