Home ಜಿಲ್ಲೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಗತಿ ಪರಿಶೀಲನೆ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಗತಿ ಪರಿಶೀಲನೆ


ಗದಗ,ಸೆ.೨೪: ಅರ್ಹ ಪ್ರತಿಯೊಬ್ಬ ನಾಗರಿಕನೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವುದು ಪ್ರಜಾಪ್ರಭುತ್ವದ ಮೂಲ ಆಶಯವಾಗಿದೆ. ಹೀಗಾಗಿ, ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಅತ್ಯಂತ ನಿಖರವಾಗಿ ಮತ್ತು ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬೇಕು” ಎಂದು ವಾಣಿಜ್ಯ ತೆರಿಗೆಗಳ ಇಲಾಖೆ ಆಯುಕ್ತರು ಹಾಗೂ ಗದಗ ಜಿಲ್ಲಾ ಮತದಾರರ ಪಟ್ಟಿಯ ವೀಕ್ಷಕರಾದ ವಿಪುಲ್ ಬನ್ಸಲ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ ಸಭೆ ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜೊತೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅರ್ಹ ಮತದಾರರ ನೋಂದಣಿ ೧೮ ವರ್ಷ ತುಂಬಿದ ಯುವಕ- ಯುವತಿಯರು ಹಾಗೂ ಇಲ್ಲಿಯವರೆಗೆ ಮತದಾರರ ಪಟ್ಟಿಗೆ ಸೇರ್ಪಡೆಯಾಗದ ಅರ್ಹ ನಾಗರಿಕರ ಹೆಸರುಗಳನ್ನು ಆದ್ಯತೆಯ ಮೇರೆಗೆ ಸೇರ್ಪಡೆಗೊಳಿಸಲು ಕ್ರಮವಹಿಸಬೇಕು ಎಂದು ಹೇಳಿದರು.


ದೋಷರಹಿತ ಮತದಾರರ ಪಟ್ಟಿಯಲ್ಲಿ ಮತದಾರರ ಪಟ್ಟಿಯಲ್ಲಿರುವವರ ಹೆಸರು, ವಿಳಾಸ, ಭಾವಚಿತ್ರ ಮುಂತಾದ ತಿದ್ದುಪಡಿಗಳನ್ನು (ನಮೂನೆ ೮) ರಲ್ಲಿ ತ್ವರಿತವಾಗಿ ಪರಿಶೀಲಿಸಿ ಸರಿಪಡಿಸುವುದು ಹಾಗೂ ಮೃತಪಟ್ಟ ಮತ್ತು ಸ್ಥಳಾಂತರಗೊAಡ ಮತದಾರರ ಹೆಸರುಗಳನ್ನು (ನಮೂನೆ ೭) ನಿಯಮಾನುಸಾರ ತೆಗೆದುಹಾಕುವುದು. ಬಿ.ಎಲ್.ಓ.ಗಳ ಕರ್ತವ್ಯ ಜವಾಬ್ದಾರಿ ಬೂತ್ ಮಟ್ಟದ ಅಧಿಕಾರಿಗಳು (ಃಐಔ) ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕು ಎಂದರು.
ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಮಾತನಾಡಿ ಗದಗ ಜಿಲ್ಲೆಯಲ್ಲಿ ಒಟ್ಟು ೧೨೨ ಗ್ರಾಮ ಪಂಚಾಯಿತಿಗಳಿದ್ದು ವಿಧಾನ ಸಭಾ ಮತ ಕ್ಷೇತ್ರವನ್ನು ನಾಲ್ಕು ವಿಭಾಗಗಳಾಗಿ ಶಿರಹಟ್ಟಿ ೬೫’ ಗದಗ ೬೬’ ರೋಣ ೬೭’ ನರಗುಂದ ೬೮ ವಿಂಗಡಿಸಲಾಗಿದೆ. ಒಟ್ಟು ೩೫೩ ಗ್ರಾಮಗಳು ಮತ್ತು ೨೦೩ ವಾರ್ಡ್ ಗಳಿವೆ. ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳಾದ ಐ.ಎನ್.ಸಿ. ೯೬೭, ಬಿಜೆಪಿ ೯೬೭, ಜೆಡಿಎಸ್ ೬೨, ಸಿಪಿಐಎಮ್ ೩೦ ಬಿಎಲ್‌ಎಗಳನ್ನು ಮಾಡಿವೆ.


ಜಿಲ್ಲಾಧ್ಯಂತ ಚುನಾವಣಾ ಮತಗಟ್ಟೆಗಳು ೯೮೩ ಇವೆ, ಬಿಎಲ್‌ಓ ಗಳು ೯೮೩ ಜನ ಮತ್ತು ಬಿಎಲ್‌ಓ ಸೂಪರ್ವೈಸರ್ಸ್ ೯೭ ಜನ ನೇಮಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್ ಮಾತನಾಡಿ ಜಿಲ್ಲೆಯಲ್ಲಿ ಇದುವರೆಗೂ ಒಟ್ಟು ೯,೦೨,೯೪೭ ಮತದಾರರು ಇದ್ದು ೭,೮೨,೨೩೨ ಡಿಜಿಟಲಿಕರಣಗೊಂಡಿದ್ದು ಪ್ರತಿಶತ ೮೬.೬೩ ಎನುಮರೇಷನ ಫಾರ್ಮ್ ಡಿಜಿಟಲಿಕರಣಗೊಂಡಿವೆ ಎಂದು ಹೇಳಿದರು.


ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ. ಆರ್ ಮಾತನಾಡಿ ಗದಗ ಜಿಲ್ಲೆಯಲ್ಲಿ ಯುವ ಮತದಾರರು ಪಟ್ಟಿಯಲ್ಲಿ ಪುರುಷರು ೨೨೩೨ ಮತ್ತು ಮಹಿಳೆಯರು ೧೯೦೩ ಒಟ್ಟು ೪೧೩೫ ಯುವ ಮತದಾರರು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ವಿಶೇಷ ಅಭಿಯಾನದಲ್ಲಿ ಪಾಲ್ಗೊಂಡು ನೊಂದಾಯಿಸಿದ್ದಾರೆ. ಮತದಾರ ಪಟ್ಟಿ ವಿಶೇಷ ಅಭಿಯಾನದಲ್ಲಿ ಒಟ್ಟು ೮೧೬೬ ಹೊಸಬರು ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಎಸಿ ಗಂಗಪ್ಪ ಎಂ, ಜಿಪಂ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ, ತಹಶೀಲ್ದಾರ ಶ್ರೀನಿವಾಸ ಮೂರ್ತಿ, ಆಹಾರ ಇಲಾಖೆಯ ಉಪನಿರ್ದೇಶಕ ಎಮ್ ಎಸ್ ಪಾಟೀಲ್, ಚುನಾವಣಾ ಶಾಖೆಯ ತಹಶಿಲ್ದಾರ ಸಂತೋಷ ಹಿರೇಮಠ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ.ನಂದಾ ಹಣಬರಹಟ್ಟಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಎಂ ಎಂ ತುಂಬರಮಟ್ಟಿ, ವಾರ್ತಾಧಿಕಾರಿ ವಸಂತ ಮಡ್ಲೂರ ಸೇರಿದಂತೆ ಇತರ ಅಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಜರಿದ್ದರು.