ತಾಳಿಕೋಟೆ: ತಾಲೂಕಿನ ಕಲಕೇರಿ ಗ್ರಾಮದ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ೮ನೇ ದಿನದ ಮಹಾಗೌರಿಯ ವಿಶೇಷ ಪೂಜಾಲಂಕಾರದೊAದಿಗೆ ದೇವಿ ಆರಾಧನೆ ಮಾಡಲಾಯಿತು.
ಇದೇ ವೇಳೆ ದೇವಿಯ ಪ್ರತಿರೂಪವೆಂದು ಭಾವಿಸಿ ೧೦೦೮ ಮುತೈದೆಯರ ಉಡಿ ತುಂಬುವ ಸಂಕಲ್ಪದAತೆ ಪ್ರತಿದಿನವೂ ಉಡಿ ತುಂಬುವ ಕಾರ್ಯ ನಡೆದುಕೊಂಡು ಬುರುತ್ತಿರುವುದು ವಿಶೇಷವಾಗಿದೆ.
ಈ ಸಮಯದಲ್ಲಿ ಶ್ರೀ ಅಂಬಾಭವಾನಿ ದೇವಿಯ ಪೌರಾಣಿಕ ಹಿನ್ನೆಲೆಯಲ್ಲಿ ಅವಲೋಕಿಸಿ ದೇವಿ ಉಪಾಸಕರಾದ ಮೋತಿಲಾಲ ಕುಲಕರ್ಣಿ ಅವರು ಮಾತನಾಡಿ ರಣರಂಗದಲ್ಲಿ ದುಷ್ಟರನ್ನು ಸದೆಬಡಿದು ಅಹಂಕಾರವನ್ನು ಸಂಹರಿಸಿದ ಕಾಳರಾತ್ರಿಯ ಭೀಕರ ಆವೇಶ ಶಮನಗೊಂಡು, ಇಂದು ಜಗತ್ತನ್ನೇ ತಂಪಾಗಿಸುವ ಶುಭ ಶ್ವೇತಮೂರ್ತಿಯಾಗಿ ‘ಮಹಾಗೌರಿ’ ಅವತರಿಸುತ್ತಾಳೆ. ನವರಾತ್ರಿಯ ಎಂಟನೇ ದಿನ ಮಹಾಗೌರಿ ದೇವಿಯನ್ನು ಆರಾಧಿಸಲಾಗುತ್ತದೆ. ‘ಮಹಾ’ ಎಂದರೆ ಅತ್ಯಂತ ಅಥವಾ ಮಹತ್ತರವಾದುದು; ‘ಗೌರಿ’ ಎಂದರೆ ಬಿಳುಪು ಅಥವಾ ಶುಭ್ರತೆ. ಸಂಬAಧಗಳಲ್ಲಿ ನಿಷ್ಠೆ ಮತ್ತು ಜೀವನಪರ್ಯಂತದ ಬಾಂಧವ್ಯವನ್ನು ಕರುಣಿಸಲಿ ಎಂಬ ನಂಬಿಕೆಯಿAದ ಭಕ್ತರು ಈ ದೇವಿಯನ್ನು ಪೂಜಿಸುತ್ತಾರೆಂದರು.
ಮಹಾಗೌರಿಯ ಕಥೆಗೆ ಹಲವು ರೂಪಗಳಿವೆ. ಅವುಗಳಲ್ಲಿ ಹೆಚ್ಚು ಪ್ರಸಿದ್ಧವಾದ ಕಥೆಯ ಪ್ರಕಾರ, ಕಾಲರಾತ್ರಿಯ ರೂಪದಲ್ಲಿ ಎಲ್ಲ ಅಸುರರನ್ನು ಸಂಹರಿಸಿದ ಬಳಿಕ ಪಾರ್ವತಿಯ ಮೈಬಣ್ಣವು ರಾತ್ರಿಯಂತೆ ಕಪ್ಪಾಗಿತ್ತು. ಶಿವನು ಆಕೆಯನ್ನು ‘ಕಾಳಿ’ ಎಂದು ಸಂಬೋಧಿಸಿ ತಮಾಷೆ ಮಾಡುತ್ತಿದ್ದನು. ಇದರಿಂದ ಬೇಸರಗೊಂಡ ಪಾರ್ವತಿಯು ತನ್ನ ಹಿಂದಿನ ಮೈಬಣ್ಣವನ್ನು ಮರಳಿ ಪಡೆಯಲು ಬ್ರಹ್ಮನನ್ನು ಪ್ರಾರ್ಥಿಸಿದಳು. ಹಲವು ದಿನಗಳ ಕಾಲ ಕಠಿಣ ತಪಸ್ಸು ಆಚರಿಸಿದ ಆಕೆಯ ಭಕ್ತಿಗೆ ಮೆಚ್ಚಿದ ಬ್ರಹ್ಮನು, ಹಿಮಾಲಯದಲ್ಲಿರುವ ಮಾನಸ ಸರೋವರದಲ್ಲಿ ಸ್ನಾನ ಮಾಡುವಂತೆ ಸಲಹೆ ನೀಡಿದನು. ಕೆಲವು ಪ್ರಾದೇಶಿಕ ಕಥನಗಳಲ್ಲಿ ಮಾನಸ ಸರೋವರದ ಬದಲಿಗೆ ಪವಿತ್ರ ಗಂಗಾನದಿಯನ್ನು ಉಲ್ಲೇಖಿಸಲಾಗಿದೆ ಎಂದರು.




















