Home ಜಿಲ್ಲೆ ಅದ್ದೂರಿ ಮುಕುಟಸಪ್ತಮಿ ಕಾರ್ಯಕ್ರಮ

ಅದ್ದೂರಿ ಮುಕುಟಸಪ್ತಮಿ ಕಾರ್ಯಕ್ರಮ

ಚನ್ನಮ್ಮನ ಕಿತ್ತೂರ,ಆ೨೪: ಸಮೀಪದ ಮಂಗೇನಕೊಪ್ಪ ಗ್ರಾಪಂ ವ್ಯಾಪ್ತಿಯ ಕಸಮಳಗಿ (ಕೇಸರಮಳಗಿ) ಗ್ರಾಮದಲ್ಲಿ ಐತಿಹಾಸಿಕ ಶ್ರೀ ೧೦೦೮ ಪಾರ್ಶ್ವನಾಥ ತೀರ್ಥಂಕರ ಬಸದಿ ಆವರಣದ ನೂತನವಾಗಿ ನಿರ್ಮಾಣ ಹಂತದಲ್ಲಿರುವ ಕಲ್ಯಾಣ ಮಂಟಪದ ಸಮುದಾಯಭವನದಲ್ಲಿ ಭಗವಾನ ಶ್ರೀ ೧೦೦೮ ವರಸಿದ್ದಿ ಪಾರ್ಶ್ವನಾಥ ದಿಗಂಬರ ಜೈನ್ ಅಭಿವೃದ್ದಿ ಕಮಿಟಿ ಸಂಯುಕ್ತಾಶ್ರಯದಲ್ಲಿ ತೀರ್ಥಂಕರ ಮೋಕ್ಷಕಲ್ಯಾಣ ನಿಮಿತ್ಯ ಮುಕುಟಸಪ್ತಮಿ ಕಾರ್ಯಕ್ರಮ ಸಂಭ್ರಮ ಸಡಗರ ವಿಜೃಂಭಣೆಯಿAದ ನೆರವೇರಿತು.


ಟ್ರಸ್ಟ್ ಕಮೀಟಿ ಅಧ್ಯಕ್ಷ ರಾಜೇಂದ್ರ ಜಕ್ಕನವರ ಸಭೆಯ ಅಧ್ಯಕ್ಷತೆವಹಿಸಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು. ಬೆಳಿಗ್ಗೆ ೬ ಗಂಟೆಗೆ ಭಗವಂತರಿಗೆ ಪಂಚಾಮೃತ ಅಭಿಷೇಕ, ಸರ್ವ ದೋಷ ನಿವಾರಣೆ ನಿರ್ವಾಣ ಲಡ್ಡು ಸಮರ್ಪಣೆ, ಪದ್ಮಾವತಿ ದೇವಿಗೆ ಅಲಂಕಾರ ಮತ್ತು ಉಡಿ ಸಮರ್ಪಣೆ, ಶ್ರೀಕ್ಷೇತ್ರಪಾಲ ಬ್ರಹ್ಮದೇವನಿಗೆ ಉಡುಗೋರೆ, ಸವಾಲ, ಹೀಗೆ ಹಲವಾರು ಕಾರ್ಯಕ್ರಮ ಜರುಗಿದವು.


ಶ್ರವಣಬೆಳಗೋಳ ಸ್ವಸ್ತಿಶ್ರೀ ದಿ. ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿ, ಕೋಲ್ಲಾಪೂರದ ನಾಂದಣಿ ಜಿನಸೇನ ಭಟ್ಟಾರಕ ಸ್ವಾಮಿಜಿ, ಕೋಲ್ಲಾಪೂರದ ಲಕ್ಷಿö್ಮÃಸೇನ ಭಟ್ಟಾರಕ ಸ್ವಾಮಿಜಿ, ಶ್ರವಣಬೆಳಗೋಳ ನೂತನವಾಗಿ ಪಟ್ಟಾಧೀಶರಾದ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಪಟ್ಟಾರಕ ಭಟ್ಟಾಚಾರ್ಯ ಸ್ವಾಮಿಜೀ, ಪದ್ಮವಿಭೂಷಣ ಡಾ. ವೀರೇಂದ್ರ ಹೆಗಡೆ ಇವರ ಮಾರ್ಗದರ್ಶದಲ್ಲಿ ಕಾರ್ಯಕ್ರಮ ಜರುಗಿದವು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರುಗಳಾದ ಡಿಸಿಸಿ ಬ್ಯಾಂಕ ನಿರ್ದೇಶಕ ಅರವಿಂದ ಪಾಟೀಲ, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಎನ್‌ಡಬ್ಲೂಕೆಎಸ್‌ಆರ್‌ಟಿಸಿ ರಾಜ್ಯ ಉಪಾಧ್ಯಕ್ಷ ಸುನೀಲ್ ಹನಮನ್ನವರ, ಎಸ್‌ಡಿಎಂ ಕಾರ್ಯದರ್ಶಿ ಜೀವಂದರಕುಮಾರ, ಬಿಜೆಪಿ ಜಿಲ್ಲಾಧ್ಯಕ್ಷ ಸುಬಾಸ್ ಪಾಟೀಲ, ಮುಖಂಡ ಪ್ರಮೋದ ಕೊಚೇರಿ, ಮಾಜಿ ಜಿಪಂ ಸದಸ್ಯ ಜ್ಯೋತಿಬಾ ರೆಮಾನಿ, ಕಾರ್ಯದರ್ಶಿ ಅಭಿನಂದನ ಕೊಚೇರಿ, ಕಾರ್ಯದರ್ಶಿ ಸದಸ್ಯರು ಅಭಯ ಅವಲಕ್ಕಿ, ಡಿ.ಡಿ.ಪಾಟೀಲ, ರಾಜು ಕಟಗೇನ್ನವರ, ಸಿ.ಡಿ.ಪಾಟೀಲ, ಸುನೀಲ ಮಡ್ಡಿಮನಿ, ಉದಯ ದಡೋತಿ, ರಾಜಕುಮಾರ ಕಂಚಿ, ದೇವೇಂದ್ರ ಗೌಡರ, ರಾಜುಗೌಡ ಪಾಟೀಲ, ಸಂಜೀವ ಕಂಚಿ, ಅಶೋಕ ಬೆಂಡಿಗೇರಿ, ಗ್ರಾಮದ ಹಿರಿಯರು, ಟ್ರಸ್ಟ್ ಕಮೀಟಿ ಸರ್ವಸದಸ್ಯರು, ಸುತ್ತಮುತ್ತಲಿನ ಗ್ರಾಮಸ್ಥರು, ರಾಜ್ಯ-ಹೊರರಾಜ್ಯ ಜೈನ್ ಶ್ರಾವಕ-ಶ್ರಾವಕೀಯರಿದ್ದರು. ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.