
ಬೀದರ ಅ ೨೨: ಭಾರತ ಚುನಾವಣಾ ಆಯೋಗವು ೨೦೨೬ರ ಸೆಪ್ಟೆಂಬರ್ ೨೨ ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ೨೦೨೬ರ ದ್ವೈವಾರ್ಷಿಕ ಚುನಾವಣೆಯನ್ನು ಘೋಷಿಸಿದ್ದು, ಚುನಾವಣೆಯ ಚುನಾವಣಾ ನೀತಿ ಸಂಹಿತೆಯು ಕ್ಷೇತ್ರಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಚುನಾವಣಾಧಿಕಾರಿ ಹಾಗೂ ಮತದಾರರ ನೋಂದಣಾಧಿಕಾರಿಯಾಗಿದ್ದು, ಬೀದರ್ ಜಿಲ್ಲಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅರ್ಹ ಮತದಾರರ ಸಹಾಯಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ೦೮೪೮೨-೨೨೧೯೫೦ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಚುನಾವಣೆಗೆ ಮತಗಟ್ಟೆ ಸಿಬ್ಬಂದಿ ಹಾಗೂ ಮೈಕ್ರೋ ಅಬ್ಸರ್ವರ್ಗಳ ನೇಮಕಾತಿ ಪೂರ್ಣಗೊಂಡು, ಅಕ್ಟೋಬರ್ ೧೨ ರಂದು ಮೊದಲನೇ ಸುತ್ತಿನ ಹಾಗೂ ಅಕ್ಟೋಬರ್ ೧೭ ರಂದು ಎರಡನೇ ಸುತ್ತಿನ ತರಬೇತಿಯನ್ನು ನೀಡಲಾಗಿದೆ. ಬೀದರ್ ಜಿಲ್ಲೆಯಲ್ಲಿ ಒಟ್ಟು ೩೩ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು (ಔರಾದ್-೩, ಕಮಲನಗರ-೩, ಭಾಲ್ಕಿ-೬, ಬೀದರ್-೮, ಹುಲಸೂರು-೧, ಬಸವಕಲ್ಯಾಣ-೫, ಹುಮನಾಬಾದ್-೩, ಚಿಟಗುಪ್ಪಾ-೪), ಜಿಲ್ಲೆಯಲ್ಲಿ ಒಟ್ಟು ೭,೦೩೮ ಅರ್ಹ ಮತದಾರರಲ್ಲಿ ೩,೭೯೪ ಪುರುಷರು ಮತ್ತು ೩,೨೪೪ ಮಹಿಳೆಯರು ಇದ್ದಾರೆ. ಮತದಾನವು ದಿನಾಂಕ ೨೩-೧೦-೨೦೨೬ ರಂದು ಬೆಳಿಗ್ಗೆ ೮:೦೦ ಗಂಟೆಯಿAದ ಸಂಜೆ ೪:೦೦ ಗಂಟೆಯವರೆಗೆ ನಡೆಯಲಿದೆ.
ಮತದಾರರು ಚುನಾವಣಾ ಆಯೋಗವು ಸೂಚಿಸಿರುವ ನೆರಳು ಬಣ್ಣದ (ಗಿioಟeಣ sಞeಣಛಿh ಠಿeಟಿ) ಪೆನ್ನಿನ ಮುಖಾಂತರ ಮಾತ್ರ ಪ್ರಾಶಸ್ತ್ರ ಮತ ಚಲಾಯಿಸಬೇಕು. ಕ್ರಮ ಸಂಖ್ಯೆ ಬಿಟ್ಟು ಮತ ಚಲಾಯಿಸಿದರೆ ಅಥವಾ ಬೇರೆ ಬಣ್ಣದ ಪೆನ್ ಬಳಸಿದರೆ ಮತಗಳು ಅಮಾನ್ಯಗೊಳ್ಳಲಿವೆ. ಮತದಾನದ ವೇಳೆ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಭಾರತೀಯ ಪಾಸ್ಪೋರ್ಟ್, ಉದ್ಯೋಗ ಗುರುತಿನ ಚೀಟಿ ಅಥವಾ ವಿಶ್ವವಿದ್ಯಾಲಯದ ಮೂಲ ಡಿಗ್ರಿ/ಡಿಪ್ಲೋಮಾ ಪ್ರಮಾಣಪತ್ರ ಸೇರಿದಂತೆ ಚುನಾವಣಾ ಆಯೋಗವು ಸೂಚಿಸಿರುವ ಯಾವುದಾದರೂ ಒಂದನ್ನು ಗುರುತಿನ ಚೀತಿಯಾಗಿ ತೋರಿಸಿ ಮತ ಚಲಾಯಿಸಬಹುದಾಗಿದೆ.
ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯದಲ್ಲಿ ಪೊಲೀಸ್ ಬಂದೊಬಸ್ತ್ ಮಾಡಲಾಗಿರುತ್ತದೆ, ದಿನಾಂಕ ೨೩-೧೦-೨೦೨೬ರಂದು ಜರುಗುವ ಮತದಾನಕ್ಕಾಗಿ ಪ್ರತಿ ಮತಗಟ್ಟೆ ಕೇಂದ್ರಗಳಲ್ಲಿ ಭದ್ರತೆಗಾಗಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ನಿಯೋಜನೆ ಮಾಡಿಲಾಗಿರುತ್ತದೆ ಹಾಗೂ ಮತಪೆಟ್ಟಿಗೆಗಳ ಸಾಗಾಣಿಕೆಗಾಗಿ ಪೊಲೀಸ್ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.
ಈ ಚುನಾವಣೆಯ ಮುಕ್ತ ಮತ್ತು ನ್ಯಾಯಸಮ್ಮತ ನಿರ್ವಹಣೆಗಾಗಿ ಬೀದರ್ ಜಿಲ್ಲೆಯಲ್ಲಿ ದಿನಾಂಕ ೨೧-೧೦-೨೦೨೬ ರ ಸಂಜೆ ೪:೦೦ ಗಂಟೆಯಿAದ ದಿನಾಂಕ ೨೩-೧೦-೨೦೨೬ ರ ಸಂಜೆ ೬:೦೦ ಗಂಟೆಯವರೆಗೆ ನಿಷೇಧಾಜ್ಞೆ ಹಾಗೂ ಮದ್ಯಪಾನ ನಿಷೇಧ (ಆಡಿಥಿ ಆಚಿಥಿ) ಘೋಷಿಸಲಾಗಿದೆ. ಅಕ್ಟೋಬರ್ ೨೨ ರಂದು ಆಯಾ ತಾಲ್ಲೂಕಿನ ತಹಶೀಲ್ ಕಚೇರಿಯಲ್ಲಿ ಮಸ್ಟರಿಂಗ್ ಕಾರ್ಯ ನಡೆಯಲಿದ್ದು, ಡಿ-ಮಸ್ಟರಿಂಗ್ ಕಾರ್ಯವು ತಹಶೀಲ್ ಕಚೇರಿ, ಬೀದರನಲ್ಲಿ ಜರುಗಲಿದೆ. ಮತ ಎಣಿಕೆ ಕಾರ್ಯವು ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಕಟ್ಟಡದಲ್ಲಿರುವ ಭಾಸ್ಕರ ಹಾಲ್ನಲ್ಲಿ ದಿನಾಂಕ ೨೭-೧೦-೨೦೨೬ ರಂದು ಬೆಳಿಗ್ಗೆ ೦೮:೦೦ ಗಂಟೆಯಿAದ ಆರಂಭವಾಗಲಿದೆ ಎಂದು ಕರ್ನಾಟಕ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.























