Home ಜಿಲ್ಲೆ ಸಂಭ್ರಮದ ಈದ್‌ಮಿಲಾದ್

ಸಂಭ್ರಮದ ಈದ್‌ಮಿಲಾದ್

ಲಕ್ಷೆ÷್ಮÃಶ್ವರ,ಆ೨೭: ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಪ್ರವಾದಿ ಮೊಹಮ್ಮದ್ ಪೈಗಂಬರರ ೧೫೦೧ನೇ ಜಯಂತಿಯ ಅಂಗವಾಗಿ ಈದ್ ಮಿಲಾದ್ ಹಬ್ಬವನ್ನು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸಡಗರ, ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಈದ್ ಮಿಲಾದ್ ಅಂಗವಾಗಿ ಮುಸ್ಲಿಂ ಬಾಂಧವರು ಹೊಸ ಬಟ್ಟೆಗಳನ್ನು ಧರಿಸಿ ಬೆಳಗ್ಗೆಯೇ ಮಸೀದಿಗಳಿಗೆ ತೆರಳಿ ವಿಶೇಷ ನಮಾಜ್ ಹಾಗೂ ಪ್ರಾರ್ಥನೆ ಸಲ್ಲಿಸಿದರು. ನಮಾಜ್ ಬಳಿಕ ಪರಸ್ಪರ ಆಲಿಂಗನ ಮಾಡಿಕೊಂಡು ಈದ್ ಮಿಲಾದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಹಿರಿಯರು, ಯುವಕರು ಹಾಗೂ ಮಕ್ಕಳು ಸೇರಿದಂತೆ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಈದ್ ಮಿಲಾದ್ ಹಬ್ಬವು ಪ್ರೀತಿ, ತ್ಯಾಗ, ಸಹನೆ, ದಾನ, ಮಾನವೀಯತೆ ಹಾಗೂ ಸಹೋದರತ್ವದ ಮಹತ್ವವನ್ನು ಸಾರುತ್ತದೆ. ಸಮಾಜದಲ್ಲಿ ಎಲ್ಲರೂ ಪರಸ್ಪರ ಪ್ರೀತಿ, ಗೌರವ ಹಾಗೂ ಸೌಹಾರ್ದತೆಯಿಂದ ಬದುಕಬೇಕು ಎಂಬ ಪ್ರವಾದಿ ಮಹಮ್ಮದ್ ಪೈಗಂಬರರ ಸಂದೇಶ ಈದ್ ಮಿಲಾದ್ ಆಗಿದೆ.

ಲಕ್ಷೆ÷್ಮÃಶ್ವರದಲ್ಲಿ ನಡೆದ ಮೆರವಣಿಗೆಯಲ್ಲಿ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷರಾದ ಎಂ ಎಂ ಗದಗ ಯೂನಿಸ್ ಚೌದರಿ ಸಾಹೀಬ್ ಜಾನ್ ಹವಾಲ್ದಾರ್ ದಾದಾಪೀರ್ ಮುಚಾಲೆ ದಾದಾಪೀರ್ ತಂಬಾಕ ಹಾಫಿಜ್ ಉಸ್ಮಾನ್ ಹಜರತ್ಖಯಾಮ್ ಹಾಫೀಜ್ ಶಕೀಲ್ ಹಾಫೀಜ್ ರಿಯಾಜ್ ಉಸ್ಮಾನ್ ಖಾನ್ ಆಶ್ರಫಿ ಏನ್ ಎಂ ಗದಗ ಜಾಕೀರ್ ಹವಾಲ್ದಾರ್ ಅಫ್ಜಲ್ ರಿತ್ತಿ ಸೊಂಟಕೆ ಸೇರಿದಂತೆ ಸಮಾಜದ ಮುಖಂಡರು ಯುವಕರು ಪಾಲ್ಗೊಂಡಿದ್ದರು.