
ಕಲಬುರಗಿ,ನ.15-ಕಲಬುರಗಿಯಿಂದ ಜಂಬಗಾಕ್ಕೆ ಹೋಗುವ ರಸ್ತೆಯ ಪಾಂಡವರಾಣಿ ಗುಡಿ ಹತ್ತಿರದ ಖುಲ್ಲಾ ಜಾಗದಲ್ಲಿ ಬೇವಿನ ಮರದ ಕೆಳಗೆ ಕುಳಿತು ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್-ಅರ್ಬನ್ ಪೊಲೀಸ್ ಠಾಣೆ ಪಿಐ ನಟರಾಜ ಲಾಡೆ, ಸಿಬ್ಬಂದಿಗಳಾದ ಪುಂಡಲಿಕ, ಜಗದೀಶ, ಗುಂಡೇರಾಯ, ಶಿವಕುಮಾರ, ಕುಮಾರ, ಶಿವರಾಜ ಅವರು ದಾಳಿ ನಡೆಸಿ 13 ಜನರನ್ನು ಬಂಧಿಸಿದ್ದಾರೆ.
ಪ್ರಕಾಶ ರಾಠೋಡ್, ರೇವಣಸಿದ್ದಪ್ಪ ಬಡಿಗೇರ, ಸಿದ್ದರಾಮ ಮಾಲಿಪಾಟೀಲ, ಮಲ್ಲಿಕಾರ್ಜುನ ಗಿರೆಗೋಳ, ವಿನೋದ ಜೇವರ್ಗಿ, ಲಕ್ಷ್ಮಣ ಜಮಾದಾರ, ಚಂದ್ರಶೇಖರ ಪೂಜಾರಿ, ಶರಣಬಸಪ್ಪ ಚಕ್ಕಿ, ರಮೇಶ ಹಿಪ್ಪರಗಿ, ರಾಜಕುಮಾರ ಮಾಲಿಪಾಟೀಲ, ಜಗದೀಶ ಪೂಜಾರಿ, ಮಂಜುನಾಥ ದೇಗಾಂವ, ಬಸವರಾಜ ತೊನ್ಸಳ್ಳಿ ಎಂಬುವವರನ್ನು ಬಂಧಿಸಿ 6,080 ರೂ.ನಗದು, ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೋಲಾರ್ ಮೋಟಾರ್ ಕಳವು
ಕಲಬುರಗಿ ತಾಲ್ಲೂಕಿನ ಕವಲಗಾ (ಕೆ) ಗ್ರಾಮದ ರೈತ ಮರೆಪ್ಪ ಚಿಗರಿ ಅವರ ಹೊಲದಲ್ಲಿನ 45000 ರೂ.ಮೌಲ್ಯದ 5 ಹೆಚ್.ಪಿ.ಸೋಲಾರ್ ಮೋಟಾರ್ ಮತ್ತು 15 ಸಾವಿರ ರೂ.ಮೌಲ್ಯದ 350 ಫೀಟ್ ಕೇಬಲ್ ವಾಯರ್ನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಸಂಬಂಧ ಮರೆಪ್ಪ ಚಿಗರಿ ಅವರು ಫರಹತಾಬಾದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.





















