Home ಸುದ್ದಿ ರಾಷ್ಟ್ರೀಯ ದೇವರಗಟ್ಟದಲ್ಲಿ ಕೋಲುಗಳ ಕಾಳಗ, ಓರ್ವ ಸಾವು

ದೇವರಗಟ್ಟದಲ್ಲಿ ಕೋಲುಗಳ ಕಾಳಗ, ಓರ್ವ ಸಾವು

ಬಳ್ಳಾರಿ, ಅ.22- ವಿಜಯದಶಮಿ ಅಂಗವಾಗಿ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ದೇವರಗಟ್ಟಿನಲ್ಲಿ ನಡೆದ ಸಾಂಪ್ರದಾಯಿಕ ಬನ್ನಿ ಉತ್ಸವದಲ್ಲಿ ನಡೆದ ಕೋಲುಗಳ ಕಾಳಗದಲ್ಲಿ ಓರ್ವ ಸಾವನ್ಬಪ್ಪಿದ್ದಾರೆ.


ಘಟನೆಯಲ್ಲಿ. 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಎಂಟು ಜನರ ಸ್ಥಿತಿ ಗಂಭೀರವಾಗಿದೆ.
ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಹೊಳಗುಂದ ಮಂಡಲದ ದೇವರಗಟ್ಟಿನಲ್ಲಿ ಪ್ರತಿವರ್ಷ ವಿಜಯದಶಮಿಯಂದು ಬನ್ನಿ ಉತ್ಸವ ನಡೆಯುತ್ತದೆ. ಮಾಳಮ್ಮ ಮತ್ತು ಮಲ್ಲೇಶ್ವರ ಸ್ವಾಮಿಯ ಉತ್ಸವ ಮೂರ್ತಿಗಳನ್ನು ತಮ್ಮ ಗ್ರಾಮಕ್ಕೆ ಕೊಂಡೊಯ್ಯಲು ವಿವಿಧ ಗ್ರಾಮಗಳ ಭಕ್ತರು ಕೋಲುಗಳಿಂದ ಪರಸ್ಪರ ಹೊಡೆದಾಡಿಕೊಳ್ಳುವುದು ಈ ಉತ್ಸವದ ವಿಶೇಷ. ಸ್ಥಳೀಯವಾಗಿ ಇದನ್ನು `ದೇವರಗಟ್ಟು ಕರ್ರಲ ಸಮರಂ’ ಎಂದು ಕರೆಯಲಾಗುತ್ತದೆ.
ದೇವರಗಟ್ಟಿ ಬೆಟ್ಟದ ಮೀಸಲು ಅರಣ್ಯ ಪ್ರದೇಶದಲ್ಲಿ ಮಾಳಮ್ಮ ಮತ್ತು ಮಲ್ಲೇಶ್ವರ ಸ್ವಾಮಿಯ ಕಲ್ಯಾಣೋತ್ಸವ ನೆರವೇರಿದ ಬಳಿಕ ಉತ್ಸವ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ಈ ವೇಳೆ ಉತ್ಸವ ಮೂರ್ತಿಗಳನ್ನು ತಮ್ಮ ಗ್ರಾಮಕ್ಕೆ ಕೊಂಡೊಯ್ಯಲು ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪೈಪೆÇೀಟಿ ನಡೆಸುತ್ತಾರೆ. ಈ ವೇಳೆ ಕೋಲುಗಳ ಕಾಳಗ ನಡೆಯುತ್ತದೆ.


ನೇರಣಿ, ನೇರಣಿಕಿ ತಾಂಡಾ ಮತ್ತು ಕೊತಪೇಟೆ ಗ್ರಾಮಗಳ ಒಂದು ಗುಂಪು ಹಾಗೂ ಅರಿಕೇರ, ಸುಳುವಾಯಿ, ಎಲ್ಲರ್ತಿ, ಬಿಳೇಹಾಳ್, ನಿದ್ರವತ್ತಿ ಮತ್ತು ಆಲೂರು ಗ್ರಾಮಗಳ ಮತ್ತೊಂದು ಗುಂಪಿನ ನಡುವೆ ಈ ಕಾಳಗ ನಡೆಯುತ್ತದೆ. ಮಧ್ಯರಾತ್ರಿ 1ರಿಂದ ಬೆಳಗಿನ ಜಾವ 3 ಗಂಟೆಯವರೆಗೆ ನಡೆಯುವ ಉತ್ಸವದಲ್ಲಿ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ.
ಈ ಬಾರಿಯ ಉತ್ಸವದಲ್ಲಿ ನಡೆದ ಕೋಲುಗಳ ಕಾಳಗ ಹಾಗೂ ನೂಕುನುಗ್ಗಲಿನಿಂದಾಗಿ ಆಲೂರಿನ ಪೆÇೀತುರಾಜು (30) ಮೃತಪಟ್ಟಿದ್ದಾರ. 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಲೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ 8 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆದೋನಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.