Home ಜಿಲ್ಲೆ ಬೀದರ್‌ನಿಂದ ಶಬರಿಮಲೆಗೆ ೧,೩೦೦ ಕಿ.ಮೀ. ಪಾದಯಾತ್ರೆಏಳು ಅಯ್ಯಪ್ಪ ಸ್ವಾಮಿಗಳಿಂದ ೪೫ ದಿನಗಳ ಸಂಕಲ್ಪ

ಬೀದರ್‌ನಿಂದ ಶಬರಿಮಲೆಗೆ ೧,೩೦೦ ಕಿ.ಮೀ. ಪಾದಯಾತ್ರೆಏಳು ಅಯ್ಯಪ್ಪ ಸ್ವಾಮಿಗಳಿಂದ ೪೫ ದಿನಗಳ ಸಂಕಲ್ಪ

ಬೀದರ್, ಅ. ೨೮: ಅಯ್ಯಪ್ಪ ಸ್ವಾಮಿಯ ಮೇಲಿನ ಅಪಾರ ಭಕ್ತಿ, ಶ್ರದ್ಧೆ ಹಾಗೂ ಅಚಲ ಸಂಕಲ್ಪದೊAದಿಗೆ ಬೀದರ್‌ನ ಏಳು ಅಯ್ಯಪ್ಪ ಸ್ವಾಮಿಗಳು ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದತ್ತ ಸುಮಾರು ೧,೩೦೦ ಕಿ.ಮೀ. ದೂರದ ಪಾದಯಾತ್ರೆ ಆರಂಭಿಸಿದ್ದಾರೆ.
ಗುರುಸ್ವಾಮಿ ರಾಜು ಸ್ವಾಮಿ ಅವರ ನೇತೃತ್ವದಲ್ಲಿ ಅ. ೨೪ರಂದು ಬೀದರ್‌ನಿಂದ ಈ ಪವಿತ್ರ ಪಾದಯಾತ್ರೆ ಆರಂಭವಾಗಿದೆ. ಸೋಮು ಗುನ್ನಳ್ಳಿ, ವಿಶಾಲ್ ಸ್ವಾಮಿ, ಕೇದಾರನಾಥ ಸ್ವಾಮಿ, ರಾಕೇಶ್ ಸ್ವಾಮಿ ಹಾಗೂ ಪ್ರೇಮ್ ಸ್ವಾಮಿ ಸೇರಿದಂತೆ ಒಟ್ಟು ಏಳು ಮಂದಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಅ. ೨೭ರಂದು ಪಾದಯಾತ್ರೆಯ ನಾಲ್ಕನೇ ದಿನವಾಗಿದ್ದು, ಸ್ವಾಮಿಗಳು ಪ್ರಸ್ತುತ ತೆಲಂಗಾಣದ ಸದಾಶಿವಪೇಟೆ ತಲುಪಿದ್ದಾರೆ. ಅಲ್ಲಿಂದ ಶಾದ್‌ನಗರ, ಬೆಂಗಳೂರು ಹಾಗೂ ಸೇಲಂ ಮಾರ್ಗವಾಗಿ ಶಬರಿಮಲೆ ಸನ್ನಿಧಾನ ತಲುಪುವ ಗುರಿ ಹೊಂದಿದ್ದಾರೆ.
ಸುಮಾರು ೧,೩೦೦ ಕಿ.ಮೀ. ದೂರವನ್ನು ೪೫ ದಿನಗಳಲ್ಲಿ ಕ್ರಮಿಸಿ ಶಬರಿಮಲೆ ತಲುಪುವ ಸಂಕಲ್ಪವನ್ನು ಸ್ವಾಮಿಗಳು ಕೈಗೊಂಡಿದ್ದಾರೆ. ದೀರ್ಘ ಪ್ರಯಾಣದ ಸವಾಲುಗಳ ನಡುವೆಯೂ ಅಯ್ಯಪ್ಪ ಸ್ವಾಮಿಯ ಮೇಲಿನ ಅಚಲ ನಂಬಿಕೆ, ಶಿಸ್ತು, ತಾಳ್ಮೆ ಹಾಗೂ ಪರಸ್ಪರ ಸಹಕಾರದೊಂದಿಗೆ ತಮ್ಮ ಪವಿತ್ರ ಪಯಣವನ್ನು ಮುಂದುವರಿಸಿದ್ದಾರೆ.
ಈ ಪಾದಯಾತ್ರೆಯು ಭಕ್ತಿ, ತ್ಯಾಗ, ಏಕತೆ, ಸಹೋದರತ್ವ ಹಾಗೂ ಸಂಕಲ್ಪದ ಮಹತ್ವವನ್ನು ಸಾರುತ್ತದೆ. ಶಬರಿಮಲೆ ಸನ್ನಿಧಾನದಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಆಶಯದೊಂದಿಗೆ ಏಳು ಸ್ವಾಮಿಗಳು ಮುನ್ನಡೆಯುತ್ತಿದ್ದಾರೆ.