Home ಜಿಲ್ಲೆ ಯೋಗ ಸಾಧಕ ಮನಕೋಜಿಗೆ ಶ್ರದ್ಧಾಂಜಲಿ

ಯೋಗ ಸಾಧಕ ಮನಕೋಜಿಗೆ ಶ್ರದ್ಧಾಂಜಲಿ

ಬೀದರ್: ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಜೈ ಶ್ರೀ ರಾಮ ಯೋಗ ಸಮಿತಿಯ ಯೋಗ ಸಾಧಕ ಶಿವಾನಂದ ಮನಕೋಜಿ ಹಾಗೂ ಬಸಮ್ಮ ಮನಕೋಜಿ ದಂಪತಿಗೆ ಯೋಗ ಸಮಿತಿ ವತಿಯಿಂದ ನಗರದ ಹೇಮರೆಡ್ಡಿ ಮಲ್ಲಮ್ಮ ಫಂಕ್ಷನ್ ಹಾಲ್‌ನಲ್ಲಿ ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮೃತರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷಗಳ ಮೌನ ಆಚರಿಸಲಾಯಿತು.
ಶಿವಾನಂದ ಮನಕೋಜಿ ಅವರು ಸರಳ, ಸಜ್ಜನ ವ್ಯಕ್ತಿಯಾಗಿದ್ದರು. ಕರುಣಾಮಯಿ, ಪರೋಪಕಾರಿ ಆಗಿದ್ದರು. ಅವರ ನಿಧನದಿಂದ ಸಮಿತಿ ಹಾಗೂ ಯೋಗ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಅನೇಕ ಪ್ರಮುಖರು ಹೇಳಿದರು.
ಯೋಗ ಸಾಧಕರನ್ನು ಒಗ್ಗೂಡಿಸುತ್ತಿದ್ದರು. ಉತ್ತಮ ಆರೋಗ್ಯಕ್ಕೆ ಸಹಕಾರಿಯಾದ ಯೋಗದ ಮಹತ್ವವನ್ನು ಎಲ್ಲರಿಗೂ ಮನವರಿಕೆ ಮಾಡುತ್ತಿದ್ದರು ಎಂದು ಸ್ಮರಿಸಿದರು.
ಡಾ. ಮಹೇಶ್ ಬಿರಾದಾರ, ವಿಜಯಕುಮಾರ ಶೇರಿಕಾರ್, ಎಚ್. ಬೆಟ್ಟದ್, ದಿಗ್ವಾಲ್, ಮೀನಾಕ್ಷಿ, ಶಶಿಕಲಾ, ಮನೋರಮಾ ಮೋಕಾಶಿ ಅವರು ಮನಕೋಜಿ ದಂಪತಿಗೆ ನುಡಿ ನಮನ ಸಲ್ಲಿಸಿದರು.
ಪ್ರಮುಖರಾದ ಸೂರ್ಯಕಾಂತ, ನಾಗಣ್ಣ, ಚಂದ್ರಶೇಖರ, ವೀರಸಂಗಯ್ಯ ಸ್ವಾಮಿ, ಶಿವರಾಜ ಸ್ವಾಮಿ, ಮಹೇಶ್ ಮತ್ತಿತರರು ಇದ್ದರು. ಅರುಣ ಮೋಕಾಶಿ ನಿರೂಪಿಸಿದರು.