
ಬೀದರ್: ನಗರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಘಟಕ (೧)ರಲ್ಲಿ ಅಪಘಾತ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೀದರ್ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಂ.ಡಿ. ಜಾಫರ್ ಸಾಧಿಕ ಅವರು, ವಾಹನ ಚಾಲನೆ ಮಾಡುವಾಗ ರಸ್ತೆ ಅಪಘಾತವಾದಲ್ಲಿ ಬಸ್ ಚಾಲಕನ ಡ್ರೈವಿಂಗ್ ಲೈಸನ್ಸ್ ಅನ್ನು ೯೦ ಅಮಾನತು ಮಾಡಲಾಗುವುದು ಎಂದು ಹೇಳಿದರು.
ವಾಹನವನ್ನು ಅತಿ ಕಡಿಮೆ ವೇಗದಲ್ಲಿ ಓಡಿಸುವುದರಿಂದ ರಸ್ತೆಯಲ್ಲಿ ಆಗುವ ಅಪಘಾತಗಳನ್ನು ಕಡಿಮೆ ಮಾಡಲು ಹಾಗೂ ಆಗುವ ಸಾವು, ನೋವುಗಳನ್ನು ಕಡಿಮೆ ಮಾಡಬಹುದಾಗಿದೆ ಎಂದರು.
ರಸ್ತೆಯ ಅಪಘಾತಕ್ಕೆ ಒಳಗಾದ ಗಾಯಾಳು ವ್ಯಕ್ತಿಗೆ ಆಸ್ಪತ್ರೆಗೆ ಸೇರಿಸಿದರೆ, ಅವರು ಬದುಕುಳಿದರೆ ಅವರಿಗೆ ರಾಹ ವೀರ ಸ್ಕೀಮ್ ನಲ್ಲಿ ೨೫೦೦೦ ಸಾವಿರ ರೂಪಾಯಿ ಬಹುಮಾನದ ರೂಪದಲ್ಲಿ ನೀಡಲಾಗುವುದು. ಅಲ್ಲದೆ, ಅವರ ಮೇಲೆ ಯಾವುದೇ ಪ್ರಕರಣ ದಾಖಲು ಮಾಡಲ್ಲ, ತನಿಖೆಯೂ ನಡೆಯುವುದಿಲ್ಲ. ಹೀಗಾಗಿ, ಸಾರ್ವಜನಿಕರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಹಿಂದೇಟು ಹಾಕಬಾರದೆಂದು ಸಲಹೆ ನೀಡಿದರು.
ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗಾಗಿ ನಿಗದಿತ ಸ್ಥಳದಲ್ಲಿ ಬಸ್ಸು ನಿಲ್ಲಿಸಬೇಕು ಮತ್ತು ರಸ್ತೆಯ ಮೇಲೆ ಒಂದು ವೇಳೆ ಬಸ್ಸು ನಿಲ್ಲಿಸಿದ್ದರೆ ಅರ್ಧ ಬಸ್ ರಸ್ತೆಯ ಕೆಳಗಡೆ ನಿಲ್ಲಿಸಬೇಕು ಎಂದ ಅವರು, ವಾಹನವನ್ನು ರಾಂಗ್ ಸೈಡ್ ಚಲಾಯಿಸುವುದರಿಂದ ಅಪಘಾತ ವಾಗುತ್ತವೆ. ಹೀಗಾಗಿ, ಯಾವುದೇ ಕಾರಣಕ್ಕೂ ಸಹ ವಾಹನವನ್ನು ರಾಂಗ್ ಸೈಡ್ ವಾಹನ ಚಲಾಯಿಬಾಸಬಾರದೆಂದು ಸೂಚಿಸಿದರು.
ಮೋಟಾರು ವಾಹನ ನಿರೀಕ್ಷರಾದ ಟಿ. ಪುರಂದರದಾಸ ಮಾತನಾಡಿ, ಚಾಲಕರು ೩೦ ನಿಮಿಷ ಮುಂಚಿತವಾಗಿ ಹಾಜರಾಗಬೇಕು. ವಾಹನ ತೆಗೆಯುವ ಮೊದಲು ವಾಹನದ ಲೈಟು, ಇಂಜಿನ್ ಆಯಿಲ್, ಕುಲೆಂಟ,ಡಿಜೆ ಮತ್ತು ಇನ್ನು ಹತ್ತಾರು ವಿಷಯಗಳನ್ವು ಪರಿಶೀಲಿಸಿ ವಾಹನವನ್ನು ರಸ್ತೆಗೆ ಇಳಿಸಬೇಕು ಎಂದು ಸಲಹೆ ನೀಡಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಂದ್ರ ಜಾಧವ್ ಮಾತನಾಡಿ, ರಸ್ತೆಯ ಮೇಲೆ ಕಾಣುವ ಸಂಚಾರಿ ಚಿಹ್ನೆಗಳನ್ನು ನೋಡಿ ವಾಹನ ನಡೆಸುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದರು.
ಬೀದರ್ ನಗರದಲ್ಲಿ ಸುಮಾರು ೧೨ ರಸ್ತೆಗಳಲ್ಲಿ ಅಪಘಾತ ಹೆಚ್ಚಳವಾಗುತ್ತವೆ. ಆ ರಸ್ತೆಯಲ್ಲಿ ಅಪಘಾತಗಳ ಪ್ರಮಾಣ ಕಡಿಮೆ ಮಾಡಲು ನಾವು ನೀವು ಸೇರಿ ಕೆಲಸ ಮಾಡೋಣ. ಎಲ್ಲರೂ ರಸ್ತೆನಿಯಮಗಳನ್ನು ಪಾಲನೆ ಮಾಡಬೇಕು. ಇದರಿಂದ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತವೆ ಎಂದರು.
ಶ್ರೀಮತಿ ಶಾರದಾಬಾಯಿ.ವಿಭಾಗಿಯ ಸಂಚಾರ ಅಧಿಕಾರಿ ಮತನಾಡಿ ಮೋಬೈಲ ಫೋನ ಹೆಡ ಫೋನ ಬ್ಲುಟುತ ಮದ್ಯಪಾನ ಇವೆಲವು ಕುಡಾ ಅಪಘಾತಕ್ಕೆ ಕಾರಣವಾಗುತವೆ ಎಂದು ನುಡಿದರು. ವೇದಿಕೆಮೇಲೆ .ಡಿ.ಎಮ.ಇ.ಚೆದ್ರಕಾಂತ, ಜಗದಿಶ ನಾಯಕ.ಘಟಕ ವ್ಯವಸ್ಥಾಪಕರು ಘಟಕ (೧)ಆದೆಪ್ಪಾ ಘಟಕ ವ್ಯವಸ್ಥಾಪಕರು ಘಟP À೨ ಈ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಚಾಲಕರು ಮತ್ತು ಆದಿಕಾರಿಗಳು ಹಾಜರಿದ್ದರು ಕಾರ್ಯಕ್ರಮವನ್ನು ಹಣಮಂತ.ಟಿ.ಮಿರ್ಜಾಪುರ ರವರು ಸ್ವಾಗತಿಸಿ ನಿರ್ಪುಸಿದ್ದರು ಮತ್ತು .ಜೆಗನಾತ ಶಿವಯೋಗಿ ಅವರು ವಂದಿಸಿದ್ದರು.























