Home ಜಿಲ್ಲೆ ಕಲಬುರಗಿ ಸಾಂಸ್ಕøತಿಕ ಸ್ಪರ್ಧೆ:ಎಸ್‍ಬಿಆರ್ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ

ಸಾಂಸ್ಕøತಿಕ ಸ್ಪರ್ಧೆ:ಎಸ್‍ಬಿಆರ್ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ

ಕಲಬುರಗಿ,ನ.18: ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ (ಎಸ್.ಬಿ.ಆರ್.) ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ ನಡೆದ ಒಟ್ಟು 11 ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆ ಮೆರೆದಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಪ್ರತ್ಯೇಕವಾಗಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ 2026ನೇ ಸಾಲಿನಕಲಬುರಗಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಗಳನ್ನು ದಿನಾಂಕ 17-11-2026 ರಂದು ನಗರದ ಸೂಪರ್ ಮಾರ್ಕೆಟ್‍ನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಎಂ.ಪಿ.ಎಚ್.ಎಸ್.) ಆಯೋಜಿಸಲಾಗಿತ್ತು.
ಈ ಸ್ಪರ್ಧೆಗಳಲ್ಲಿ ಎಸ್.ಬಿ.ಆರ್. ಕಾಲೇಜಿನ 14 ವಿದ್ಯಾರ್ಥಿಗಳು (11 ಪ್ರಥಮ ಸ್ಥಾನ ಹಾಗೂ 1 ದ್ವಿತೀಯ ಸ್ಥಾನ) ವಿವಿಧವಿಭಾಗಗಳಲ್ಲಿ ವಿಜೇತರಾಗಿ ವಿಭಾಗ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ. ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಮಾತ್ರ ವಿಭಾಗ ಮಟ್ಟದ ಸ್ಪರ್ಧೆಗಳಿಗೆ ಅರ್ಹರಾಗಿರುತ್ತಾರೆ. ವಿಭಾಗ ಮಟ್ಟದ ಸ್ಪಧೆ9ಗಳು ನ.30 ರಂದು ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಲಿವೆ.
11 ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ದ್ವಿತೀಯ ಪಿಯುಸಿ ವಿದ್ಯಾಥಿ9ಗಳು ಒಟ್ಟು 5 ಪ್ರಥಮ ಸ್ಥಾನಗಳನ್ನು ಹಾಗೂ 1 ತೃತೀಯಸ್ಥಾನವನ್ನು ಪಡೆದುಕೊಂಡಿದ್ದಾರೆ.
ಚರ್ಚಾ ಸ್ಪರ್ಧೆ (ಕನ್ನಡ ): ಸಂಪದಾ ರೇವತಗಾಂವ-ಪ್ರಥಮ ಸ್ಥಾನ,ಜಾನಪದ ಗೀತೆ : ಸೌಮ್ಯಾ ಬೇಮಳಗಿ-ಪ್ರಥಮ ಸ್ಥಾನ,ಚಿತ್ರಕಲೆ ಸ್ಪರ್ಧೆ (ಫೈನ್ ಆಟ್ರ್ಸ್): ಶಿವಾಂಕ ಜಿ.ಎಂ. -ಪ್ರಥಮ ಸ್ಥಾನ,ವಿಜ್ಞಾನ ಮಾದರಿ ತಯಾರಿಕೆ: ಮೊಹಮ್ಮದ್ ಯೂಸುಫ್ ಅನ್ಸಾರಿ-ಪ್ರಥಮ ಸ್ಥಾನ,ರಸಪ್ರಶ್ನೆ(ಸಾಮಾನ್ಯ ಜ್ಞಾನ): ಚೇತನ ಎಂ.ಜಿ. ಹಾಗೂ ಮಂಜುನಾಥ ರೆಡ್ಡಿ-ಪ್ರಥಮ ಸ್ಥಾನ, ಜಾನಪದ ನೃತ್ಯ : ಅದಿತಿ ರಾಘವೇಂದ್ರ ಸಿ.ಎ.ತೃತೀಯ ಸ್ಥಾನ ಪಡೆದಿದ್ದಾರೆ
ವಿವಿಧ 11 ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪ್ರಥಮ ಪಿಯುಸಿ ವಿದ್ಯಾಥಿ9ಗಳು ಒಟ್ಟು 6 ಪ್ರಥಮ ಸ್ಥಾನಗಳನ್ನು ಹಾಗೂ 1 ದ್ವಿತೀಯ ಸ್ಥಾನವನ್ನುಪಡೆದುಕೊಂಡಿದ್ದಾರೆ.
ವಿಜ್ಞಾನ ಮಾದರಿ ತಯಾರಿಕೆ: ಭೂಮಿಕಾ ಮಲ್ಲಿಕಾರ್ಜುನ ಬೆಳ್ಳೆ -ಪ್ರಥಮ ಸ್ಥಾನ,ಜಾನಪದ ನೃತ್ಯ : ಮುಗ್ಧಾ ಎಸ್. ಪಾಟೀಲ -ಪ್ರಥಮ ಸ್ಥಾನ,ಏಕಪಾತ್ರಾಭಿನಯ: ಭಾಗ್ಯಶ್ರೀ ನಿಂಬಾಳ-ಪ್ರಥಮ ಸ್ಥಾನ,
ಪ್ರಬಂಧ (ಇಂಗ್ಲಿಷ್ ): ಸಮೀಕ್ಷಾ ಸದಲಾಪೂರ-ಪ್ರಥಮ ಸ್ಥಾನ,ಚರ್ಚಾ ಸ್ಪರ್ಧೆ (ಕನ್ನಡ ): ವೈಷ್ಣವಿ ಬಿಜಾಪುರ-ಪ್ರಥಮ ಸ್ಥಾನ,ರಸಪ್ರಶ್ನೆ (ಸಾಮಾನ್ಯ ಜ್ಞಾನ): ಶ್ರೇಯಸ್ ಎಸ್.ಬಿ. ಹಾಗೂ ರಾಮಚಂದ್ರ ವಿ.ಜಿ.-ಪ್ರಥಮ ಸ್ಥಾನ,
ಚಿತ್ರಕಲೆ (ಫೈನ್ ಆಟ್ರ್ಸ್): ಶೌರ್ಯಾ ನಟ್ವೆ -ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿಭಾಗ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಹಾಗೂ9ನೇ ಪೀಠಾಧಿಪತಿ ಪೂಜ್ಯ ಶ್ರೀ ದೊಡ್ಡಪ್ಪ ಅಪ್ಪ ಅವರು ಆಶೀರ್ವದಿಸಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಬಸವರಾಜ ದೇಶಮುಖ ಹಾಗೂಕಾಲೇಜಿನ ಪ್ರಾಚಾರ್ಯಎನ್.ಎಸ್. ದೇವರಕಲ್,ಕಾಲೇಜಿನ ಮೇಲ್ವಿಚಾರಕ ಡಾ. ಶ್ರೀಶೈಲ್ ಹೊಗಾಡೆ ಹಾಗೂ ಸಮಸ್ತ ಪ್ರಾಧ್ಯಾಪಕ ವೃಂದದವರು ಹರ್ಷ ವ್ಯಕ್ತಪಡಿಸಿ,ವಿಭಾಗ ಮಟ್ಟದ ಸ್ಪರ್ಧೆಗಳಲ್ಲಿಯೂ ಹೆಚ್ಚಿನ ಯಶಸ್ಸು ಸಾಧಿಸುವಂತೆ ಶುಭ ಹಾರೈಸಿದ್ದಾರೆ.