
ಕಲಬುರಗಿ: ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಾಗುತ್ತದೆ. ಒತ್ತಡದ ಬದುಕಿನ ಮಧ್ಯೆ ಮನಸ್ಸನ್ನು ಉಲ್ಲಾಸಿತಗೊಳಿಸಲು ಯಾವುದೇ ಕ್ರೀಡೆ ಪರಿಣಾಮಕಾರಿ. ಕೆಬಿಎನ ವಿವಿಯಲ್ಲಿ ಎಲ್ಲ ರೀತೀಯ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ಬೆಳವಣಿಗೆ ಸಾಧ್ಯ ಎಂದು ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಸಮ ಉಪಕುಲಪತಿ ಪೆÇ್ರ ಅಶಫಾಕ ಅಹ್ಮದ ನುಡಿದರು.
ಖಾಜಾ ಬಂದಾನವಾಜ ವಿಶ್ವವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಕ್ರೀಡೆ ಮತ್ತು ಸಾಂಸ್ಕøತಿಕ ಹಬ್ಬ 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೆಬಿಎನ್ ಟರ್ಫ್ ಅಂತಾರಾಷ್ಟ್ರೀಯ ಸೌಲಭ್ಯಗಳನ್ನು ಹೊಂದಿದೆ. ವಿವಿಯ ಕುಲಾಧಿಪತಿ ಡಾ ಸಯ್ಯದ ಮುಹಮ್ಮದ ಅಲಿ ಅಲ್ ಹುಸ್ಸೇನಿ ಸಾಹೇಬರು ಕ್ರೀಡೆಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದಾರೆ. ಕ್ರೀಡೆಗಳು ಮನಸ್ಸನ್ನು ತಾಜಾಗೊಳಿಸುತ್ತವೆ. ಕ್ರೀಡೆಯು ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಕ್ರೀಡಾಂಗಣ ಪ್ರವೇಶಿಸಿದಾಗ ಜಗತ್ತನ್ನು ಮರೆತುಬಿಡುತ್ತೀರಿ ಮತ್ತು ನಿಮ್ಮ ಒತ್ತಡ ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಲು ಕರೆ ನೀಡಿದರು. ಆಯೋಜನೆಗಾಗಿ ಶ್ರಮಿಸಿದ ಎಲ್ಲರಿಗೆ ಅಭಿನಂದಿಸಿದರು. ಇದು ಟೀಮವರ್ಕ್. ಭಾಗವಹಿಸಿದ ಎಲ್ಲರಿಗೂ ಶುಭ ಹಾರೈಸಿದರು.
ಕೆಬಿಎನ್ ವಿವಿಯ ಕುಲಸಚಿವ ಮಿರ ವಿಲಾಯತ ಅಲಿ ಇವರು ಮಾತನಾಡುತ್ತ, ಆಟಗಳಲ್ಲಿ ಗೆಲ್ಲುವುದು ಅಥವಾ ಸೋಲುವುದು ಮಹತ್ವ ಅಲ್ಲ. ಭಾಗವಹಿಸಿದವರು ಎಲ್ಲರೂ ವಿಜೇತರೆ. ನಿಜವಾದ ಗೆಲುವು ಎಂದರೆ ಭಾಗವಹಿಸುವಿಕೆ. ವಿದ್ಯಾರ್ಥಿಗಳ ಪರಿಪೂರ್ಣ ಬೆಳವಣಿಗೆಗೆ ಇಂತಹ ಅವಕಾಶಗಳು ಅವಶ್ಯಕವಾಗಿವೆ. ಕ್ಯಾಂಪಸ್ ನಿರ್ದೇಶಕ ಜನಾಬ ಡಾ ಸಯ್ಯದ ಮುಸ್ತಫಾ ಹುಸ್ಸೇನಿಯವರು ಕೂಡ ತುಂಬಾ ಪೆÇ್ರೀತ್ಸಾಹ ಮಾಡುತ್ತಾರೆ. ಕೆಬಿಎನ್ ಟರ್ಫ್ ಗ್ರೌಂಡನಲ್ಲಿ ಕ್ರಿಕೆಟ್, ಫುಟ್ಬಾಲ್, ಹಾಕಿ ಕ್ರೀಡೆಗಳು ನಡೆಯಲಿವೆ ಇನ್ನೂ ಅನೇಕ ಯೋಜನಗಳಿವೆ. ಬರುವ ನವೆಂಬರನಿಂದ ಕೆಬಿಎನ ಗೋಲ್ಡ್ ಕಪ್ ಆರಂಭವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ರೀಡಾ ಜ್ಯೋತಿ ಸಂಚಾರದ ಬಳಿಕ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧೀಸಲಾಯಿತು.
6 ದಿನಗಳ ಕಾಲ ವಿದ್ಯಾರ್ಥಿಗಳಿಗೆ ಕ್ಯಾರಮ, ಚೆಸ, ಬ್ಯಾಡ್ಮಿಂಟನ, ವಾಲಿಬಾಲ, ಥ್ರೋ ಬಾಲ, ಶಾಟ ಪುಟ, ರಂಗೋಲಿ, ಮೆಹಂದಿ, ಪೇಂಟಿಂಗ, ಪೆÇೀಸ್ಟರ, ಗಾಯನ, ನೃತ್ಯ ಸೇರಿದಂತೆ ವಿವಿಧ ಕ್ರೀಡೆ ಮತ್ತು ಸಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕಲ್ಯಾಣ ಡೀನ ಡಾ ಅನೂಪ ಸ್ವಾಗತಿಸಿದರು. ಸಹಾಯಕ ಪ್ರಧ್ಯಪಾಕ ಡಾ. ಮಾರೂಫ ವಂದಿಸಿದರೆ, ವಿದ್ಯಾರ್ಥಿಗಳಾದ ಆಯೇಷಾ ಫಾತಿಮಾ ಮತ್ತು ಸನಾ ಮೆಹಕ ನಿರೂಪಿಸಿದರು.ಸ್ಟೂಡೆಂಟ್ ಕೌನ್ಸಿಲ್ ಬಗ್ಗೆ ಮೆಡಿಕಲ್ ವಿದ್ಯಾರ್ಥಿ ಅಫೆÇ್ರೀಜ್ ಪರಿಚಯ ನೀಡಿದರು.
ಕೆಬಿಎನ್ ವಿವಿಯ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಖಾಜಾ ಬಂದಾನವಾಜ ವಿವಿಯ ಅಕ್ಯಡೆಮಿಕ ಡೀನ ಡಾ ಜಮಾ ಮೂಸ್ವಿ, ಮೆಡಿಕಲ ಡೀನ ಡಾ. ಗುರು ಪ್ರಸಾದ, ಐಕ್ಯೂ ಎಸಿ ನಿರ್ದೇಶಕ ಡಾ ಅಬ್ದುಲ್ ಬಸೀರ, ಇಂಜಿನಿಯರಿಂಗ ಡೀನ ಪೆÇ್ರ ಸುಭಾಸ ಕಮಲ, ಶಿಕ್ಷಣ ಡೀನ ಮೊಹ್ಮದ ಇಕ್ಬಲ, ವಾಣಿಜ್ಯ ಡೀನ ಪೆÇ್ರ ಶ್ರೀನಿವಾಸ ಹಾಗೂ ಎಲ್ಲ ಮುಖ್ಯ ಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
























