Home ಜಿಲ್ಲೆ ಕಲಬುರಗಿ ಸರ್ವಜ್ಞ ಶಾಲೆಯಲ್ಲಿ “ಜ್ಞಾನ ಮತ್ತು ಪ್ರತಿಭೆಯ ಮಹಾಸಂಗಮ”: 57ಕ್ಕೂ ಹೆಚ್ಚು ಶಾಲೆಗಳ 640 ವಿದ್ಯಾರ್ಥಿಗಳ ಭಾಗಿ

ಸರ್ವಜ್ಞ ಶಾಲೆಯಲ್ಲಿ “ಜ್ಞಾನ ಮತ್ತು ಪ್ರತಿಭೆಯ ಮಹಾಸಂಗಮ”: 57ಕ್ಕೂ ಹೆಚ್ಚು ಶಾಲೆಗಳ 640 ವಿದ್ಯಾರ್ಥಿಗಳ ಭಾಗಿ

ಕಲಬುರಗಿ,ನ.15-ಮಕ್ಕಳ ದಿನಾಚರಣೆ ನಿಮಿತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ ಹಾಗೂ ಸರ್ವಜ್ಞ ಆಂಗ್ಲ ಮಾಧ್ಯಮ ಶಾಲೆ ಜಂಟಿಯಾಗಿ ಏರ್ಪಡಿಸಿದ್ದ “ಜ್ಞಾನ ಮತ್ತು ಪ್ರತಿಭೆಯ ಮಹಾಸಂಗಮ” ಅಂತರ-ಶಾಲಾ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ 57ಕ್ಕೂ ಹೆಚ್ಚು ಶಾಲೆಗಳ 640ಕ್ಕೂ ಅಧಿಕ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಪೆÇ್ರ. ಚನ್ನಾರೆಡ್ಡಿ ಪಾಟೀಲ ನೆರವೇರಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಪರ್ಧೆಗಳ ಅಂಗವಾಗಿ, ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲರ ಸ್ಫೂರ್ತಿದಾಯಕ ನುಡಿಗಳನ್ನು ಆಧರಿಸಿ ಕನ್ನಡ ಹಾಗೂ ಆಂಗ್ಲ ಮಾಧ್ಯಮಗಳಲ್ಲಿ ಪ್ರತ್ಯೇಕವಾಗಿ ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದರ ಜೊತೆಗೆ, ಸಂಗೀತ ಹಾಗೂ ಚಿತ್ರಕಲಾ ಸ್ಪರ್ಧೆಗಳೂ ಸಹ ಆಯೋಜಿಸಲಾಗಿದೆ. ಇಂತಹ ಸ್ಪರ್ಧೆಗಳು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಹಾಗೂ ಅವರಿಗೆ ಅತ್ಯುತ್ತಮ ವೇದಿಕೆಯನ್ನು ಒದಗಿಸಲು ಸಹಕಾರಿಯಾಗಿವೆ. ಸರ್ವಜ್ಞ ಸಂಸ್ಥೆಯು ಮಕ್ಕಳಿಗೆ ಇಂತಹ ಪರಿಪೂರ್ಣ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ ಎಂದು ಶ್ಲಾಘಿಸಿದರು.
ಪಿ.ಡಿ.ಎ.ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಬಾಬುರಾವ್ ಶೇರಿಕಾರ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಡಾ.ಸೋಮಶೇಖರ್ ಅವರು ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಗುರುರಾಜ ಕುಲಕರ್ಣಿ ಅವರು ಎಲ್ಲರನ್ನೂ ಸ್ವಾಗತಿಸಿದರು. ಸರ್ವಜ್ಞ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾದ ಐಐಟಿಯನ್ ಅಭಿಷೇಕ್ ಚನ್ನಾರೆಡ್ಡಿ ಪಾಟೀಲ, ಸರ್ವಜ್ಞ ಶಾಲೆಯ ನಿರ್ದೇಶಕರಾದ ಸಂಗೀತ ಅಭಿಷೇಕ್ ಪಾಟೀಲ, ಸರ್ವಜ್ಞ ಶಾಲೆಯ ಪ್ರಾಂಶುಪಾಲರಾದ ಅನಿತಾ ಕುಲಕರ್ಣಿ, ವಿನುತಾ ಆರ್.ಬಿ., ಪ್ರಭುಗೌಡ ಸಿದ್ದಾರೆಡ್ಡಿ, ಅಮರಯ್ಯ ಹಿರೇಮಠ್, ಕರುಣೇಶ್ ಹಿರೇಮಠ್, ಪ್ರಭುಗೌಡ ಸೇರಿದಂತೆ ಹಲವು ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.