Home ಜಿಲ್ಲೆ ಸಂಭ್ರಮದ ರಥೋತ್ಸವ

ಸಂಭ್ರಮದ ರಥೋತ್ಸವ


ನವಲಗುಂದ,ಸೆ.೨೩: ಇಲ್ಲಿನ ಗಣಪತಿ ರಥೋತ್ಸವವು ಗಣೇಶೋತ್ಸವದ ೯ ನೇ ದಿನವಾದ ಮಂಗಳವಾ ಸಕಲ ವಾದ್ಯಮೇಳ ಸುಮಂಗಲೆಯರ ಆರತಿ ಮೆರವಣೆಗೆಯೊಂದಿಗೆ ಸಾವಿರಾರು ಭಕ್ತರ ಹರ್ಷೋದ್ಘಾರದ ಮಧ್ಯ ವಿಜೃಂಭಣೆಯಿAದ ಜರುಗಿತು.
ಸೆ ೧೪ ರಿಂದ ೨೧ರ ವರೆಗೆ ೯ ದಿನಗಳವರೆಗೆ ದೇವಸ್ಥಾನದ ಪಂಚಲೋಹದ ಮೂರ್ತಿಯ ವಾಹನೋತ್ಸವ ಹಾಗೂ ಮೂಲ ಗಣೇಶ ಮೂರ್ತಿಗೆ ನಿರಂತರ ಅಭಿಷೇಕ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ೯ನೇ ದಿನವಾದ ಮಂಗಳವಾರ ಬೆಳಿಗ್ಗೆ ಶ್ರೀ ಗಣಪತಿಗೆ ವಿಶೇಷ ಅಭಿಷೇಕ.ವರದಾ ಶಂಕರ ಪೂಜೆ ಹಾಗೂ ಕಳಸಾರೋಹಣದ.ಮಹಾ ಪ್ರಸಾದ ಜರುಗಿತು.


ಈ ಎಲ್ಲ ಕಾರ್ಯವು ಗವಿಮಠದ ಶ್ರೀ ಬಸವಲಿಂಗ ಸ್ವಾಮಿಗಳ ನೇತೃತ್ವದಲ್ಲಿ ಜರುಗಿತು.
ದೇವಸ್ಥಾನದ ರಾಜಪುರೋಹಿತರಾದ ಸಿದ್ದಾಂತಿ ಕುಟುಂಬ ಹಾಗೂ ಸಂಜುಸ್ವಾಮಿ ಹಿರೇಮಠ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿಕೊಟ್ಟರು.


ಗಣಪತಿ ಉತ್ಸವ ಸಮಿತಿಯ ಅಣ್ಣಪ್ಪ ಬಾಗಿ.ಸಿದ್ದಲಿಂಗಯ್ಯ, ಹಿರೇಮಠ.,ಈರಣ್ಣ ಚವಡಿ, ಶಂಭು ಶಿದ್ರಾಶೆಟ್ಟರ, ಸಂತೋಷ ನಾವಳ್ಳಿ, ಶರಣಪ್ಪ ಹಕ್ಕರಕಿ, ಸತೀಶ ಜಿನಗಾ, ವಿಜಯ ಬ್ಯಾಳಿ, ಸಿದ್ದು ಗಣಾಚಾರಿ, ಬಸನಗೌಡ ಮುದಿಗೌಡರ, ಆನಂದ ಹೂಗಾರ, ಮಹಾಂತೇಶ ಬಾಗಿ, ವಿನಾಯಕ ಮಟಿಗೇರ, ಆರ್.ಬಿ.ಧನಮಾರು, ವಿಠಲ ಮೆಣಸಗಿ, ಮುದಕಪ್ಪ ಕುಂಬಾರ.ವಿಜಯ ನಾಗಾವಿ, ಮುತ್ತಣ್ಣ ಕುಂಬಾರ.ಉಮೇಶ ಅಂಗಡಿ.ಹುಸೇನ ಆನಿ ಸೇರಿದಂತೆ ಸಾವಿರಾರು ಭಕ್ತರು ಉಪಸ್ಥಿತರಿದ್ದರು.