Home ಜಿಲ್ಲೆ ಜಮಖಂಡಿಯಲ್ಲಿ ರೈತರ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭ

ಜಮಖಂಡಿಯಲ್ಲಿ ರೈತರ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭ

ಸಂಜೆ ವಾಣಿ ವಾರ್ತೆ |
ಜಮಖಂಡಿ:ಕಬ್ಬಿಗೆ ಪ್ರತಿ ಟನ್‌ಗೆ ೫,೫೦೦ ದರ ನಿಗದಿಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ನಗರದ ತಾಲೂಕು ಆಡಳಿತ ಸೌಧದ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದರು.
ಕಬ್ಬಿನ ಬೆಲೆ ನಿಗದಿ, ಹಿಂದಿನ ಹಂಗಾಮಿನ ಬಾಕಿ ಹಣ ಪಾವತಿ ಹಾಗೂ ಪ್ರಸಕ್ತ ಹಂಗಾಮಿಗೆ ಸೂಕ್ತ ದರ ಘೋಷಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊAಡು ರೈತರು ಹೋರಾಟಕ್ಕೆ ಇಳಿದಿದ್ದಾರೆ. ಬೇಡಿಕೆಗಳು ಈಡೇರುವವರೆಗೂ ಧರಣಿ ಮುಂದುವರಿಸುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ದರ ಘೋಷಣೆ ಬಳಿಕವೇ ಕಾರ್ಖಾನೆ ಆರಂಭಿಸಲಿ: ರಾಜು ನದಾಫ್‌ರೈತ ಮುಖಂಡ ರಾಜು ನದಾಫ್ ಮಾತನಾಡಿ, ಕಬ್ಬಿಗೆ ಪ್ರತಿ ಟನ್‌ಗೆ ೫,೫೦೦ ದರ ನೀಡಬೇಕೆಂದು ಆಗ್ರಹಿಸಿ ಕಳೆದ ಒಂದು ತಿಂಗಳಿನಿAದ ವಿವಿಧ ಹಂತಗಳಲ್ಲಿ ಹೋರಾಟ ನಡೆಸಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ಪ್ರತಿಭಟನೆ, ಪಾದಯಾತ್ರೆ ಹಾಗೂ ಜಿಲ್ಲಾಧಿಕಾರಿ ಮತ್ತು ತಾಲೂಕು ಆಡಳಿತ ಕಚೇರಿಗಳ ಮುಂದೆ ಹೋರಾಟ ನಡೆಸಿದರೂ ರೈತರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ದೊರೆತಿಲ್ಲ ಎಂದು ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ನಡೆದ ಹಿನ್ನೆಲೆಯಲ್ಲಿ ಬೇಡಿಕೆ ಈಡೇರುವ ನಿರೀಕ್ಷೆ ಇತ್ತು. ಆದರೆ ಸಭೆಯ ಬಳಿಕ ನಿರೀಕ್ಷಿತ ಫಲಿತಾಂಶ ದೊರೆಯದ ಕಾರಣ ಅಹೋರಾತ್ರಿ ಧರಣಿ ಆರಂಭಿಸಲಾಗಿದೆ ಎಂದರು.
ಜಮಖAಡಿ, ಬಿಳಗಿ, ಮುಧೋಳ ಸೇರಿದಂತೆ ಸುತ್ತಮುತ್ತಲಿನ ತಾಲೂಕುಗಳ ರೈತರು ಹೋರಾಟದಲ್ಲಿ ಭಾಗವಹಿಸಬೇಕು. ಜಮಖಂಡಿ ತಾಲೂಕಿನ ೪೮ ಗ್ರಾಮಗಳಿಂದ ತಲಾ ೧೦೦ ರೈತರು ಭಾಗವಹಿಸಿದರೂ ಸುಮಾರು ೪,೮೦೦ ರೈತರು ಹೋರಾಟಕ್ಕೆ ಬೆಂಬಲ ನೀಡಿದಂತಾಗುತ್ತದೆ. ಇದು ಪಕ್ಷಾತೀತ ಹಾಗೂ ಜಾತ್ಯತೀತ ಹೋರಾಟವಾಗಿದ್ದು, ರೈತರು ಒಗ್ಗಟ್ಟಿನಿಂದ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಕಳೆದ ಹಂಗಾಮಿನಲ್ಲಿ ಕಬ್ಬಿಗೆ ಸಂಬAಧಿಸಿದAತೆ ಸರ್ಕಾರ ಮತ್ತು ಕಾರ್ಖಾನೆ ಮಾಲೀಕರಿಂದ ಪಾವತಿಸಬೇಕಿದ್ದ ಮೊತ್ತದಲ್ಲಿ ಕೆಲವು ಕಾರ್ಖಾನೆಗಳಿಂದ ೫೦ ಬಾಕಿ ಉಳಿದಿದ್ದು, ಅದನ್ನು ಪಾವತಿಸಬೇಕು. ಪ್ರಸಕ್ತ ಹಂಗಾಮಿನ ಕಬ್ಬಿನ ದರವನ್ನು ಮುಂಚಿತವಾಗಿ ಘೋಷಿಸಿ ನಂತರ ಕಾರ್ಖಾನೆಗಳನ್ನು ಆರಂಭಿಸಬೇಕು. ರೈತರು ಕಾರ್ಖಾನೆಗಳ ಆರಂಭಕ್ಕೆ ವಿರೋಧಿಗಳಲ್ಲ; ಸೂಕ್ತ ದರ ಘೋಷಣೆಯೊಂದಿಗೆ ಕಾರ್ಖಾನೆಗಳು ಆರಂಭವಾಗಬೇಕು ಎಂಬುದೇ ನಮ್ಮ ಒತ್ತಾಯ ಎಂದು ಸ್ಪಷ್ಟಪಡಿಸಿದರು.
ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಲಿ: ಸಚಿನ್ ಖಿದ್ರಾಪುರ
ರೈತ ಮುಖಂಡ ಸಚಿನ್ ಖಿದ್ರಾಪುರ ಮಾತನಾಡಿ, ರೈತರಿಗೆ ಕಬ್ಬಿನ ಬಿಲ್ ಪಾವತಿಯಲ್ಲಿ ಆಗುತ್ತಿರುವ ಅನ್ಯಾಯವನ್ನು ತಡೆಯಲು ಹಾಗೂ ಪ್ರತಿ ಟನ್‌ಗೆ ೫,೫೦೦ ದರ ಪಡೆಯಲು ಹೋರಾಟ ಆರಂಭಿಸಲಾಗಿದೆ ಎಂದರು.
ಕಬ್ಬಿನ ತೂಕ ಮತ್ತು ಪಾವತಿ ಪ್ರಕ್ರಿಯೆಯಲ್ಲಿ ರೈತರಿಗೆ ಅನ್ಯಾಯವಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಕಬ್ಬಿನ ಬೆಲೆ ನಿಗದಿಗೆ ಸಂಬAಧಿಸಿದAತೆ ಕೇಂದ್ರ ಸರ್ಕಾರದ ಎಂಎಸ್‌ಪಿ ಮೊತ್ತವನ್ನು ೩೧ರಿಂದ ೬೦ಕ್ಕೆ ಹೆಚ್ಚಿಸುವಂತೆ ಹಾಗೂ ರಾಜ್ಯ ಸರ್ಕಾರವು ಪ್ರತಿ ಟನ್‌ಗೆ ಹೆಚ್ಚುವರಿಯಾಗಿ ೧,೦೦೦ ನೀಡುವಂತೆ ಮನವಿ ಮಾಡಿದ್ದೇವೆ. ಆದರೆ ಬೇಡಿಕೆಗಳಿಗೆ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಕಬ್ಬಿಗೆ ೫,೫೦೦ ದರ ನೀಡುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ರೈತರ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು
ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಶೈಲ ಬೂಮರ್ ಮಾತನಾಡಿ, ರೈತರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಕಬ್ಬಿನ ದರಕ್ಕೆ ಸಂಬAಧಿಸಿದAತೆ ಸೂಕ್ತ ನಿರ್ಧಾರ ಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಧರಣಿ ಹಿಂಪಡೆಯಲು ಅಧಿಕಾರಿಗಳ ಮನವೊಲಿಕೆ ಯತ್ನರೈತರ ಅಹೋರಾತ್ರಿ ಧರಣಿ ಆರಂಭವಾದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅನೀಲ ಬಡಗೇರ ಹಾಗೂ ಸಿಪಿಐ ಮಲ್ಲಪ್ಪ ಮಡ್ಡಿ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತ ಮುಖಂಡರೊAದಿಗೆ ಸುದೀರ್ಘ ಚರ್ಚೆ ನಡೆಸಿದರು. ಧರಣಿ ಹಿಂಪಡೆಯುವAತೆ ಮನವೊಲಿಸಲು ಪ್ರಯತ್ನಿಸಿದರು. ಆದರೆ ರೈತರು ತಮ್ಮ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದು ಹೋರಾಟ ಹಿಂಪಡೆಯಲು ನಿರಾಕರಿಸಿದರು.
ಪ್ರತಿಭಟನಾ ಸ್ಥಳದಲ್ಲೇ ಊಟ ಮಾಡಿದ ರೈತರು ಅಹೋರಾತ್ರಿ ಧರಣಿಯನ್ನು ಮುಂದುವರಿಸಿದರು. ಕಬ್ಬಿನ ದರ ಘೋಷಣೆ ಹಾಗೂ ಇತರ ಬೇಡಿಕೆಗಳ ಈಡೇರಿಕೆಗಾಗಿ ರೈತರ ಹೋರಾಟ ಮುಂದುವರಿದಿದೆ.
ರೈತ ಮುಖಂಡರು ಭಾಗಿ
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಸಿದ್ದಪ್ಪ ಬನಜನವರ, ರಾಹುಲ ಸಿಂಧೆ, ಮಹಾವೀರ ಖಿದ್ರಾಪುರ, ಶ್ರವಣಕುಮಾರ ದಳವಾಯಿ, ಚೈತನ ಮುತ್ತೂರ, ಸಿದ್ದು ಕೋರಿ, ಪರಪ್ಪ ಪರಮಗೊಂಡ, ದರೆಪ್ಪ ಕೋರಿ, ರಾಜು ಭೋಸಲೆ, ಅನೀಲ ವರೆ, ಶಿವಾಜಿ ವರೆ, ಕುಮಾರ ವರೆ, ರಮೇಶ ಹಸರಡ್ಡಿ, ಮಹಾದೇವ ಪಾಟೀಲ, ಬಸವರಾಜ ಲಿಂಗನೂರ, ಮಲ್ಲಪ್ಪ ಕೋರಿ, ಸಂತೋಷ ಮರನೂರ, ರಮೇಶ ಕಿಶೂರಿ ಸೇರಿದಂತೆ ಇನ್ನಿತರ ರೈತರು ಭಾಗವಹಿಸಿದ್ದರು.