ಕಲಬುರಗಿ: ಕರ್ನಾಟಕ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಮನೆಗೆ ಪಾರ್ಸಲ್ ಮೂಲಕ ಚಾಕು ಕಳಿಸಿಕೊಟ್ಟ ಕಾಂಗ್ರೆಸ್ ಕಾರ್ಯಕರ್ತರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿ ಎಸ್‍ಸಿ ಮೋರ್ಚಾ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದರು ಪ್ರತಿಭಟನೆ ನಡೆಸಲಾಯಿತು. ಡಾ. ಉಮೇಶ ಜಾಧವ, ಬಸವರಾಜ ಮತ್ತಿಮೂಡ, ಅಶೋಕ ಬಗಲಿ, ಮಹೇಂದ್ರ ಪೂಜಾರಿ,ಮಲ್ಲಿಕಾರ್ಜುನ ಜಿನಕೇರಿ,
ಧರ್ಮಣ್ಣ ಇಟಗಾ, ಬಾಬುರಾವ ಚವ್ಹಾಣ, ರವಿ ಮದನಕರ್,ರಾಣೋಜಿ ದೊಡ್ಡಮನಿ,ಸಂತೋಷ ಹಾದಿಮನಿ, ಶಿವಕುಮಾರ ಪಾಟೀಲ ಜಂಬಗಾ, ಅವ್ವಣ್ಣ ಮ್ಯಾಕೇರಿ,ಶರಣಪ್ಪ ತಳವಾರ, ರೇವಣಸಿದ್ದಪ್ಪ ಅಂಕಲಿ,ಶಿವಯೋಗಿ ನಾಗನಳ್ಳಿ ಸೇರಿದಂತೆ ಹಲವರು ಪಾಲ್ಗೊಂಡರು.