
ಕಲಬುರಗಿ,ನ.15-ಗೋದುತಾಯಿ ಬಡಾವಣೆಯಲ್ಲಿರುವ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ಇಂದು ವಾರ್ಷಿಕ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು.
ಕೃಷಿ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ.ರಾಜಕುಮಾರ ಅವರು ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ನಂತರ ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತ ಮಕ್ಕಳು ಶಾರೀರಿಕ, ಬೌದ್ಧಿಕ, ಮಾನಸಿಕ, ದೈಹಿಕವಾಗಿ ಸಶಕ್ತವಾದರೆ ಮಾತ್ರ ವ್ಯಕ್ತಿತ್ವ ವಿಕಸಿತವಾಗಲು ಸಾಧ್ಯ ಎಂದು ಹೇಳಿದರು. ಮಕ್ಕಳು ಆರೋಗ್ಯಕ್ಕೆ ಹೆಚ್ಚು ಮಹತ್ವ
ಕೊಡಬೇಕು ಆರೋಗ್ಯವೇ ಭಾಗ್ಯ ಎಂಬ ಕಲ್ಪನೆಗೆ ಒತ್ತು ಕೊಟ್ಟು ಮಕ್ಕಳು ಮೊಳಕೆ ಬಂದ ಆಹಾರ ಪದಾರ್ಥಗಳನ್ನು ಅತಿ ಹೆಚ್ಚು ಸೇವನೆ ಮಾಡಬೇಕು. ಅಲ್ಲದೆ ಪೌಷ್ಟಿಕಾಂಶವಿರುವ ಆಹಾರವನ್ನು ಸೇವಿಸಬೇಕು ಎಂದು ಸಲಹೆ ನೀಡಿದರು. ಶಾಲೆಯಲ್ಲಿ ಮಕ್ಕಳು ತರಗತಿ ಮುಗಿದ ಮೇಲೆ ಇಡಿ ದಿನ ಕ್ರೀಯಾಶೀಲರಾಗಿರುವುದು ಹೇಗೆ ಎಂಬುವುದನ್ನು ಪ್ರಾಯೋಗಿಕವಾಗಿ ತೋರಿಸಿದರು. ಮಕ್ಕಳು ಕ್ರೀಡೆಗೆ ಹೆಚ್ಚು ಮಹತ್ವ ಕೊಡಬೇಕು
ಕ್ರೀಡಾಶೀಲರಾದರೆ ರಕ್ತಪರಿಚಲನೆ ಸುಗಮವಾಗಿ ಆಗುತ್ತದೆ ಎಂದು ಒತ್ತು ಕೊಟ್ಟು ಹೇಳಿದರು.
ಕ್ರೀಡಾಕೂಟದಲ್ಲಿ ಶಾಲೆಯ ಮುಖ್ಯ ಗುರುಗಳಾದ ನಾಗೇಂದ್ರ ಬಡಿಗೇರ ದೈಹಿಕ ಶಿಕ್ಷಕರಾದ ಶಿವಾನಂದ ಕಲಶೆಟ್ಟಿ , ಮಹಾಂತೇಶ ಹರವಾಳ, ಶಿಕ್ಷಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.





















