
ಪಾವಗಡ, ಆ. ೨೨- ಸಿನಿಮಾ ನಟನೆಯನ್ನು ಮೆಚ್ಚಿ ಶಿಳ್ಳೆ, ಕೇಕೆ ಹಾಕುವುದಲ್ಲ, ಅವರು ಮಾಡುತ್ತಿರುವ ಸಾಮಾಜಿಕ ಸೇವಾ ಕಾರ್ಯಗಳು ನಾವು ಸಹ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅನುಷ್ಠಾನಗೊಳಿಸಿದರೆ ಸಮಾಜಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳು ಆಗುತ್ತವೆ ಎಂದು ಹಿರಿಯ ಪತ್ರಕರ್ತ ಹಾಗೂ ಶಮಿ ವೃಕ್ಷ ಅಭಿವೃದ್ಧಿ ಸಮಿತಿಯ ಟ್ರಸ್ಟ ಕಾರ್ಯದರ್ಶಿ ಸತ್ಯ ಲೋಕೇಶ್ ತಿಳಿಸಿದರು.
ಪಟ್ಟಣದ ಬ್ರೈಟ್ ಫ್ಯೂಚರ್ ಕಂಪ್ಯೂಟರ್ ಕೇಂದ್ರದಲ್ಲಿ, ಗುರುವಾರ ತೆಲುಗು ಸಿನಿಮಾ ನಟ ಚಿರಂಜೀವಿ ಅವರ ಎಪ್ಪತ್ತೊಂದನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಟ್ಟಣದ ಮಹಿಳಾ ಪೌರ ಕಾರ್ಮಿಕರಿಗೆ ಹಾಗೂ ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಮಹಿಳಾ ಕಾರ್ಮಿಕರಿಗೆ ಸೀರೆಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸೇವಾ ಮನೋಭಾವನೆ ಹೊಂದಿರುವ ನಟ ಚಿರಂಜೀವಿ, ಅವರ ಅನುಕರಣೆ ಎಲ್ಲರಿಗೂ ದಾರಿದೀಪವಾಗಲಿದೆ ಎಂದು ತಿಳಿಸಿದರು.
ಸೇವಾ ಟ್ರಸ್ಟ್ ನ ಅಧ್ಯಕ ಮಾನಂ ಶಶಿಕಿರಣ್ ಮಾತನಾಡಿ, ಚಿರಂಜೀವಿ ಒಬ್ಬ ನಟನಾಗದೆ, ಬ್ಲಡ್ ಬ್ಯಾಂಕ್ ಪ್ರಾರಂಭಿಸಿ ರಕ್ತದ ಅವಶ್ಯಕತೆ ಇರುವವರಿಗೆ ರಕ್ತದಾನ ಮಾಡುವ ಮೂಲಕ ರಾಜ್ಯ ಮತ್ತು ದೇಶದಾದ್ಯಂತ ರಕ್ತದಾನದ ಮಹತ್ವ ಸಾರಿದ್ದಾರೆ. ಈ ನಟನ ೭೧ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಪೌರ ಕಾರ್ಮಿಕರಿಗೆ ಮತ್ತು ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಕಾರ್ಮಿಕರಿಗೆ ಸೀರೆಗಳನ್ನು ವಿತರಿಸಿ, ಬಡಮಹಿಳಾ ಕಾರ್ಮಿಕರು ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮ ಸಡಗರಗಳಿಂದ ಆಚರಿಸುವ ಉದ್ದೇಶದಿಂದ, ಸಮಾಜ ಸೇವೆಗೆ ಮುನ್ನುಡಿ ಬರೆದಿದ್ದೇವೆ ಎಂದು ತಿಳಿಸಿದರು.
ವಾಲ್ಮೀಕಿ ಜಾಗೃತಿ ವೇದಿಕೆಯ ಅಧ್ಯಕ್ಷ ಪಾಳ್ಳೇಕಾರ ಲೋಕೇಶ್ ಮಾತನಾಡಿ, ಸೇವಾ ಟ್ರಸ್ಟ್ ವತಿಯಿಂದ ಇಲ್ಲಿಯವರೆಗೆ ಸುಮಾರು ೧೩,೫೦೦ ಉಚಿತ ಕಣ್ಣಿನ ಶಸ್ತ್ರ ಚಿಕಿಸ್ತಾ ಶಿಬಿರಗಳನ್ನು ಏರ್ಪಡಿಸಿ ಬಡವರ ಸೇವಾ ಕಾರ್ಯ ಮಾಡುತ್ತಿರುವ ಮಾನಂ ಶಶಿಕಿರಣ್ ಅವರ ಸೇವಾ ಕಾರ್ಯವನ್ನು ಬಣ್ಣಿಸಿದರು.
ಇದೇ ವೇಳೆ ಪಟ್ಟಣದ ಆದರ್ಶ ನಗರದ ಅಂಗನವಾಡಿಯ ಕೇಂದ್ರದ ನವೀಕರಣಕ್ಕೆ ೧೫. ೦೦೦ ರೂಗಳ ಚೆಕ್ಕನ್ನು ಅಂಗನವಾಡಿ ಶಿಕ್ಷಕಿ ಭೂಲಕ್ಷ್ಮಿಗೆ ವಿತರಿಸಿದರು
ಚಿರಂಜೀವಿಯ ಅಪ್ಪಟ ಅಭಿಮಾನಿಗಳಾದ ಪುರಸಭೆಯ ಮಾಜಿ ಸದಸ್ಯರಾದ ರಿಜ್ವಾನ್ ಹುಲ್ಲಾ, ಷಾ ಬಾಬು, ನಂದೀಶ್, ನಾಗಲ ಮಡಿಕೆಯ ಮುತ್ಯಾಲಪ್ಪ , ಚಿರಂಜೀವಿಯ ಸಾಮಾಜಿಕ ಸೇವಾ ಕಾರ್ಯಗಳನ್ನು ಹಾಡಿಕೊಂಡಿದ್ದರು
ಕಾರ್ಯಕ್ರಮದಲ್ಲಿ ಬ್ರೈಟ್ ಫ್ಯೂಚರ್ ಕಂಪ್ಯೂಟರ್ ಕೇಂದ್ರದ ಸಿಇಒ ಶ್ರೀಧರ್ ಗುಪ್ತ,ಸೋಲಾರ್ ರಾಜಶೇಖರ್ ರೆಡ್ಡಿ, ಅಮಿಲಿನೇನಿ ನರೇಶ್,ಶಾರು, ಸಂಧ್ಯಾ ಮಾನಂ, ವಿಶಾಲ್ ಪ್ರಜ್ವಲ್, ಶಿಕ್ಷಕಿ ನಳಿನಾ, ಚಂದನ, ಶಿವಕುಮಾರ್,ಹರ್ಷ ಮತ್ತಿತರರು ಭಾಗವಹಿಸಿದ್ದರು.
ಸುಮಾರು ೧೦೦ ಮಹಿಳೆಯರಿಗೆ ಸೀರೆಗಳನ್ನು ವಿತರಿಸಲಾಯಿತು.
ಇದೇ ವೇಳೆ ಉನ್ನತಿ ತರಬೇತಿಯ ವಿದ್ಯಾರ್ಥಿಗಳಾದ ತುಳಸಿ, ನಕ್ಷತ್ರ, ಮೆಹರ್ ರಾಘವೇಂದ್ರ ತೇಜು, ವಿದ್ಯಾರ್ಥಿಗಳು, ಚಿರಂಜೀವಿಯ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು.

































