Home ಮುಖಪುಟ ಸುದ್ದಿ ಅಂಬಾರಿ ಹೊತ್ತು ಸಾಗಿದ ಕ್ಯಾಪ್ಟನ್ ಪ್ರಶಾಂತ: ಜಂಬೂಸವಾರಿ ನೋಡಿ ಕಣ್ತುಂಬಿಕೊಂಡ ಜನರು

ಅಂಬಾರಿ ಹೊತ್ತು ಸಾಗಿದ ಕ್ಯಾಪ್ಟನ್ ಪ್ರಶಾಂತ: ಜಂಬೂಸವಾರಿ ನೋಡಿ ಕಣ್ತುಂಬಿಕೊಂಡ ಜನರು

ಮೈಸೂರು, ಅ.21: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ ಬನ್ನಿಮಂಟಪ ತಲುಪಿದ್ದು, ರಸ್ತೆಯ ಇಕ್ಕೆಲಗಳಲ್ಲಿ ನಿಂತು ಸಾವಿರಾರು ಜನರು ಮೆರವಣಿಗೆಯನ್ನು ನೋಡಿ ಕಣ್ತುಂಬಿಕೊಂಡರು.

ಇದೇ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊತ್ತು ಕ್ಯಾಪ್ಟನ್ ಪ್ರಶಾಂತ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದು, ಪ್ರಶಾಂತಗೆ ಕುಮ್ಕಿ ಆನೆಗಳಾದ ರೂಪ, ಕಾವೇರಿ ಸಾಥ್ ನೀಡಿದವು.

ಸಂಜೆ 4.28ರ ಶುಭ ಮೀನ ಲಗ್ನದಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಅರಮನೆಯಿಂದ ಜಯಚಾಮರಾಜೇಂದ್ರ ವೃತ್ತ, ಕೆ.ಆರ್ ವೃತ್ತ, ಆಯುರ್ವೇದ ವೃತ್ತದ ಮೂಲಕ ಸುಮಾರು 5 ಕಿ.ಮೀ ದೂರ ಸಾಗಿ ಜಂಬೂಸವಾರಿ ಮೆರವಣಿಗೆ ಬನ್ನಿಮಂಟಪದಲ್ಲಿ ಸಂಪನ್ನಗೊಂಡಿತು.