Home ಮುಖಪುಟ ಸುದ್ದಿ ಜಂತರ್ ಮಂತರ್‌ಗೆ ನುಗ್ಗಿದವರ ಬಂಧನ

ಜಂತರ್ ಮಂತರ್‌ಗೆ ನುಗ್ಗಿದವರ ಬಂಧನ

ನವದೆಹಲಿ,ಅ.೧೩- ಜಂತರ್- ಮಂತರ್ ಪ್ರತಿಭಟನಾ ಸ್ಥಳವಲ್ಲ ಎಂದು ದೆಹಲಿ ಸರ್ಕಾರ ನಿನ್ನೆ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಜಂತರ್ -ಮಂತರ್‌ಗೆ ನುಗ್ಗಿ ಪ್ರತಿಭಟನೆ ನಡೆಸಿದ ಸಿಜೆಪಿ ನಾಯಕರುಗಳನ್ನು ಪೊಲೀಸರು ಬಂಧಿಸಿದ್ದಾರೆ.


ಜಂತರ್- ಮಂತರ್ ನಲ್ಲಿ ಪ್ರತಿಭಟನೆಗೆ ಅವಕಾಶ ಕೊಡದಿರಲು ದೆಹಲಿ ಸರ್ಕಾರ ನಿನ್ನೆ ಜಂತರ್ -ಮಂತರ್ ಅನ್ನು ಪ್ರತಿಭಟನಾ ಸ್ಥಳವಲ್ಲ ಎಂದು ಅಧಿಸೂಚನೆ ಹೊರಡಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಸಿಜೆಪಿ ಪಕ್ಷ ಜಂತರ್ -ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿ ಇಂದು ಬೆಳಿಗ್ಗೆ ಸಿಜೆಪಿಯ ನಾಯಕರುಗಳಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರು ಇಂದು ಬೆಳಿಗ್ಗೆ ಜಂತರ್ ಮಂತರ್ ನುಗ್ಗಲು ಯತ್ನಿಸಿದ್ದು ಅವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಜಂತರ್ ಮಂತರ್ ನಲ್ಲಿ ಪ್ರತಿ ಭಟನೆಗೆ ಅವಕಾಶ ಕೊಡದಿರುವ ದೆಹಲಿ ಸರ್ಕಾರ ನಿರ್ಧಾರದ ಹಿನ್ನೆಲೆಯಲ್ಲಿ ಜಂತರ್ ಮಂತರ್ ಸುತ್ತಾ ಭಾರೀ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತಾದರೂ ಈ ಭದ್ರತೆಯನ್ನು ಬೇಧಿಸಿ ಜಂತರ್ ಮಂತರ್ ಬಳಿಯಿರುವ ಜೆಡಿಯು ಪಕ್ಷದ ಗೇಟ್ ಹತ್ತಿ ಪ್ರತಿಭಟನಾಕಾರರು ಜಂತರ್ ಮಂತರ್‌ಗೆ ನುಗ್ಗಿ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಘೋಷಣೆಗಳನ್ನು ಕೂಗಿದರು.


ಭಾರತ್ ಮಾತಾಕಿ ಜೈ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಲಿ ಎಂಭ ಘೋಷಣೆಗಳನ್ನು ಸಿಜೆಪಿ ನಾಯಕರುಗಳನ್ನು ಕೂಗಿದ್ದು ತಕ್ಷಣವೇ ಸ್ಥಳದಲ್ಲಿದ್ದು ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಮುಂದಾದಾಗ ಪ್ರತಿಭಟನಾಕಾರರು ಮತ್ತು ಪೊಲೀಸರು ನಡುವೇ ವಾಗ್ವಾದ ತಳ್ಳಾಟ, ನೂಕಾಟ ನಡೆದಿದೆ. ಈ ಬಳಿಕ ಪೊಲೀಸರು ಸೌರವ್ ದಾಸ್ ಅಶುತೋಷ್ gಂಕ್ ಸೇರಿದಂತೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಜಂತರ್ ಮಂತರ್ ನಿಂದ ಹೊರಗೆ ಕರೆದೊಯ್ದಿರು


ಜಂತರ್ ಮಂತರ್ ಗೆ ಸಿಜೆಪಿ ನಾಯಕರುಗಳು ನುಗ್ಗಿ ಪ್ರತಿಭಟಿಸಿರುವ ವಿಡಿಯೊ ಹಂಚಿಕೊಂಡಿರುವ ಸಿಜೆಪಿ ಸಂಸ್ಥಾಪಕಅಭಿಜೀತ್ ದಿಪ್ಕೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ತ್ರಿವರ್ಣ ಧ್ವಜ ಹಿಡಿದ ಕಾರ್ಯಕರ್ತರು ಬೆಳಗಿನ ಜಾವ ಜಂತರ್ ಮಂತರ್ ಪ್ರವೇಶಿಸಿದ ಬಳಿಕ ದೆಹಲಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.


ಜಂತರ್ ಮಂತರ್ ಅನ್ನು ಅಧಿಕೃತ ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ತೆಗೆದುಹಾಕಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿರುವ ದಿಪ್ಕೆ, “ಪ್ರತಿರೋಧವನ್ನು ಅಧಿಕೃತ ಪಟ್ಟಿಯಿಂದ ತೆಗೆದುಹಾಕಲು ಸಾಧ್ಯವಿಲ್ಲ” ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.