
ಮುಂಬೈ, ಅ. 27- ಬಾಲಿವುಡ್ನ “ಕಿಂಗ್” ಶಾರುಖ್ ಖಾನ್ ಮತ್ತೊಮ್ಮೆ ಬೆಳ್ಳಿಪರದೆಯನ್ನು ಅಲುಗಾಡಿಸಲು ಸಿದ್ಧರಾಗಿದ್ದಾರೆ. 2023ರಲ್ಲಿ “ಪಠಾಣ್” ಮತ್ತು “ಜವಾನ್” ನಂತಹ ಸಾವಿರ ಕೋಟಿ ಗಳಿಕೆಯ ಸಾರ್ವಕಾಲಿಕ ಬ್ಲಾಕ್ಬಸ್ಟರ್ಗಳೊಂದಿಗೆ ಬಾಕ್ಸ್ ಆಫೀಸ್ನಲ್ಲಿ ಐತಿಹಾಸಿಕ ಪುನರಾಗಮನ ಮಾಡಿ ದಾಖಲೆ ಬರೆದಿದ್ದ ಶಾರುಖ್ ಖಾನ್, ದೀರ್ಘ ವಿರಾಮದ ನಂತರ ಈಗ ತಮ್ಮ ಮುಂದಿನ ಬಹುನಿರೀಕ್ಷಿತ ದೊಡ್ಡ ಬಿಡುಗಡೆಯಾದ “ಕಿಂಗ್” ಚಿತ್ರದ ಮೇಲೆ ಸಂಪೂರ್ಣವಾಗಿ ಗಮನಹರಿಸಿದ್ದಾರೆ. 2026ರ ವರ್ಷವು ಶಾರುಖ್ ಖಾನ್ ಅವರ ವೃತ್ತಿಜೀವನದಲ್ಲಿ ಅತ್ಯಂತ ವಿಶೇಷ ಹಾಗೂ ಪ್ರಮುಖ ವರ್ಷವೆಂದು ಪರಿಗಣಿಸಲಾಗಿದ್ದು, ಈ ಹೈ-ವೋಲ್ಟೇಜ್ ಆಕ್ಷನ್-ಥ್ರಿಲ್ಲರ್ ಸಿನಿಮಾವು 2026ರ ಡಿಸೆಂಬರ್ 24ರಂದು ಕ್ರಿಸ್ಮಸ್ ಹಬ್ಬದ ಶುಭ ಸಂದರ್ಭದಲ್ಲಿ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಧಮಾಕ ಎಬ್ಬಿಸಲಿದೆ.
ಇದರ ನಡುವೆಯೇ ತಯಾರಕರು ಇತ್ತೀಚೆಗೆ “ಕಿಂಗ್” ಚಿತ್ರದ ಅತ್ಯಂತ ತೀವ್ರ ಹಾಗೂ ಆಕರ್ಷಕವಾದ ಹೊಸ ಪೆÇೀಸ್ಟರ್ ಒಂದನ್ನು ಬಿಡುಗಡೆ ಮಾಡಿ ಅಭಿಮಾನಿಗಳ ಕಾತುರವನ್ನು ಹೆಚ್ಚಿಸಿದ್ದಾರೆ. ಈ ಸ್ಫೋಟಕ ಪೆÇೀಸ್ಟರ್ನಲ್ಲಿ ಶಾರುಖ್ ಖಾನ್ ಗನ್ ಪೌಡರ್ ಹಾಗೂ ಬೆಂಕಿಯಿಂದ ಉರಿಯುತ್ತಿರುವ ಭೀಕರ ಸ್ಥಳದ ಮಧ್ಯದಲ್ಲಿ ನಿಂತಿರುವುದು ಕಂಡುಬಂದಿದ್ದು, ಮುಖದ ಮೇಲೆ ಗಾಯದ ಗುರುತುಗಳು, ಕೈಯಲ್ಲಿ ರಿವಾಲ್ವರ್ ಮತ್ತು ಬಾಯಿಯಲ್ಲಿ ಕೆಂಪು ಗುಲಾಬಿಯನ್ನು ಹಿಡಿದುಕೊಂಡಿರುವ ವಿಶಿಷ್ಟ ಲುಕ್ನಲ್ಲಿ ಮಿಂಚಿದ್ದಾರೆ. ಈ ಪೆÇೀಸ್ಟರ್ ಜೊತೆಗೆ “ಇಂದು ನನಗೆ ಮತ್ತೆ ನೆನಪಾಯಿತು… ನಾನು ಕೊಲೆಗಾರನಲ್ಲ, ನಾನು ಪ್ರೇಮಿ… ರಾಜ” ಎಂದು ಶಾರುಖ್ ಹಂಚಿಕೊಂಡಿರುವ ಶೀರ್ಷಿಕೆ ಮತ್ತು ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿಂದೆ ಶಾರುಖ್ ಖಾನ್ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಿದ್ದ ಮೊದಲ ನೋಟ ಹಾಗೂ ಪೂರ್ವ-ಟೀಸರ್ ಇಂಟರ್ನೆಟ್ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಮುಖ ಹಾಗೂ ದೇಹದ ಮೇಲೆ ರಕ್ತದ ಕಲೆಗಳು, ಗಾಯಗಳೊಂದಿಗೆ ‘ಸಾಲ್ಟ್ ಅಂಡ್ ಪೆಪ್ಪರ್’ ಲುಕ್ನಲ್ಲಿ ಶಾರುಖ್ ಕಾಣಿಸಿಕೊಂಡಿರುವುದು, ಈ ಚಿತ್ರದಲ್ಲಿ ಅವರ ಪಾತ್ರವು ಅತ್ಯಂತ ಅಪಾಯಕಾರಿ ಹಾಗೂ ಹೈ-ಆಕ್ಷನ್ ಹಿನ್ನೆಲೆಯನ್ನು ಹೊಂದಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.























