Home ಜಿಲ್ಲೆ ಪರಿಹಾರ ನೀಡಲು ಆಗ್ರಹ

ಪರಿಹಾರ ನೀಡಲು ಆಗ್ರಹ

ಲಕ್ಷೆ÷್ಮÃಶ್ವರ,ಸೆ೨೩: ತಾಲೂಕಿನಲ್ಲಿ ಮುಂಗಾರಿನ ಮೆಕ್ಕೆಜೋಳ ಹೆಸರು ಶೇಂಗಾ ಹತ್ತಿ ಸೇರಿದಂತೆ ಸುಮಾರು ೩೩೦೬೭ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಬಹುತೇಕ ಬೆಳೆಗಳು ವಿಪರೀತವಾದ ತಾಪಮಾನದಿಂದಾಗಿ ಕಮರಿಹೋಗಿವೆ.


ಭರ್ತಿ ಮಳೆಗಾಲದಲ್ಲಿ ನೆತ್ತಿ ಸುಡುವ ಬಿಸಿಲು ರೈತರ ಎಲ್ಲಾ ಆಸೆಗೂ ತಣ್ಣೀರುರೆಚಿದೆ. ವಿಪರೀತವಾದ ತಾಪಮಾನದಿಂದಾಗಿ ಭೂಮಿ ಬಾಯಿ ತೆರೆದಿದ್ದು ಹಿಂಗಾರಿಯ ಬಿತ್ತನೆ ಆಸೆಯನ್ನು ರೈತರು ಬಿಟ್ಟಿದ್ದಾರೆ.


ಇಂತಹ ಭೀಕರ ಬರಗಾಲದ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಜೀವದೊಡನೆ ಚೆಲ್ಲಾಟವಾಡುತ್ತಿರುವುದನ್ನು ರೈತ ಮುಖಂಡ ಚೆನ್ನಪ್ಪ ಷಡ್ಮುಕಿ ಕಟುವಾಗಿ ಟೀಕಿಸಿ ರೈತರು ಸಾಯುವ ಸ್ಥಿತಿಯಲ್ಲಿರುವಾಗ ಒಬ್ಬರ ಮೇಲೆ ಒಬ್ಬರು ಬೊಟ್ಟು ಮಾಡುತ್ತಾ ಕಾಲ ಕಳೆಯುತ್ತಿರುವುದು ಸಲ್ಲದು ಕೂಡಲೇ ರಾಜ್ಯ ಸರ್ಕಾರ ಪ್ರತಿ ಹೆಕ್ಟರಿಗೆ ೫೦,೦೦೦ ಪರಿಹಾರ ನೀಡಬೇಕು, ಬೆಳೆ ವಿಮೆ ನೀಡಬೇಕು ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.