Home ಮುಖಪುಟ ಸುದ್ದಿ ಲೋಕಾ ದಾಳಿ: ೧೨ ಮನೆ ಸೇರಿ ಅಪಾರ ಆಸ್ತಿ ಪತ್ತೆ

ಲೋಕಾ ದಾಳಿ: ೧೨ ಮನೆ ಸೇರಿ ಅಪಾರ ಆಸ್ತಿ ಪತ್ತೆ

ಮೈಸೂರು, ನ.೧೯-ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಮೈಸೂರಿನ ಅರಣ್ಯ ಇಲಾಖೆಯ ಪ್ರಾದೇಶಿಕ ಅರಣ್ಯಾಧಿಕಾರಿ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಬರೋಬ್ಬರಿ ೧೨ ಮನೆಗಳು ಸೇರಿದಂತೆ ಆದಾಯಕ್ಕಿಂತ ಶೇ.೧೩೦ರಷ್ಟು ಅಧಿಕ ಪ್ರಮಾಣದ ಆಸ್ತಿ ಪತ್ತೆಹಚ್ಚಿದ್ದಾರೆ.


ಚಾಮರಾಜನಗರ ಲೋಕಾಯುಕ್ತ ಪೊಲೀಸರು ಅರಣ್ಯಾಧಿಕಾರಿ ಸುರೇಂದ್ರ ಅವರ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹೊಂದಿರುವುದು ದೃಢಪಟ್ಟಿದೆ. ಸ್ಥಿರ ಮತ್ತು ಚರಾಸ್ತಿಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ಅಮಾನತುಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸರ್ಕಾರಿ ಅಧಿಕಾರಿಯ ಮನೆ ಹಾಗೂ ಕಛೇರಿಗಳ ಮೇಲೆ ಚಾಮರಾಜನಗರ ಮತ್ತು ಮೈಸೂರು ಲೋಕಾಯುಕ್ತ ಪೊಲೀಸ್ ಠಾಣೆಯ ಸಿಬ್ಬಂದಿ ನಿನ್ನೆ
ದಾಳಿ ನಡೆಸಿದ್ದರು.