Home ಜಿಲ್ಲೆ ಕಲಬುರಗಿ ಕಾವ್ಯವು ಪ್ರತಿಭೆ ಮತ್ತು ಜೀವನಾನುಭವದ ಅಭಿವ್ಯಕ್ತಿ:ಡಾ.ಸೂರ್ಯಕಾಂತ ಸುಜ್ಯಾತ

ಕಾವ್ಯವು ಪ್ರತಿಭೆ ಮತ್ತು ಜೀವನಾನುಭವದ ಅಭಿವ್ಯಕ್ತಿ:ಡಾ.ಸೂರ್ಯಕಾಂತ ಸುಜ್ಯಾತ

ಕಲಬುರಗಿ,ಅ.18-ಕವಿತೆ ಬರೆಯಲು ಸಣ್ಣ ಸಣ್ಣ ವಸ್ತು, ವಿಷಯ ಮತ್ತು ಘಟನೆಗಳು ಕವಿಗೆ ಪ್ರೇರಣೆ ನೀಡುತ್ತವೆ. ಅವನಿಗೆ ಪ್ರತಿಭೆ, ಜೀವನಾನುಭವ ಮತ್ತು ಕಲಾ ಕೌಶಲ್ಯ ಇರಬೇಕು ಎಂದು ಹಿರಿಯ ಸಾಹಿತಿ ಡಾ. ಸೂರ್ಯಕಾಂತ ಸುಜ್ಯಾತ ಹೇಳಿದರು.
ಕವಿ ಡಾ.ಎಸ್.ಎಸ್.ಗುಬ್ಬಿಯವರ”ಆತ್ಮ ನಿನಾದ” ಕವನ ಸಂಕಲನ ಪರಿಚಯಿಸುತ್ತ ಅಭಿಪ್ರಾಯ ಪಟ್ಟರು, ಅವರು ಮುಂದುವರಿದು ಈ ಕೃತಿಯಲ್ಲಿ ಯ ಕವನಗಳು ಪರಿಸರ ಪ್ರೇಮ,ವರ್ತಮಾನದ ತಲ್ಲಣ ಗಳು ಮತ್ತು ಆಧ್ಯಾತ್ಮದ ಅನುಭವಗಳ ದರ್ಶನ ಮಾಡಿಸುತ್ತದೆ ಎಂದರು.
ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘವು’ಆತ್ಮನಿನಾದ’ ಕೃತಿ ಪರಿಚಯ ಕಾರ್ಯಕ್ರಮದ ಆಯೋಜನೆ ಮಾಡಿತ್ತು. ಸಂಘದ ಅಧ್ಯಕ್ಷರಾದ ಅಪ್ಪಾರಾವ ಅಕ್ಕೋಣೆಯವರು ಅಧ್ಯಕ್ಷೀಯ ಮಾತನಾಡಿದರು.ಕವಿ ಡಾ.ಎಸ್.ಎಸ್.ಗುಬ್ಬಿ ತಮ್ಮ ಸಾಹಿತ್ಯದ ಅನುಭವ ಹಂಚಿಕೊಂಡರು.ಡಾ. ಮಲ್ಲಿನಾಥ ತಳವಾರ ಮತ್ತು ಶಿವಯ್ಯ ಮಠಪತಿಯವರು ಕೃತಿ ಕುರಿತು ಪ್ರತಿಕ್ರಿಯೆ ವ್ಯಕ್ತ ಪಡಿಸಿದರು. ಡಾ. ವಿಜಯಕುಮಾರ ಪರುತೆಯವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಸಾಹಿತಿಗಳಾದ ಸಿ. ಎಸ್.ಮಾಲಿಪಾಟೀಲ್,ವಿಶ್ವನಾಥ ಭಕರೆ,ಡಾ.ಸುರೇಶ ಜಾದವ್, ಡಾ. ಸಿದ್ದರಾಮಯ್ಯ ಮಠ,ರೇವಣಸಿದ್ದಪ್ಪ ದುಕಾನ, ಎಸ್.ಎಸ್.ಪಾಟೀಲ್, ಎಸ್. ವಿ.ಹತ್ತಿ,ಗಂಗಾಧರ ಪಾಟೀಲ್ ಮತ್ತು ಶಿವಾನಂದ ಮಠಪತಿ ಮುಂತಾದವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.